ಕೀವ್: ಫೆಬ್ರವರಿ 24 ರಂದು ಉಕ್ರೇನ್‍ನಲ್ಲಿ ರಷ್ಯಾ ನಡೆಸಿದ ಭೀಕರ ಮಿಲಿಟರಿ ದಾಳಿ ಪ್ರಾರಂಭವಾದಾಗಿನಿಂದ 12 ಪತ್ರಕರ್ತರು ಮತ್ತು ಮಾಧ್ಯಮ ವೃತ್ತಿಪರರು ಉಕ್ರೇನ್‍ನಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಉಕ್ರೇನ್‍ನ ಪ್ರಾಸಿಕ್ಯೂಟರ್ ಜನರಲ್ ಐರಿನಾ ವೆನೆಡಿಕ್ಟೋವಾ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯುದ್ಧದಿಂದಾಗಿ ಹಾನಿಗೊಳಗಾದ ರಾಷ್ಟ್ರದ ದುರಾವಸ್ಥೆಯ ಪೋಸ್ಟ್‍ವೊಂದನ್ನು ಹಂಚಿಕೊಂಡ ಅವರು, ಯುದ್ಧದ ಸಮಯದಲ್ಲಿ ಕನಿಷ್ಟ 12 ಮಂದಿ ಪತ್ರಕರ್ತರು ಬಲಿಪಶುಗಳಾಗಿದ್ದಾರೆ. ಇದರೊಂದಿಗೆ ಯುದ್ಧದ ತಿವ್ರತೆಯಿಂದಾಗಿ ಗಂಭೀರ ಗಾಯಗಳನ್ನು ಅನುಭವಿಸುತ್ತಿರುವ ಇತರ 10 ಪತ್ರಕರ್ತರು ಕೂಡಾ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ
Advertisement
Advertisement
ಪ್ರಾಸಿಕ್ಯೂಟರ್ ಜನರಲ್ ಪ್ರಕಾರ, ರಷ್ಯಾದ ಮಿಲಿಟರಿಯು ಒಟ್ಟು 56 ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದು, ಅದರಲ್ಲಿ 15 ಅನ್ಯ ದೇಶದ ಪತ್ರಕರ್ತರಿದ್ದಾರೆ. 15 ರಲ್ಲಿ, ನಾಲ್ವರು ಯುಕೆಯಿಂದ ಬಂದವರು. ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಯುಎಸ್, ಯುನೈಟೆಡ್ ಅರಬ್ ಎಮಿರೇಟ್ಸ್‍ನಿಂದ ತಲಾ ಎರಡು, ಮತ್ತು ಸ್ವಿಟ್ಜಲೆರ್ಂಡ್‍ನ ಒಬ್ಬರು ಎಂದು ವರದಿ ನೀಡಿದ್ದಾರೆ.
Advertisement
ಉಕ್ರೇನ್‍ನಲ್ಲಿ ನಡೆದ ಇತ್ತೀಚಿನ ಘಟನೆಯೊಂದರಲ್ಲಿ, ಉಕ್ರೇನ್‍ನ ಇಬ್ಬರು ಪ್ರಜೆಗಳು ಮತ್ತು ಟರ್ಕಿಶ್ ಟಿಆರ್‍ಟಿ ವಲ್ರ್ಡ್ ಟಿವಿ ಚಾನೆಲ್‍ಗಳ ಕ್ಯಾಮರಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಕಾರು ಶುಕ್ರವಾರ ಯುದ್ಧ ರಹಿತ ನಗರವಾದ ಚೆರ್ನಿಹಿವ್‍ನಿಂದ ಚಿತ್ರೀಕರಣವನ್ನು ಸ್ಥಳಾಂತರಿಸುವ ಸಮಯದಲ್ಲಿ ಗುಂಡಿನ ದಾಳಿಗೆ ಒಳಗಾಯಿತು. ಈ ವೇಳೆ ವರದಿಗಾರ ಆಂಡ್ರಿ ತ್ಸಾಪ್ಲಿಯೆಂಕೊ ದಾಳಿಗೆ ಒಳಗಾಗಿದ್ದು, ಅದೃಷ್ಟವಶಾತ್ ಚಿಕ್ಕ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
Advertisement
ರಷ್ಯಾದ ಪಡೆಗಳು ಯುದ್ಧದ ಕಾನೂನುಗಳನ್ನು ಮರೆತಿದ್ದು, ಈಗಾಗಲೇ ಶೆಲ್ ದಾಳಿ ನಡೆಸಿ ಅನೇಕ ಟಿವಿ ಟವರ್‍ಗಳು ಮತ್ತು ಟಿವಿ ಮತ್ತು ರೇಡಿಯೊ ಕಂಪನಿಗಳನ್ನು ಧ್ವಂಸ ಮಾಡಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಮಾಸ್ ಮೀಡಿಯಾದ ಸಹಕಾರದೊಂದಿಗೆ ಪ್ರಾಸಿಕ್ಯೂಟರ್ ಕಚೇರಿಯು ಈಗಾಗಲೇ ಪತ್ರಕರ್ತರ ವಿರುದ್ಧದ ಅಪರಾಧಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ವೆನೆಡಿಕ್ಟೋವಾ ಹೇಳಿದರು.
ಅವರ ಮೇಲ್ವಿಚಾರಣೆಯ ಪ್ರಕಾರ, ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣದ ಆರಂಭದಿಂದಲೂ ಉಕ್ರೇನ್‍ನಲ್ಲಿ ಪತ್ರಕರ್ತರು ಮತ್ತು ಮಾಧ್ಯಮಗಳ ವಿರುದ್ಧ 148 ಕಾನೂನುಬಾಹಿರ ಕ್ರಮಗಳನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ತರಬೇತಿ ನಿರತ ಐಆರ್‌ಬಿ ಪೊಲೀಸ್ ಹೃದಯಾಘಾತದಿಂದ ಸಾವು
ಫೆಬ್ರವರಿ 24 ರಂದು ರಷ್ಯಾ ಉಕ್ರೇನಿಯನ್ ನೆಲದಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಪ್ರಾರಂಭಗೊಂಡಿದೆ. ಇಲ್ಲಿಯವರೆಗೆ, ವಿಶ್ವಸಂಸ್ಥೆಯ ವರದಿಯ ಪ್ರಕಾರ 6.5 ಮಿಲಿಯನ್‍ಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಹೆಚ್ಚುವರಿಯಾಗಿ, ಸಂಘರ್ಷ ಪ್ರಾರಂಭವಾದಾಗಿನಿಂದ ಉಕ್ರೇನ್‍ನಲ್ಲಿ ಕನಿಷ್ಠ 816 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿ ನೀಡಿದೆ.