-ಪ್ರಮೋಷನ್ ಮಿಸ್ಟರಿಯ ಕಂಪ್ಲೀಟ್ ಹಿಸ್ಟರಿ
-ಜೂನಿಯರ್ಸ್ ಗಳಿಗೆ ಪ್ರಮೋಶನ್ ಭಾಗ್ಯ
ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬರೋಬ್ಬರಿ 63 ಜನರಿಗೆ ಪ್ರಮೋಶನ್ ಭಾಗ್ಯವನ್ನು ಕಲ್ಪಿಸಿದ್ದಾರೆ.
ಅಧಿಕಾರಿಗಳ ಜೇಷ್ಠತೆಯ ಪಟ್ಟಿ ಸಿದ್ಧವಾಗುವರೆಗೂ ಯಾವ ಅಧಿಕಾರಿಗಳು ಪ್ರಮೋಶನ್ ನೀಡಕೂಡದು ಎಂದು ಕ್ಯಾಬಿನೆಟ್ ನಿರ್ಧಾರ ತೆಗೆದುಕೊಂಡಿತ್ತು. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಾತೃ ಸಂಸ್ಥೆ ಲೋಕೋಪಯೋಗಿ ಸಚಿವರು ಆದೇಶವನ್ನು ಹೊರಡಿಸಿದ್ದರು. ಲೋಕೋಪಯೋಗಿ ಇಲಾಖೆಯ ಆದೇಶವನ್ನು ಗಾಳಿಗೆ ತೂರಿರುವ ಈಶ್ವರಪ್ಪನವರು ಹಿರಿಯರನ್ನು ಬಿಟ್ಟಿ ಒಟ್ಟು 63 ಜನ ಕಿರಿಯ ಅಧಿಕಾರಿಗಳಿಗೆ ಪ್ರಮೋಶನ್ ನೀಡಿ ಆದೇಶ ಹೊರಡಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
2003 ಮತ್ತು 2007ರಲ್ಲಿ ನೇಮಕಗೊಂಡ ಅಧಿಕಾರಿಗಳ ಬದಲಾಗಿ 2016ರ ನೇಮಕಗೊಂಡವರಿಗೆ ಆತುರಾತುರವಾಗಿ ಪ್ರಮೋಶನ ಕಲ್ಪಿಸಲಾಗಿದೆ. ಪ್ರಮೋಶನ್ ಸಿಕ್ಕ ಅಧಿಕಾರಿಗಳಿಗೆ ಇನ್ನು ಸ್ಥಳವನ್ನು ನಿಗದಿ ಸಹ ಮಾಡಿಲ್ಲ. ಈಶ್ವರಪ್ಪನವರ ಈ ನಿರ್ಧಾರದ ಹಿಂದೆ ಯಾರ ಹಸ್ತಕ್ಷೇಪವಿದೆ ಎಂದು ತಿಳಿಯಬೇಕಿದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.