InternationalLatestLeading NewsMain Post

ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದ ಉಕ್ರೇನ್ ಮೇಲೆ ರಷ್ಯಾ ದಾಳಿ – 22 ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ

ಕೀವ್: ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದ ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿಸಿದೆ. ಉಕ್ರೇನ್‍ನ ರೈಲ್ವೇ ನಿಲ್ದಾಣದ ಮೇಲೆ ನಡೆದ ರಾಕೆಟ್ ದಾಳಿಗೆ 22ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ಕಳೆದ 6 ತಿಂಗಳ ಹಿಂದೆ ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ ಈಗಾಗಲೇ ಬಹುತೇಕ ಪ್ರದೇಶಗಳನ್ನು ವಶಕ್ಕೆ ಪಡೆದಿದೆ. ಉಕ್ರೇನ್‍ನ ಪ್ರತಿಹೋರಾಟದ ನಡುವೆ ಕೀವ್ ಸೇರಿದಂತೆ ಕೆಲ ನಗರಗಳು ಉಳಿದುಕೊಂಡಿದ್ದು, ರಷ್ಯಾ ಸೈನ್ಯ ಆಗಾಗ ಸಣ್ಣಪುಟ್ಟ ದಾಳಿ ಮಾಡುತ್ತಿವೆ. ಇದನ್ನೂ ಓದಿ: ಆತ್ಮಹತ್ಯಾ ದಾಳಿಗೆ ಪಾಕ್ ಸೇನೆ 30 ಸಾವಿರ ನೀಡಿದೆ: ಸತ್ಯ ಬಾಯ್ಬಿಟ್ಟ ಬಂಧಿತ ಟೆರರಿಸ್ಟ್

ಸೋವಿಯತ್ ಅಳ್ವಿಕೆಯಿಂದ ಹೊರಬಂದು ಸ್ವಾತಂತ್ರ್ಯ ಪಡೆದ ಉಕ್ರೇನ್‍ಗೆ ನಿನ್ನೆ ಸ್ವಾತಂತ್ರೋತ್ಸವದ ಸಂಭ್ರಮ. ಈ ಸಂಭ್ರಮದಲ್ಲಿದ್ದಾಗ ರೈಲ್ವೇ ನಿಲ್ದಾಣದ ಮೇಲೆ ರಷ್ಯಾ ಸೈನ್ಯ ದಾಳಿ ನಡೆಸಿ 22ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತಕ್ಕೆ 9 ಮಂದಿ ಬಲಿ

ಚಾಪ್ಲಿನ್ ಎಂಬ ಸಣ್ಣ ನಗರದ ರೈಲ್ವೇ ನಿಲ್ದಾಣದ ಮೇಲೆ ರಷ್ಯಾ ರಾಕೆಟ್ ದಾಳಿ ನಡೆಸಿದೆ. ಚಾಪ್ಲಿನ್ ದಾಳಿಯ ಹೊಣೆಯನ್ನು ರಷ್ಯಾ ಹೊರಬೇಕಿದೆ. ನಮ್ಮ ಜನರ ರಕ್ಷಣೆಗೆ ನಾವು ಸದಾ ಸಿದ್ಧರಿದ್ದೇವೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ. ಆ ಬಳಿಕ ಉಕ್ರೇನ್ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ರದ್ದುಪಡಿಸಿದೆ.

Live Tv

Leave a Reply

Your email address will not be published.

Back to top button