ವಾಷಿಂಗ್ಟನ್: ಉಕ್ರೇನ್‍ನಲ್ಲಿ ಕಳೆದ 18 ದಿನಗಳಿಂದ ಯುದ್ಧ ಮಾಡುತ್ತಿರುವ ರಷ್ಯಾ ತನ್ನ ಪ್ರಾಬಲ್ಯ ಮೆರೆಯುತ್ತಿದೆ. ಈ ನಡುವೆ ಉಕ್ರೇನ್‍ಗೆ ಅಮೆರಿಕ 200 ಮಿಲಿಯನ್ ಡಾಲರ್ (1,496 ಕೋಟಿ ರೂ.) ಆರ್ಥಿಕ ನೆರವನ್ನು ನೀಡಿದೆ.
Advertisement
ರಷ್ಯಾ ವಿರುದ್ಧ ಉಕ್ರೇನ್ ಪ್ರಬಲ ಹೋರಾಟ ಮುಂದುವರಿಸಿದೆ. ರಷ್ಯಾ ದಾಳಿಗೆ ಪ್ರತಿದಾಳಿ ನಡೆಸುತ್ತಿರುವ ಉಕ್ರೇನ್‍ಗೆ ಅಮೆರಿಕ ಬೆಂಬಲ ನೀಡಿದೆ. ಇದೀಗ ವಿಶ್ವದ ದೊಡ್ಡಣ್ಣ ಉಕ್ರೇನ್‍ಗೆ ಆರ್ಥಿಕ ಮತ್ತು ಶಸ್ತಾಸ್ತ್ರ ಪೂರೈಸಲು ಮುಂದಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಂದು ಉಕ್ರೇನ್‍ಗೆ ಆರ್ಥಿಕ ಮತ್ತು ಶಸ್ತಾಸ್ತ್ರಗಳ ಪೂರೈಕೆಗೆ ನೆರವಾಗಲು 200 ಮಿಲಿಯನ್ ಡಾಲರ್ ನೀಡುತ್ತಿದ್ದೇನೆ ಎಂದು ವೈಟ್‍ಹೌಸ್‍ನಲ್ಲಿ ಘೋಷಿಸಿದ್ದಾರೆ.
Advertisement
Advertisement
ಅಮೆರಿಕ 2021ರ ಬಳಿಕ ಈವರೆಗೆ ಒಟ್ಟು 1.2 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ಉಕ್ರೇನ್‍ಗೆ ನೀಡಿದೆ. ಇದೀಗ ರಷ್ಯಾ ಕೀವ್ ನಗರಕ್ಕೆ ಎಂಟ್ರಿ ಕೊಡಲು ಹರಸಾಹಸ ಪಡುತ್ತಿದೆ. ಈ ನಡುವೆ ಉಕ್ರೇನ್‍ನಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿದೆ. ಉಕ್ರೇನ್ ಪ್ರತಿ ಹೋರಾಟದ ನಡುವೆ ಸಂಧಾನಕ್ಕೂ ಸಿದ್ಧವಿರುವುದಾಗಿ ಸ್ಪಷ್ಟ ಪಡಿಸಿದೆ. ಇದನ್ನೂ ಓದಿ: ಉಕ್ರೇನ್‍ನನ್ನು ವಶಪಡಿಸಿಕೊಳ್ಳುವಷ್ಟು ಶಕ್ತಿ ರಷ್ಯಾಕ್ಕಿಲ್ಲ: ಝೆಲೆನ್ಸ್ಕಿ
Advertisement
ರಷ್ಯಾ ಮಿಲಿಟರಿ ಪಡೆ ಉಕ್ರೇನ್ ರಾಜಧಾನಿ ಕೀವ್ ನಗರಕ್ಕೆ 4 ಕಿ.ಮೀ ದೂರದಲ್ಲಿ ಇದ್ದು ಕೀವ್ ವಶಪಡಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಉಕ್ರೇನ್‍ನ ಕೀವ್ ಮತ್ತು ಖಾರ್ಕಿವ್ ನಗರದಲ್ಲಿ ಘನಘೋರ ಯುದ್ಧ ಆಗುತ್ತಿದ್ದು, ರಷ್ಯಾದ ಕ್ಷಿಪಣಿ, ಬಾಂಬ್ ದಾಳಿಗೆ ನಗರಗಳು ಹೊತ್ತಿ ಉರಿಯುತ್ತಿದೆ. ಇನ್ನೊಂದೆಡೆ ಮರಿಯುಪೋಲ್‍ನಲ್ಲಿ ರಷ್ಯಾದ ದಾಳಿಗೆ ಸಿಕ್ಕ ಸಿಕ್ಕಲ್ಲಿ ರಕ್ತಪಾತವಾಗುತ್ತಿದೆ. ಕೀವ್ ನಗರಕ್ಕೆ ಮತ್ತಷ್ಟು ಹತ್ತಿರವಾದ ರಷ್ಯಾ ಸೇನೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರದೊಂದಿಗೆ ಲಗ್ಗೆ ಇಟ್ಟಿದೆ. ಈಗಾಗಲೇ ಎರಡು ಕಡೆಯ ನೂರಾರು ಯುದ್ಧ ಟ್ಯಾಂಕರ್‌ಗಳು ಉಡೀಸ್ ಆಗಿದೆ. ಇದನ್ನೂ ಓದಿ: ಪ್ರಾರ್ಥನಾ ಮಂದಿರದ ಮೇಲೂ ಕ್ಷಿಪಣಿ, ಬಾಂಬ್ ದಾಳಿ – ಕೀವ್ ವಶಕ್ಕೆ ರಷ್ಯಾ ಹರಸಾಹಸ
ಈಗಾಗಲೇ ಯುದ್ಧ ಪ್ರಾರಂಭವಾದಗಿನಿಂದ ಉಕ್ರೇನ್‍ನ 1,300ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಸಾವನ್ನಪ್ಪಿದ್ದಾರೆ. ಯುದ್ಧ ನಿಲ್ಲಿಸಲು ನಾವು ಸಿದ್ಧರಿದ್ದೇವೆ ಪುಟಿನ್ ಜೊತೆ ಮಾತುಕತೆಗೆ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಮಧ್ಯಸ್ಥಿಕೆ ವಹಿಸುವಂತೆ ಝೆಲೆನ್ಸ್ಕಿ ಮನವಿ ಮಾಡಿಕೊಂಡಿದ್ದಾರೆ. ಈ ಎಲ್ಲದರ ನಡುವೆ ಅಮೆರಿಕ, ಉಕ್ರೇನ್‍ಗೆ ಆರ್ಥಿಕ ನೆರವು ನೀಡಿ ಇನ್ನಷ್ಟು ಪುಷ್ಟಿ ನೀಡಿದೆ. ಹಾಗಾಗಿ ಯುದ್ಧ ಇನ್ನಷ್ಟು ಭೀಕರವಾಗುವ ಸಾಧ್ಯತೆ ಹೆಚ್ಚಿದೆ.