‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಪುಟ್ಟಿ ಎಂದೇ ಫೇಮಸ್ ಆಗಿರುವ ರುಕ್ಮಿಣಿ ವಸಂತ್ (Rukmini Vasanth) ಅವರು ತೆಲುಗು, ತಮಿಳಿನಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಲು ಅವರಿಗೆ ಅವಕಾಶಗಳು ಅರಸಿ ಬರುತ್ತಿವೆ. ಇದನ್ನೂ ಓದಿ:‘ಕಿಸ್ಸಿಕ್’ ಬೆಡಗಿ ಶ್ರೀಲೀಲಾಗೆ ಖುಲಾಯಿಸಿದ ಅದೃಷ್ಟ- ನಟಿಗೆ ಬಿಗ್ ಆಫರ್
ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಎ ಹಾಗೂ ಸೈಡ್ ಬಿನಲ್ಲಿ ನಟಿಸಿದ್ಮೇಲೆ ರುಕ್ಮಿಣಿಗೆ ಅದೃಷ್ಟ ಖುಲಾಯಿಸಿದೆ. ತೆಲುಗು, ತಮಿಳಿನ ಸಿನಿಮಾದಲ್ಲಿ ನಟಿಸಲು ಬಂಪರ್ ಆಫರ್ ಸಿಕ್ಕಿದೆ. ಅವರು ಕೂಡ ಸಖತ್ ಚ್ಯುಸಿಯಾಗಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ತಿದ್ದಾರೆ.
ಶಿವಕಾರ್ತಿಕೇಯನ್ ನಟನೆಯ 23ನೇ ಚಿತ್ರ ‘ಮದರಾಸಿ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಎ.ಆರ್ ಮುರುಗದಾಸ್ ನಿರ್ದೇಶನ ಮಾಡಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ರಿಲೀಸ್ ಬಗ್ಗೆ ಮಾಹಿತಿ ಸಿಗಲಿದೆ.
ಮಾಸ್ ಮಹಾರಾಜ ರವಿತೇಜ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ಇದರೊಂದಿಗೆ ಜ್ಯೂ.ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಚಿತ್ರದಲ್ಲಿ ರುಕ್ಮಿಣಿ ನಾಯಕಿ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಈ ವಿಚಾರ ನಿಜನಾ? ಎಂಬುದು ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಇನ್ನೂ ತಮಿಳು ನಟ ವಿಜಯ್ ಸೇತುಪತಿ ನಟನೆಯ ಹೊಸ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈ ವರ್ಷ ಅಕ್ಟೋಬರ್‌ನಲ್ಲಿ ಚಿತ್ರ ರಿಲೀಸ್ ಆಗಲಿದೆ.
ಅಂದಹಾಗೆ, ಸೌತ್‌ನಲ್ಲಿ ಕನ್ನಡದ ನಟಿಮಣಿಯರ ದರ್ಬಾರ್ ಜೋರಾಗಿದೆ. ಅನುಷ್ಕಾ ಶೆಟ್ಟಿ, ರಶ್ಮಿಕಾ ಮಂದಣ್ಣ, ಶ್ರೀಲೀಲಾ ಬಳಿಕ ರುಕ್ಮಿಣಿ ವಸಂತ್ ಕೂಡ ಭಾರೀ ಸದ್ದು ಮಾಡುತ್ತಿದ್ದಾರೆ. ಅವರ ಹಾದಿಯನ್ನೇ ರುಕ್ಮಿಣಿ ಅನುಸರಿಸುತ್ತಿದ್ದಾರೆ.