ಕೀವ್: ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ ಇಂದಿಗೆ 15 ದಿನ. ಇಲ್ಲಿಯವರೆಗೆ ರಷ್ಯಾದ 12,000 ಸೈನಿಕರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಶಸ್ತ್ರಾಸ್ತ್ರ ಪಡೆ ಗುರುವಾರ ತಿಳಿಸಿದೆ.
ಫೆಬ್ರವರಿ 24 ರಂದು ಉಕ್ರೇನ್-ರಷ್ಯಾ ಯುದ್ಧ ಪ್ರಾರಂಭವಾಗಿತ್ತು. ಅಂದಿನಿಂದ ರಷ್ಯಾದ ಯಾವೆಲ್ಲಾ ಮಿಲಿಟರಿ ಸವಲತ್ತುಗಳನ್ನು ಉಕ್ರೇನ್ ನಾಶಪಡಿಸಿದೆ ಎಂದು ಕೀವ್ ಇಂಡಿಪೆಂಡೆಂಟ್ ತಿಳಿಸಿದೆ.
These are the estimates of Russia’s losses as of March 10, according to the Armed Forces of Ukraine. pic.twitter.com/7BUHJDJ9eJ
— The Kyiv Independent (@KyivIndependent) March 10, 2022
12,000 ಕ್ಕೂ ಹೆಚ್ಚು ಸೈನಿಕರು, 49 ವಿಮಾನಗಳು, 81 ಹೆಲಿಕಾಪ್ಟರ್‌ಗಳು, 335 ಟ್ಯಾಂಕ್‌ಗಳು, 123 ಫಿರಂಗಿ ಹಾಗೂ 2 ದೋಣಿಗಳು, 1,105 ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳು, 56 ಬಹು ರಾಕೆಟ್ ಉಡಾವಣಾ ಯಂತ್ರಗಳು(ರಾಕೆಟ್ ಲಾಂಚಿಂಗ್ ಸಿಸ್ಟಮ್), 526 ವಾಹನಗಳು ಹಾಗೂ 60 ಇಂಧನ ಟ್ಯಾಂಕ್‌ಗಳು, 29 ವಿಮಾನ ವಿರೋಧಿ ಶಸ್ತ್ರಾಸ್ತ್ರಗಳು, 7 ಮಾನವರಹಿತ ವಿಮಾನ(ಡ್ರೋನ್)ಗಳನ್ನು ನಾಶಪಡಿಸಿರುವುದಾಗಿ ತಿಳಿಸಿದೆ. ಇದನ್ನೂ ಓದಿ: ಝೆಲೆನ್ಸ್ಕಿ ನಕಲಿ ಟೆಲಿಗ್ರಾಮ್ ಖಾತೆ – ಉಕ್ರೇನ್ ಯೋಧರು ಶರಣಾಗುವಂತೆ ಸುಳ್ಳು ಮಾಹಿತಿ ಹಂಚಿಕೆ
20 ಲಕ್ಷ ಉಕ್ರೇನಿಯನ್ನರು ಪಲಾಯನ:
ಯುದ್ಧ ಪೀಡಿತ ಉಕ್ರೇನ್‌ನಿಂದ 20 ಲಕ್ಷ ಜನರು ದೇಶದಿಂದ ಪಲಾಯನಗೈದಿದ್ದಾರೆ. ಅದರಲ್ಲಿ ಶೇ.50 ಪಾಲು ಮಕ್ಕಳೇ ಸೇರಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಉಕ್ರೇನ್ ತೊರೆದಿರುವ ಪ್ರಜೆಗಳಲ್ಲಿ ಹೆಚ್ಚಿನವರು ಪೋಲೆಂಡ್‌ಗೆ ಹೋಗಿದ್ದಾರೆ. ಸುಮಾರು 12 ಲಕ್ಷ ಜನರು ಪೋಲೆಂಡ್, 1.91 ಲಕ್ಷ ಜನರು ಹಂಗೇರಿ, 1.40 ಲಕ್ಷ ಜನರು ಸ್ಲೋವಾಕಿಯಾ, 99 ಸಾವಿರ ಜನರು ರಷ್ಯಾ ಹಾಗೂ 82 ಸಾವಿರ ಜನರು ಮಾಲ್ಡಿವ್ಸ್‌ಗೆ ಪಲಾಯನ ಮಾಡಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಇಳಿಕೆ