ನವದೆಹಲಿ: ಒಂದು ಷರತ್ತನ್ನು ವಿಧಿಸಿದ ಭಾರತಕ್ಕೆ ಇನ್ನಷ್ಟು ರಿಯಾಯಿತಿ ದರದಲ್ಲಿ ತೈಲವನ್ನು(Crude Oil) ನೀಡಲು ನಾನು ಸಿದ್ಧ ಎಂದು ರಷ್ಯಾ(Russia) ಹೇಳಿದೆ.
ರಷ್ಯಾ ಭಾರೀ ರಿಯಾಯಿತಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರತಕ್ಕೆ(India) ನೀಡಲು ಮುಂದಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ಭಾರತ ಜಿ7(G7) ರಾಷ್ಟ್ರದ ಪ್ರಸ್ತಾಪಗಳನ್ನು ಬೆಂಬಲಿಸಬಾರದು ಎಂದು ರಷ್ಯಾ ಷರತ್ತು ವಿಧಿಸಿದೆ.
Advertisement
ಉಕ್ರೇನ್ ಮೇಲೆ ಯುದ್ಧ ಸಾರಿದ ಬಳಿಕ ರಷ್ಯಾದ ಮೇಲೆ ಯುರೋಪ್ ಮತ್ತು ಅಮೆರಿಕ ಹಲವು ಆರ್ಥಿಕ ನಿರ್ಬಂಧ ವಿಧಿಸಿದೆ. ಆರ್ಥಿಕ ನಿರ್ಬಂಧ ವಿಧಿಸಿದರೂ ರಷ್ಯಾ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರದ ಪರಿಣಾಮ ಜಿ7 ರಾಷ್ಟ್ರಗಳು ಮತ್ತೊಂದು ಆರ್ಥಿಕ ಸಮರಕ್ಕೆ ಮುಂದಾಗಿವೆ. ರಷ್ಯಾದ ತೈಲ ಆಮದಿನ ಮೆಲೆ ಬೆಲೆ ಮಿತಿಯನ್ನು ಜಾರಿಗೊಳಿಸಲು ಜಿ7 ರಾಷ್ಟ್ರಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ಮುಂದಾಗಿದೆ.
Advertisement
Advertisement
ಯುದ್ಧ ಸಾರಿದ ಬಳಿಕ ಭಾರತ ಮತ್ತು ಚೀನಾ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ರಷ್ಯಾದಿಂದ ಆಮದು ಮಾಡುತ್ತಿದೆ. ಈ ಕಾರಣಕ್ಕೆ ಜಿ7 ರಾಷ್ಟ್ರಗಳು ಒತ್ತಡಕ್ಕೆ ಭಾರತ ಮಣಿಯದೇ ಇದ್ದರೆ ಮತ್ತಷ್ಟು ಅಗ್ಗದ ದರದಲ್ಲಿ ತೈಲ ಪೂರೈಸುವುದಾಗಿ ರಷ್ಯಾ ಹೇಳಿದೆ. ಈ ಬಗ್ಗೆ ಭಾರತ ಇಲ್ಲಿಯವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮಾತುಕತೆ ನಡೆಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೊಹ್ಲಿಗೆ ಈ ಸಮಯ ಕಳೆದು ಹೋಗುತ್ತದೆ ಎಂದಿದ್ದ ಬಾಬರ್‌ಗೆ ಟಾಂಗ್ – ಈ ಸಮಯ ಕಳೆದು ಹೋಗಲ್ಲ ಎಂದ ಫ್ಯಾನ್ಸ್
Advertisement
ಎಷ್ಟು ಅಗ್ಗದಲ್ಲಿ ಸಿಕ್ಕಿತ್ತು?
ರಷ್ಯಾ ಭಾರತಕ್ಕೆ ಮೇ ತಿಂಗಳಿನಲ್ಲಿ ಸರಾಸರಿ ತೈಲ ಬೆಲೆ 110 ಡಾಲರ್(8,751 ರೂ.) ಇದ್ದಾಗ 16 ಡಾಲರ್‌ನಷ್ಟು(1,272 ರೂ.) ರಿಯಾಯಿತಿ ದರದಲ್ಲಿ ತೈಲವನ್ನು ಪೂರೈಸಿತ್ತು. ಬಳಿಕ ಜೂನ್ ತಿಂಗಳಿನಲ್ಲೂ ಸರಾಸರಿ ತೈಲ ಬೆಲೆ 116 ಡಾಲರ್(9,226 ರೂ.) ಇದ್ದಾಗ 14 ಡಾಲರ್(1,193 ರೂ.) ವರೆಗಿನ ರಿಯಾಯಿತಿಯನ್ನು ನೀಡಿತ್ತು. ಇದೀಗ ರಷ್ಯಾ ಭಾರತಕ್ಕೆ ಮತ್ತೆ ಶೇ.27 ರಷ್ಟು ರಿಯಾಯಿತಿ ದರದಲ್ಲಿ ತೈಲ ನೀಡಲು ಮುಂದಾಗಿದೆ.
ಭಾರತದ ತೈಲ ಅಗತ್ಯದಲ್ಲಿ ರಷ್ಯಾ ಶೇ.18.2 ರಷ್ಟು ತೈಲವನ್ನು ಪೂರೈಕೆ ಮಾಡುತ್ತದೆ. ಈ ಮೂಲಕ ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಕೆ ಮಾಡುವ ದೇಶಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಸೌದಿ ಅರೇಬಿಯಾ ಶೇ.20.8 ರಷ್ಟು ತೈಲ ಪೂರೈಕೆ ಮಾಡಿದರೆ, ಇರಾಕ್ ಶೇ.20.6 ರಷ್ಟು ನೀಡುತ್ತದೆ. ಈ ಮೂಲಕ ಈ ಎರಡು ರಾಷ್ಟ್ರಗಳು ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಕೆ ಮಾಡುವ ದೇಶಗಳ ಪಟ್ಟಿಯಲ್ಲಿ ಮೊದಲ ಹಾಗೂ 2ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ರಾಜಕಾಲುವೆ ಅತಿಕ್ರಮ ತೆರವು ಕಾರ್ಯಾಚರಣೆ – ಭೇದಭಾವದ ಪ್ರಶ್ನೆಯೇ ಇಲ್ಲವೆಂದ ಸಿಎಂ