ರಷ್ಯಾ ಉಕ್ರೇನ್ ಮೇಲೆ ವ್ಯಾಕ್ಯೂಮ್ ಬಾಂಬ್ ಹಾಕುವುದು ಖಚಿತ ಎಂದ ಬ್ರಿಟನ್

Public TV
1 Min Read
Russia Ukraine War 1 1

ಲಂಡನ್: ರಷ್ಯಾ ಉಕ್ರೇನ್ ಯುದ್ಧ ಕಳೆದ 16 ದಿನಗಳಿಂದ ನಡೆಯುತ್ತಿದ್ದು, ಇದೀಗ ರಷ್ಯಾ ಉಕ್ರೇನ್ ಮೇಲೆ ಟಿಒಎಸ್-1ಎ (TOS-1A) ಆಯುಧವನ್ನು ಬಳಸುವುದು ಖಚಿತವಾಗಿದೆ ಎಂದು ಯುನೈಟೆಡ್ ಕಿಂಗ್ಡಮ್(ಬ್ರಿಟನ್)ನ ರಕ್ಷಣಾ ಸಚಿವಾಲಯ ತಿಳಿಸಿದೆ.

ಟಿಒಎಸ್-1ಎ ಥರ್ಮೋಬಾರಿಕ್ ರಾಕೆಟ್ ಹಾಗೂ ನಿರ್ವಾತ(ವ್ಯಾಕ್ಯೂಮ್) ಬಾಂಬ್ ಒಳಗೊಂಡಿದೆ. ಈ ಆಯುಧ ಬಳಕೆಯಿಂದ ಬೆಂಕಿ ಹಾಗೂ ಭಯಾನಕ ಸ್ಫೋಟ ಸಂಭವಿಸಲಿದೆ ಎಂದು ಮೂಲಗಳು ತಿಳಿಸಿವೆ. ಮಿನಿಸ್ಟ್ರಿ ಆಫ್ ಡಿಫೆನ್ಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಆಯುಧದ ಬಗ್ಗೆ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

ಜಾಗತಿಕವಾಗಿ ತಯಾರಿಸಲಾಗಿರುವ ಎಲ್ಲಾ ಬಾಂಬುಗಳಿಗಿಂತಲೂ ವ್ಯಾಕ್ಯೂಮ್ ಬಾಂಬ್ ಅತ್ಯಂತ ಶಕ್ತಿಶಾಲಿಯಾಗಿದೆ. ಇದನ್ನು ಥರ್ಮೋಬಾರಿಕ್ ವೆಪನ್ ಎಂತಲೂ ಕರೆಯಲಾಗುತ್ತಿದ್ದು, ಇದು ವಾತಾವರಣದ ಆಮ್ಲಜನಕವನ್ನು ಹೀರಿಕೊಂಡು ಸ್ಫೋಟಿಸುತ್ತದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದಿಗೆ ಮಾತ್ರ ಅಮೆರಿಕ ನಿರ್ಬಂಧ – ಯುರೇನಿಯಂಗೆ ಇಲ್ಲ ನಿಷೇಧ

ಅಣು ಬಾಂಬ್‌ನ ಬಳಿಕ ಬರುವ ಅತ್ಯಂತ ಭಯಾನಕ ಬಾಂಬ್ ಇದಾಗಿದ್ದು, ಇದನ್ನು ಪ್ರಯೋಗಿಸಿದ ಬಳಿಕ ಮನುಷ್ಯನ ದೇಹವನ್ನೇ ಆವಿಯಾಗಿಸುತ್ತದೆ. ಈ ಬಾಂಬ್ ಅನ್ನು ಮೊದಲಿಗೆ ಅಮೆರಿಕ ತಯಾರಿಸಿತ್ತು. ಬಳಿಕ 2007ರಲ್ಲಿ ರಷ್ಯಾ ಈ ಬಾಂಬ್ ಅನ್ನು ಅಭಿವೃದ್ಧಿ ಮಾಡಿ ಸಿರಿಯಾ ಮೇಲೆ ಪ್ರಯೋಗ ಮಾಡಿತ್ತು ಎಂಬ ಆರೋಪ ಇದೆ.

Share This Article
Leave a Comment

Leave a Reply

Your email address will not be published. Required fields are marked *