ಕೀವ್: ಉಕ್ರೇನ್ (Ukraine) ಮೇಲೆ ಕ್ಷಿಪಣಿ ದಾಳಿ ನಡೆಸಿ 600ಕ್ಕೂ ಹೆಚ್ಚು ಸೈನಿಕರ (Troops) ಹತ್ಯೆ ನಡೆದಿದೆ ಎಂದು ರಷ್ಯಾ (Russia) ಸೈನ್ಯ ಹೇಳಿಕೊಂಡಿದೆ. ಆದರೆ ಉಕ್ರೇನ್ ಇದು ಸುಳ್ಳು ನಮ್ಮ ಸೈನಿಕರು ಸತ್ತಿಲ್ಲ ಎಂದು ಹೇಳಿರುವ ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Advertisement
ನಮ್ಮ ಕ್ಷಿಪಣಿಗಳು 1,300ಕ್ಕೂ ಹೆಚ್ಚು ಮಂದಿ ಇದ್ದ ಉಕ್ರೇನಿಯನ್ ಸೈನ್ಯದ ಕ್ರಾಮಾಟೋರ್ಸ್‌ನಲ್ಲಿರುವ ಎರಡು ಬ್ಯಾರಕ್‍ಗಳಿಗೆ ಅಪ್ಪಳಿಸಿದ್ದು, ಅವರಲ್ಲಿ 600 ಮಂದಿ ಉಕ್ರೇನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಹೇಳಿಕೆ ನೀಡಿದ್ದಾರೆ. ಆದರೆ ಈ ಹೇಳಿಕೆ ಸುಳ್ಳು ನಮ್ಮ ಸೈನಿಕರು ಸತ್ತಿಲ್ಲ ಎಂದು ಉಕ್ರೇನ್ ಸೈನ್ಯ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಹೆಚ್.ಡಿ ಕುಮಾರಸ್ವಾಮಿ ಬೆಂಬಲಿಗನಿಗೆ ಟಿಕೆಟ್ ಘೋಷಣೆ ಮಾಡಿದ್ದಕ್ಕೆ ರೇವಣ್ಣ ಆಪ್ತರು ಬಂಡಾಯ
Advertisement
Advertisement
ಕೆಲ ದಿನಗಳ ಹಿಂದೆ ಉಕ್ರೇನ್ ಸೈನ್ಯ ರಷ್ಯಾದ ಸೈನಿಕರ ಬ್ಯಾರಕ್ ಮೇಲೆ ದಾಳಿ ನಡೆಸಿ 89 ಸೈನಿಕರ ಸಾವಿಗೆ ಕಾರಣವಾಗಿತ್ತು. ಇದಕ್ಕೆ ಪ್ರತಿಯಾಗಿ ರಷ್ಯಾ ಸೈನ್ಯ ಉಕ್ರೇನ್ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ಉಕ್ರೇನ್ ಸೈನ್ಯದ ಅಧಿಕಾರಿಗಳು ರಷ್ಯಾ ದಾಳಿ ನಡೆಸಿರುವುದು ನಿಜ ಆದರೆ ನಮ್ಮ ಕಟ್ಟಡ ಸಹಿತ ಕೆಲ ಪ್ರದೇಶಗಳಿಗೆ ಹಾನಿಯಾಗಿದೆ. ಆದರೆ ನಮ್ಮ ಸೈನಿಕರು ಈ ದಾಳಿಯಲ್ಲಿ ಸಾವನ್ನಪ್ಪಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಬಜ್ಜಿ, ಬೋಂಡಾ ತಿನ್ನಲು ಬಂದಿದ್ದ ಮಹಿಳಾ ‘ಪೊಲೀಸ್’ ಮೇಲೆ ದೂರು ದಾಖಲು!
Advertisement
⚡Russian shelling of #Kherson with incendiary ammunition right after Christmas – President of #Ukraine Volodymyr Zelenskyy#UkraineWar #StandWithUkraine #UkraineRussiaWar #StopRussiaNOW #RussiaIsATerroristState pic.twitter.com/SvmFPjxeaa
— Blog about the war for free Ukraine ???????? (@BlogUkraine) January 8, 2023
ಈ ದಾಳಿ ಕುರಿತಾಗಿ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy), ಜಗತ್ತಿನ ಮುಂದೆ ರಷ್ಯಾ ಸುಳ್ಳು ಹೇಳಿಕೆ ನೀಡುವ ಮೂಲಕ ಮತ್ತೆ ತನ್ನತ್ತ ಸೆಳೆಯಲು ನೋಡುತ್ತಿದೆ. ರಷ್ಯಾ ಈ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೇಡಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k