CricketLatestMain PostSports

ಕೊಹ್ಲಿಗೆ ಈ ಸಮಯ ಕಳೆದು ಹೋಗುತ್ತದೆ ಎಂದಿದ್ದ ಬಾಬರ್‌ಗೆ ಟಾಂಗ್ – ಈ ಸಮಯ ಕಳೆದು ಹೋಗಲ್ಲ ಎಂದ ಫ್ಯಾನ್ಸ್

ದುಬೈ: ಏಷ್ಯಾಕಪ್ ಫೈನಲ್ (Asia Cup Final) ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತು ಮುಖಭಂಗ ಅನುಭವಿಸಿದ ಪಾಕಿಸ್ತಾನ (Pakistan) ತಂಡದ ನಾಯಕ ಬಾಬರ್ ಅಜಮ್ (Babar Azam) ಇದೀಗ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ಹಿಂದೆ ರನ್ ಬರ ಅನುಭವಿಸುತ್ತಿದ್ದ ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿಗೆ (Virat Kohli) ಟ್ವೀಟ್ ಮೂಲಕ ಸಂದೇಶ ರವಾನಿಸಿದ್ದ ಬಾಬರ್ ಅಜಮ್‍ಗೆ ಕೊಹ್ಲಿ ಅಭಿಮಾನಿಗಳು ಇದೀಗ ಟಾಂಗ್ ನೀಡಿದ್ದಾರೆ.

ಈ ಹಿಂದೆ ರನ್ ಬರ ಅನುಭವಿಸುತ್ತಿದ್ದ ವಿರಾಟ್ ಕೊಹ್ಲಿಗೆ ವಿಶೇಷ ಸಂದೇಶದ ಮೂಲಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಬೆಂಬಲಕ್ಕೆ ನಿಂತಿದ್ದರು. ಟ್ವಿಟ್ಟರ್‌ನಲ್ಲಿ ಕೊಹ್ಲಿ ಜೊತೆಗಿರುವ ಫೋಟೋ ಹಂಚಿಕೊಂಡು ಬಾಬರ್ ಅಜಮ್, ಈ ಸಮಯ ಕಳೆದು ಹೋಗುತ್ತದೆ. ದೃಢವಾಗಿರಿ ಎಂದು ಟ್ವೀಟ್ ಮಾಡಿ ಕೊಹ್ಲಿಗೆ ಬೆಂಬಲ ನೀಡಿದ್ದರು. ಇದನ್ನೂ ಓದಿ: ಈ ಸಮಯ ಕಳೆದು ಹೋಗುತ್ತದೆ ಕೊಹ್ಲಿ ಬೆಂಬಲಕ್ಕೆ ನಿಂತ ಬಾಬರ್ ಅಜಮ್

ಇದೀಗ ಬಾಬರ್ ಅಜಮ್ ಕೂಡ ರನ್ ಬರ ಅನುಭವಿಸುತ್ತಿದ್ದಾರೆ. ಏಷ್ಯಾಕಪ್‍ನಲ್ಲಿ ಆಡಿದ ಒಟ್ಟು 6 ಪಂದ್ಯಗಳಿಂದ 68 ರನ್ ಬಾರಿಸಿದ್ದಾರೆ. ಏಷ್ಯಾಕಪ್‍ನಲ್ಲಿ 30 ರನ್ (29 ಎಸೆತ) ಹೆಚ್ಚಿನ ಗಳಿಕೆಯಾಗಿದೆ. ಹಾಗಾಗಿ ಇದೀಗ ಟ್ರೋಲ್‌ಗೆ ಗುರಿಯಾಗಿದ್ದು, ಕೊಹ್ಲಿ ಅಭಿಮಾನಿಗಳು ಈ ಸಮಯ ಕಳೆದು ಹೋಗಲ್ಲ ಎಂದು ಟ್ವೀಟ್ ಮಾಡಿ ಕಾಲೆಳೆದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸೋಲು – ಸ್ಟೇಡಿಯಂನಲ್ಲಿ ಕಣ್ಣೀರಿಟ್ಟ ಕೊಹ್ಲಿಯ ಪಾಕ್ ಅಭಿಮಾನಿ

ಏಷ್ಯಾಕಪ್‍ನ ಸೂಪರ್ ಫೋರ್ ಮತ್ತು ಫೈನಲ್ ಪಂದ್ಯದಲ್ಲಿ ಸತತವಾಗಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಸೋಲು ಕಾಣಲು ಬಾಬರ್ ಅಜಮ್ ಬ್ಯಾಟಿಂಗ್ ಕೂಡ ಪ್ರಮುಖ ಕಾರಣ. ಹಲವು ವರ್ಷಗಳಿಂದ ಪ್ರತಿ ಪಂದ್ಯದಲ್ಲೂ ಮಿಂಚುತ್ತಿದ್ದ ಬಾಬರ್ ಏಷ್ಯಾಕಪ್‍ನಲ್ಲಿ ರನ್ ಗಳಿಸಲು ಪರದಾಡಿದರು. ಇದು ಪಾಕಿಸ್ತಾನ ದಿಢೀರ್ ಕುಸಿತಕ್ಕೆ ಕಾರಣವಾಗಿದೆ. ಹಾಗಾಗಿ ಮುಂದಿನ ಟಿ20 ವಿಶ್ವಕಪ್‍ಗೂ ಮುನ್ನ ಬಾಬರ್ ಫಾರ್ಮ್ ಕಂಡುಕೊಳ್ಳಬೇಕಾಗಿದೆ.

Live Tv

Leave a Reply

Your email address will not be published.

Back to top button