ನವದೆಹಲಿ: ರಷ್ಯಾದ ಮಿಲಿಟರಿ ದಾಳಿಯಿಂದಾಗಿ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಏರ್ ಇಂಡಿಯಾ ಶುಕ್ರವಾರ ರೋಮೇನಿಯಾ ರಾಜಧಾನಿ ಬುಕಾರೆಸ್ಟ್‍ಗೆ 2 ವಿಮಾನಗಳನ್ನು ಕಳುಹಿಸಲು ಯೋಜಿಸಿದೆ.
ಉಕ್ರೇನ್‍ನ ವಾಯುಪ್ರದೇಶವನ್ನು ಗುರುವಾರ ಮುಚ್ಚಲಾಗಿದೆ. ಹೀಗಾಗಿ ಉಕ್ರೇನ್‍ನಲ್ಲಿ ಭಾರತಿಯ ಪ್ರಯಾಣಿಕರು ಮಾತ್ರವಲ್ಲದೇ ಇತರ ದೇಶದ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಇದನ್ನೂ ಓದಿ: ನಾವು ಮಾತುಕತೆಗೆ ಸಿದ್ಧರಿದ್ದೇವೆ ಎಂದ ರಷ್ಯಾ!
Advertisement
Advertisement
ಪ್ರಯಾಣಿಕರು ರಸ್ತೆಯ ಮೂಲಕ ಉಕ್ರೇನ್-ರೊಮೇನಿಯಾ ಗಡಿ ತಲುಪಿದರೆ, ಅಲ್ಲಿಂದ ಭಾರತ ಸರ್ಕಾರ ಅಧಿಕಾರಿಗಳು ಅವರನ್ನು ಬುಕಾರೆಸ್ಟ್‍ಗೆ ಕರೆದೊಯ್ಯಲಿದ್ದಾರೆ. ಬಳಿಕ ವಿಮಾನದ ಮೂಲಕ ಭಾರತಕ್ಕೆ ಹಿಂದಿರುಗಿಸುವಂತೆ ಏರ್ ಇಂಡಿಯಾ ಯೋಜಿಸಿದೆ. ಶನಿವಾರ 2 ಏರ್ ಇಂಡಿಯಾ ವಿಮಾನಗಳು ಬುಕಾರೆಸ್ಟ್‍ನಿಂದ ಹೊರಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 20 ಸಾವಿರ ಭಾರತೀಯರು ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದಾರೆ.
Advertisement
Advertisement
ಉಕ್ರೇನ್ ರಾಜಧಾನಿ ಕೀವ್‍ನಿಂದ ರೊಮೇನಿಯಾ ಗಡಿಗೆ ಸುಮಾರು 600 ಕಿ.ಮೀ ದೂರ ಇದೆ. ರಸ್ತೆ ಮಾರ್ಗವಾಗಿ ಕೀವ್‍ನಿಂದ ರೊಮೇನಿಯಾ ಗಡಿ ತಲುಪಲು 8 ರಿಂದ 11 ಗಂಟೆ ತಗುಲಬಹುದು. ಉಕ್ರೇನ್-ರೊಮೇನಿಯಾ ಗಡಿಯಿಂದ ಬುಕಾರೆಸ್ಟ್ 500 ಕಿ.ಮೀ ಅಂತರದಲ್ಲಿದೆ. ಇದರ ಪ್ರಯಾಣಕ್ಕೆ ಸುಮಾರು 7 ರಿಂದ 9 ಗಂಟೆ ತಗುಲಬಹುದು. ಇದನ್ನೂ ಓದಿ: Russia-Ukraine War: ಉಕ್ರೇನ್ ಯೂನಿಫಾರ್ಮ್ ಧರಿಸಿ ರಷ್ಯಾ ಸೈನಿಕರ ಎಂಟ್ರಿ – ಸಿಕ್ಕ ಸಿಕ್ಕಲ್ಲಿ ರಕ್ತಪಾತ
ಈಗಾಗಲೇ ಉಕ್ರೇನ್‍ನಲ್ಲಿ ರಷ್ಯಾ ಬಾಂಬುಗಳ ಸುರಿಮಳೆ ಹರಿಸಿದ್ದು, ನೂರಾರು ಸೈನಿಕರು ಸಾವನ್ನಪ್ಪಿದ್ದಾರೆ. ಹಲವು ದೇಶಗಳು ರಷ್ಯಾಗೆ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ್ದರೂ ದಾಳಿ ನಿಲ್ಲುವಂತೆ ಕಾಣಿಸುತ್ತಿಲ್ಲ.