ಕೀವ್: ರಷ್ಯಾ ಮೂರೂ ವಿಭಾಗಗಳಲ್ಲಿ ಶೆಲ್, ರಾಕೆಟ್, ಬಾಂಬ್ ದಾಳಿ ಮಾಡುತ್ತಿರುವ ಕಾರಣ ಉಕ್ರೇನ್‍ನಲ್ಲಿ ಮಹಾವಲಸೆ 5ನೇ ದಿನ ಇಂದು ಕೂಡ ಮುಂದುವರಿದಿದೆ.
Advertisement
ಇಲ್ಲಿವರೆಗೆ 4 ಲಕ್ಷ ಜನ ಉಕ್ರೇನ್ ತೊರೆದಿದ್ದು, ಪರಿಸ್ಥಿತಿ 7 ಲಕ್ಷದವರೆಗೆ ಮುಂದುವರಿಯಲಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ, ಪೋಲೆಂಡ್ -2,81,000, ಹಂಗೇರಿ – 84,586, ಮಾಲ್ಡೋವಾ – 36,398, ಯೂರೋಪ್ – 34,600, ರೊಮೇನಿಯಾ – 32,517, ಸ್ಲೋವಾಕಿಯಾ – 30,000, ಬೆಲಾರಸ್ – 311, ಲ್ಯಾಟಿವಿಯಾ – 163 ಜನ ವಲಸೆ ಹೋಗಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಉಕ್ರೇನ್‍ಗೆ ಭಾರತದಿಂದ ವೈದ್ಯಕೀಯ ನೆರವು: ಅರಿಂದಮ್ ಬಾಗ್ಚಿ
Advertisement
Advertisement
ಅಧಃಪತನ ತಲುಪಿದ ರಷ್ಯಾದ ಆರ್ಥಿಕತೆ:
ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾದ ಆರ್ಥಿಕತೆ ಅಧಃಪತನ ತಲುಪುತ್ತಿದೆ. ರಷ್ಯಾದ ಯುದ್ಧ ನಡೆ ಖಂಡಿಸಿ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್, ಯೂರೋಪಿಯನ್ ಒಕ್ಕೂಟ ಸೇರಿದಂತೆ ಹಲವು ದೇಶಗಳು ವಿವಿಧ ಧಿಗ್ಬಂಧನ ವಿಧಿಸಿರೋದ್ರಿಂದ ರಷ್ಯಾಗೆ ಹೊಡೆತ ಬಿದ್ದಿದೆ. ರುಬೆಲ್ ಮೌಲ್ಯ ದಾಖಲೆಯ ಶೇ.30ರಷ್ಟು ಕುಸಿತಕಂಡಿದ್ದು, ರಫ್ತು ಕಂಪನಿಗಳಿಗೆ ವಿದೇಶಿ ಹಣ ಮಾರಾಟಕ್ಕೆ ಸಿದ್ಧವಾಗುವಂತೆ ಸೂಚನೆ ನೀಡಲಾಗಿದೆ. ಹಣದುಬ್ಬರದ ಏಕಾಏಕಿ ಜಿಗಿತ ಕಂಡಿದ್ದು, ರಷ್ಯಾ ಸೆಂಟ್ರಲ್ ಬ್ಯಾಂಕ್‍ನ ಬಡ್ಡಿದರ ದಿಢೀರ್ ಏರಿಕೆ ಆಗಿದೆ. ಶೇ. 9.5 ರಿಂದ ಶೇ.20 ರಷ್ಟು ಏರಿಕೆ (ಕೀ ಇಂಟರೆಸ್ಟ್ ರೇಟ್) ಏರಿಕೆ ಕಂಡಿದೆ.ಇದನ್ನೂ ಓದಿ: ದಿಢೀರ್ ಭಾರೀ ಪ್ರಮಾಣದಲ್ಲಿ ಬಡ್ಡಿದರ ಏರಿಸಿದ ರಷ್ಯನ್ ಬ್ಯಾಕ್
Advertisement
ಪುಟಿನ್ ನಡೆಗೆ ಕಿಡಿ:
ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ನಡೆಗೆ ಪ್ರಪಂಚದ ಹಲವು ದೇಶಗಳು ಕೆಂಡಾಮಂಡಲವಾಗಿವೆ. ಝೆಕ್ ರಿಪಬ್ಲಿಕ್‍ನ ರಾಜಧಾನಿ ಪ್ರಾಗ್ಯುನಲ್ಲಿ ಬೃಹತ್ ಪ್ರತಿಭಟನೆ ನಡೀತು. ಲಕ್ಷಾಂತರ ಮಂದಿ ಕೂಡಲೇ ಯುದ್ಧವನ್ನು ನಿಲ್ಲಿಸಿ ಎಂದು ಒತ್ತಾಯಿಸಿದ್ರು. ಉಕ್ರೇನ್ ರಾಷ್ಟ್ರಧ್ವಜ ಹಿಡಿದು ಉಕ್ರೇನ್ ಪರ ಘೋಷಣೆ ಕೂಗಿದ್ರು. ಟೋಕಿಯೋದ ಶಿಬುಯಾದಲ್ಲೂ ಪ್ರತಿಭಟನೆ ನಡೆಸಿ ಪುಟಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಇತ್ತ ರಷ್ಯಾದ ಮಾಸ್ಕೋದಲ್ಲೂ ಪುಟಿನ್ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ. ಸಾವಿರಾರು ಮಂದಿ ರಷ್ಯನ್ನರು ಯುದ್ಧ ನಿಲ್ಲಿಸುವಂತೆ ಪುಟಿನ್‍ಗೆ ಒತ್ತಾಯಿಸುತ್ತಿದ್ದಾರೆ. ಬೆಲಾರಸ್‍ನ ಅಪಾರ್ಟ್‍ಮೆಂಟ್‍ಗಳನ್ನೂ ಉಕ್ರೇನ್ ಪರ ಘೋಷಣೆ ಕೇಳಿ ಬಂತು. ಯುದ್ಧವನ್ನು ಖಂಡಿಸಿ ಯುರೋಪಿಯನ್ ದೇಶಗಳಲ್ಲಿರುವ ರಷ್ಯನ್ನರು ತಮ್ಮ ಪಾಸ್‍ಪೋರ್ಟ್‍ಗಳನ್ನು ಸುಟ್ಟು ಆಕ್ರೋಶ ಹೊರಹಾಕಿದ್ರು. ನೆದರ್‌ಲೆಂಡ್ ರಾಜಧಾನಿ ಅಮ್‍ಸ್ಟರ್‍ಡ್ಯಾಮ್‍ನಲ್ಲೂ ಉಕ್ರೇನ್ ಬೆಂಬಲಿಸಿ ಬೃಹತ್ ಪ್ರತಿಭಟನೆ ನಡೀತು. ಯುದ್ಧ ನಿಲ್ಲಿಸುವಂತೆ ಪ್ರತಿಭಟನಾಕಾರರು ಘೋಷಣೆ ಕೂಗಿದ್ರು.