ನವದೆಹಲಿ: ದೆಹಲಿಯಲ್ಲಿ (New Delhi) ಸುಳ್ಳಿನ ಆಳ್ವಿಕೆ ಕೊನೆಗೊಂಡಿದೆ. ಭರವಸೆ ಮುರಿಯುವವರಿಗೆ ತಕ್ಕ ಪಾಠವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.
ದೆಹಲಿ ಚುನಾವಣಾ ಫಲಿತಾಂಶದಲ್ಲಿ (Delhi Election Results) 27 ವರ್ಷಗಳ ಬಳಿಕ ಬಿಜೆಪಿ ಮೇಲುಗೈ ಸಾಧಿಸಿದ ಕುರಿತು ಮಾತನಾಡಿದ ಅವರು, ದೆಹಲಿಯ ಜನರು ಸುಳ್ಳು, ವಂಚನೆ ಮತ್ತು ಭ್ರಷ್ಟಾಚಾರದ ‘ಶೀಷ್‌ಮಹಲ್’ ಅನ್ನು ನಾಶಮಾಡುವ ಮೂಲಕ ದೆಹಲಿಯನ್ನು ಆಪ್ ಮುಕ್ತಗೊಳಿಸಲು ತೀರ್ಮಾನಿಸಿದ್ದಾರೆ. ಭರವಸೆಗಳನ್ನು ಮುರಿಯುವವರಿಗೆ ದೆಹಲಿ ತಕ್ಕ ಪಾಠ ಕಲಿಸಿದೆ. ಇದು ದೇಶಾದ್ಯಂತ ಸಾರ್ವಜನಿಕರಿಗೆ ಸುಳ್ಳು ಭರವಸೆಗಳನ್ನು ನೀಡುವವರಿಗೆ ಒಂದು ಉದಾಹರಣೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಅಲ್ಲದೇ ಆಪ್ ಸೋಲನ್ನು ದುರಹಂಕಾರ ಮತ್ತು ಅರಾಜಕತೆಯ ಸೋಲು ಎಂದು ಕರೆದರು. ಇದನ್ನೂ ಓದಿ: ದೆಹಲಿಯಲ್ಲಿ ಬಿಜೆಪಿ ಗೆಲುವು, ರಾಜ್ಯದ ಮುಂದಿನ ಚುನಾವಣೆಗೆ ದಿಕ್ಸೂಚಿ – ಆರ್.ಅಶೋಕ್
Advertisement
ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸುತ್ತದೆ. ಅಲ್ಲದೇ ದೆಹಲಿಯನ್ನು ವಿಶ್ವದ ನಂಬರ್ ಒನ್ ರಾಜಧಾನಿಯನ್ನಾಗಿ ಮಾಡುತ್ತದೆ. ಇದು ‘ಮೋದಿ ಗ್ಯಾರಂಟಿ’ಯ ಗೆಲುವು. ಈ ಬೃಹತ್ ಜನಾದೇಶಕ್ಕಾಗಿ ದೆಹಲಿಯ ಜನರಿಗೆ ಧನ್ಯವಾದ ಎಂದು ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ದೆಹಲಿ ಚುನಾವಣೆಯಲ್ಲಿ ಸೋತ AAPಯನ್ನು ಕೌರವರಿಗೆ ಹೋಲಿಸಿದ ಸ್ವಾತಿ ಮಲಿವಾಲ್
Advertisement
Advertisement
ಯಮುನಾ, ಕೊಳಕು ಕುಡಿಯುವ ನೀರು, ಹಾಳಾದ ರಸ್ತೆಗಳು, ತುಂಬಿ ಹರಿಯುವ ಚರಂಡಿಗಳು ಮತ್ತು ಪ್ರತಿ ಬೀದಿಯಲ್ಲಿ ತೆರೆದಿರುವ ಮದ್ಯದ ಅಂಗಡಿಗಳಿಗೆ ಸಾರ್ವಜನಿಕರು ತಮ್ಮ ಮತಗಳಿಂದ ತಕ್ಕ ಉತ್ತರ ನೀಡಿದ್ದಾರೆ. ದೆಹಲಿ ಈಗ ಮೋದಿಯವರ ನೇತೃತ್ವದಲ್ಲಿ ಆದರ್ಶ ರಾಜಧಾನಿಯಾಗಲಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಕರ್ನಾಟಕ ಸೇರಿ ಇಡೀ ದೇಶ ಬಿಜೆಪಿ ಮಯವಾಗಲಿದೆ – ಜನಾರ್ದನ ರೆಡ್ಡಿ
Advertisement