ಮುಂಬೈ: ರಷ್ಯಾ-ಉಕ್ರೇನ್‍ನ ಸಂಭವನೀಯ ಯುದ್ಧದಿಂದ ಬಿಯರ್ ಕಂಪನಿಗಳಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇದೆ. ಬೇಸಿಗೆ ಕಾಲ ಪ್ರಾರಂಭವಾದಂತೆ ರಷ್ಯಾ-ಉಕ್ರೇನ್ ಗಡಿಯಲ್ಲಿ ಕಲಹ ಎದುರಾಗಿದ್ದು, ಇದರಿಂದ ಬಿಯರ್ ಕಂಪನಿಗಳಿಗೆ ಸಮಸ್ಯೆಯಾಗಲಿದೆ.
ಬಿಯರ್ ಉತ್ಪಾದನೆಗೆ ಮುಖ್ಯವಾಗಿ ಬಳಕೆಯಾಗುವುದು ಬಾರ್ಲಿ. ಪ್ರಪಂಚದಲ್ಲೇ ಅತೀ ಹೆಚ್ಚು ಬಾರ್ಲಿ ಬೆಳೆಯುವ 5 ರಾಷ್ಟ್ರಗಳಲ್ಲಿ ಉಕ್ರೇನ್ ಕೂಡಾ ಒಂದು. ಈಗಾಗಲೇ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲು ಸಜ್ಜಾಗಿ ನಿಂತಿದೆ. ಹೀಗಾಗಿ ಇತರ ದೇಶಗಳಿಗೆ ಉಕ್ರೇನ್‍ನಿಂದ ಬಾರ್ಲಿ ಸರಬರಾಜು ಕಷ್ಟಕರವಾಗಿದೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪೌಲ್‍ಗೆ ಭಾರತೀಯ ಹೈ ಕಮಿಷನ್ ಗೌರವ
Advertisement
Advertisement
ಕೋವಿಡ್ ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದಲೇ ಮದ್ಯ ಮಾರುಕಟ್ಟೆಗೆ ಹೊಡೆತ ಬಿದ್ದಿತ್ತು. ಈಗ ಲಾಕ್‍ಡೌನ್ ತೆರವಾಗಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಮದ್ಯ ಉದ್ಯಮ ಚೇತರಿಕೆ ಕಾಣಲು ಆರಂಭವಾಗಿತ್ತು. ಈ ಮಧ್ಯೆ ದಿಢೀರ್ ಆಗಿ ಸೃಷ್ಟಿಯಾಗಿರುವ ರಷ್ಯಾ-ಉಕ್ರೇನ್ ಕಲಹದಿಂದ ಮತ್ತೆ ಮದ್ಯ ಮಾರುಕಟ್ಟೆಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಇದನ್ನೂ ಓದಿ: 17,500 ಅಡಿ ಎತ್ತರದಲ್ಲಿ 55ರ ಐಟಿಬಿಪಿ ಅಧಿಕಾರಿಯ 65 ಪುಶ್ ಅಪ್ ವಿಡಿಯೋ ವೈರಲ್
Advertisement
ಮಾರ್ಚ್ ಹಾಗೂ ಜುಲೈ ನಡುವಿನ ಅವಧಿ ವಾರ್ಷಿಕ ಬಿಯರ್ ಮಾರಾಟದ ಶೇ.40-50 ಪಾಲನ್ನು ಹೊಂದಿರುತ್ತದೆ. ಇದೀಗ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಉಕ್ರೇನ್‍ನಿಂದ ಸರಬರಾಜಾಗುವ ಬಾರ್ಲಿಗೆ ತಡೆಯಾಗಿದ್ದು, ಬಿಯರ್ ಉತ್ಪಾದನೆಯೂ ಕುಂಠಿತವಾಗಲಿದೆ. ಇದರಿಂದ ಬಿಯರ್ ದರ ಹೆಚ್ಚಾಗುವ ಸಾಧ್ಯತೆಯೂ ಇದೆ.