ನವದೆಹಲಿ: ರಷ್ಯಾ (Russia) ಇದೀಗ ಭಾರತದ (India) 2ನೇ ಅತಿ ದೊಡ್ಡ ಕಚ್ಚಾ ತೈಲ (Crude Oil) ಪೂರೈಕೆದಾರನಾಗಿ ಹೊರಹೊಮ್ಮಿದೆ. ಕಳೆದ ತಿಂಗಳು ಭಾರತ ರಷ್ಯಾದಿಂದ ಆಮದು ಮಾಡಿದ ತೈಲ ಶೇ.18.5 ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ.
ಭಾರತ ಜೂನ್‌ನಲ್ಲಿ ರಷ್ಯಾದಿಂದ ದಿನಕ್ಕೆ 9,33,000 ಬ್ಯಾರೆಲ್‌ನಷ್ಟು ತೈಲವನ್ನು ಆಮದು ಮಾಡಿಕೊಂಡಿತ್ತು. ಬಳಿಕ ಕಚ್ಚಾ ತೈಲದ ಆಮದು 2 ತಿಂಗಳು ಕುಸಿದ ಬಳಿಕ ಸೆಪ್ಟೆಂಬರ್‌ನಲ್ಲಿ ದಿನಕ್ಕೆ 8,79,000 ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಂಡಿದೆ. ಈ ಮೂಲಕ ಇದೀಗ ಭಾರತಕ್ಕೆ ಸೌದಿ ಅರೇಬಿಯಾದ ಬಳಿಕ ರಷ್ಯಾ ಅತಿ ಹೆಚ್ಚು ತೈಲ ರಫ್ತು ಮಾಡುವ ದೇಶ ಎನಿಸಿಕೊಂಡಿದೆ.
Advertisement
Advertisement
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುವುದಕ್ಕೂ ಮೊದಲು ಭಾರತಕ್ಕೆ ಕೇವಲ ಶೇ.1 ರಷ್ಟು ತೈಲವನ್ನು ಪೂರೈಕೆ ಮಾಡುತ್ತಿತ್ತು. ಯುದ್ಧ ಪ್ರಾರಂಭವಾಗುತ್ತಿದ್ದಂತೆಯೇ ಕಚ್ಚಾ ತೈಲವನ್ನು ಭಾರೀ ರಿಯಾಯಿತಿಯಲ್ಲಿ ನೀಡಲು ಆರಂಭಿಸಿದ ರಷ್ಯಾದಿಂದ ಭಾರತ ಭಾರೀ ಪ್ರಮಾಣದಲ್ಲಿ ಆಮದನ್ನು ಹೆಚ್ಚಿಸಿದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಹಿಮಪಾತ – 20 ಮಂದಿ ನಾಪತ್ತೆ
Advertisement
Advertisement
ತೈಲ ಆಮದು ಮಾಡುವ ದೇಶಗಳ ಪೈಕಿ ಭಾರತ ವಿಶ್ವದಲ್ಲೇ 3ನೇ ಸ್ಥಾನದಲ್ಲಿದೆ. ಭಾರತ ರಷ್ಯಾದಿಂದ ಆಮದನ್ನು ಹೆಚ್ಚಿಸುತ್ತಿದ್ದಂತೆ ಅಮೆರಿಕ, ಇರಾಕ್ ಹಾಗೂ ಸಂಯುಕ್ತ ಅರಬ್ ಸಂಸ್ಥಾನಗಳಿಗೆ ಭಾರೀ ಹೊಡೆತ ಉಂಟಾಗಿದೆ. ಕಳೆದ ತಿಂಗಳು ಸೌದಿ ಅರೇಬಿಯಾ ಭಾರತದ ಅತಿ ದೊಡ್ಡ ತೈಲ ಪೂರೈಕೆದಾರನಾಯಿತು. ಆದರೆ ಇರಾಕ್ ಹಾಗೂ ಸಂಯುಕ್ತ ಅರಬ್ ಸಂಸ್ಥಾನ ಈಗ 3 ಹಾಗೂ 4 ನೇ ಸ್ಥಾನಕ್ಕೆ ಕುಸಿದಿವೆ. ಇದನ್ನೂ ಓದಿ: ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗ್ತಿವೆ : ಕಾಂಗ್ರೆಸ್