– ಉತ್ಸವದಲ್ಲಿ ಎಸಿ ಮೇಲೆ ಜೆಡಿಎಸ್ ಶಾಸಕನ ದರ್ಪ
– ಕಾರ್ಯಕ್ರಮ ತಡವಾಗಿದ್ದನ್ನು ಪ್ರಶ್ನಿಸಿದ ಮಂಗಳಮುಖಿಗೆ ಲಾಠಿ ಏಟು
ಬಳ್ಳಾರಿ: ಮೂರು ದಿನಗಳ ಹಂಪಿ ಉತ್ಸವದ ಉದ್ಘಾಟನೆ ದಿನವೇ ಮೂರು ವಿಭಿನ್ನ ಅವಾಂತರ ಸೃಷ್ಠಿಯಾದ ಘಟನೆ ನಡೆದಿದೆ. ಹಂಪಿ ಉತ್ಸವದ ವೇಳೆಯೇ ರಷ್ಯಾ ಯುವತಿ ಜೊತೆ ಪೂಜಾರಿ ಸೆಕ್ಸ್ ಮಾಡಿದ್ದು, ಇದನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಹಂಪಿಯ ಆಂಜನೇಯ ದೇವಾಲಯದ ಬಳಿ ರಷ್ಯಾ ಯುವತಿಯೊಬ್ಬಳು ದೇವಾಲಯದ ಪೂಜಾರಿ ರಾಜಮೋಹನ್ ಜೊತೆ ಸೆಕ್ಸ್ ನಲ್ಲಿ ತೊಡಗಿದ್ದಳು. ಇದನ್ನು ಕಂಡ ಸ್ಥಳೀಯರು ಇಬ್ಬರನ್ನು ಹಿಡಿಯಲು ಯತ್ನಿಸಿದರು.
ಈ ವೇಳೆ ರತಿಕ್ರೀಡೆಯಲ್ಲಿ ತೊಡಗಿದ್ದ ವಿದೇಶಿ ಮಹಿಳೆ ಹಾಗೂ ಪೂಜಾರಿ ಸ್ಥಳೀಯ ಯುವಕ ರಾಜಶೇಖರ್ ಎಂಬಾತನ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದರು. ಆದ್ರೆ ಸ್ಥಳೀಯರು ವಿದೇಶಿ ಮಹಿಳೆಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಂಪಿ ಉತ್ಸವದ ಉದ್ಘಾಟನೆ ದಿನವೇ ಮತ್ತೊಂದು ಅವಾಂತರ ನಡೆದಿದೆ. ಹಂಪಿ ಉತ್ಸವದಲ್ಲಿ ಎಸಿ ಮೇಲೆ ಜೆಡಿಎಸ್ ಶಾಸಕ ದರ್ಪ ತೋರಿದ್ದಾರೆ. ಪುತ್ರನನ್ನು ವೇದಿಕೆಯ ಮೇಲೆ ಬಿಡದಿದ್ದಕ್ಕೆ ಗರಂ ಆದ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ್, ಹೊಸಪೇಟೆ ಎಸಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕೊನೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್, ಶಾಸಕ ಆನಂದ್ ಸಿಂಗ್ ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ರು. ಶಾಸಕರು ಅಧಿಕಾರಿಯನ್ನು ಎಲ್ಲಾ ಜನರ ಮುಂದೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನ್ನು ಕಂಡ ಸಚಿವರು, ಮಾಧ್ಯಮವರಿಗೆ ಸುದ್ದಿ ಮಾಡದಂತೆ ಮನವಿ ಮಾಡಿ ಕಾರ್ಯಕ್ರಮದ ಹೆಸರು ಕೆಡಿಸದಂತೆ ಹೇಳಿದ್ರು.
ಟಿಪ್ಪು ಗಾಯನ ಕಾರ್ಯಕ್ರಮ ತಡವಾಗಿದ್ದನ್ನು ಪ್ರಶ್ನಿಸಿದ ಮಂಗಳಮುಖಿಯೊಬ್ಬರನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿ ಠಾಣೆಗೆ ಕರೆದೊಯ್ದುರು. ಹೀಗಾಗಿ ಹಂಪಿ ಉತ್ಸವದ ಮೊದಲ ದಿನವೇ ಮೂರು ಅವಘಡಗಳು ಸಂಭವಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು.
ಈ ಎಲ್ಲಾ ಅವಾಂತರ ಅನಾಚಾರಗಳ ನಡುವೆ ಹಂಪಿ ಉತ್ಸವ ಸಾಂಸ್ಕೃತಿಕ ಕಾರಣಕ್ಕೆ ಕಳೆಗಟ್ಟಿತ್ತು. ಬಸವಣ್ಣ ವೇದಿಕೆಯಲ್ಲಿ ಸ್ಯಾಂಡಲ್‍ವುಡ್ ಗಾಯಕ ಟಿಪ್ಪು ಹಾಗೂ ಸಂಗಡಿಗರು, ಗಾಯತ್ರಿ ಪೀಠ ಮೈದಾನ ವೇದಿಕೆಯಲ್ಲಿ ಬಾಲಿವುಡ್ ಗಾಯಕ ಕುನಾಲ್ ಗಾಂಜಾವಾಲ ಹಾಡುಗಳನ್ನು ಹಾಡಿ ಪೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು.
ಈ ನಡುವೆ ಸಿಎಂ ಸಿದ್ದರಾಮಯ್ಯ ಬಿಜೆಪಿ ಶಾಸಕ ಆನಂದ್ ಸಿಂಗ್ ಕಾಲೆಳೆದರು. ಹಂಪಿ ಉತ್ಸವಕ್ಕೂ ಮುನ್ನ ಕಮಲಾಪುರ ವನ್ಯಮೃಗಾಲಯ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಶಾಸಕ ಆನಂದ್‍ಸಿಂಗ್ ಹೆಸರು ಕೂಗಿ “ಏ ಆನಂದ್ ಸಿಂಗ್ ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ” ಅಂತಾ ಟಾಂಗ್ ಕೊಟ್ರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕ ಆನಂದಸಿಂಗ್, ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ ಬಿಡಿ ಅಂತಾ ಸಿಎಂಗೆ ಕಿಚಾಯಿಸಿದ್ರು.