ಕೆಜಿಎಫ್‌ ಬಾಬುಗೆ ಆರ್‌ಟಿಓ ಶಾಕ್‌ – ಬಿಗ್‌ ಬಿ, ಆಮೀರ್‌ ಖಾನ್‌ರಿಂದ ಖರೀದಿಸಿದ್ದ ಐಷಾರಾಮಿ ಕಾರು ಜಪ್ತಿ?

Public TV
1 Min Read
KGF Babu 2

ಬೆಂಗಳೂರು: ಉದ್ಯಮಿ ಕೆಜಿಎಫ್‌ ಬಾಬು (KGF Babu) ಅವರಿಗೆ ಆರ್‌ಟಿಓ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್‌ ಕೊಟ್ಟಿದ್ದಾರೆ. ಬೆಂಗಳೂರಿನ (Bengaluru) ವಸಂತನಗರದಲ್ಲಿರುವ ತಮ್ಮ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಅಮಿತಾಬ್ ಬಚ್ಚನ್, ಆಮೀರ್‌ ಖಾನ್‌ರಿಂದ ಖರೀದಿಸಿದ್ದ ರೋಲ್ಸ್ ರಾಯ್ಸ್‌ ಕಾರುಗಳನ್ನು ಸೀಜ್‌ ಮಾಡಲು ಮುಂದಾಗಿದ್ದಾರೆ.

KGF Babu

ಕೆಜಿಎಫ್‌ ಬಾಬು ಐಷಾರಾಮಿ ಕಾರುಗಳ ಟ್ಯಾಕ್ಸ್ (Tax) ಕಟ್ಟದೇ ವಂಚಿಸಿದ್ದಾರೆ ಅನ್ನೋ ಆರೋಪದ ಮೇಲೆ ಆರ್‌ಟಿಓ ತಂಡ (RTO Team) ಕಾರು ಜಪ್ತಿಗೆ ಮುಂದಾಗಿದೆ. ಸದ್ಯ ಅಧಿಕಾರಿಗಳ ತಂಡ ಕೆಜಿಎಫ್‌ ಬಾಬು ಅವರ ಮನೆ ಮುಂದೆಯೇ ಬೀಡುಬಿಟ್ಟಿದೆ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್‌ – ಇಂದು ಮತ್ತೆ ವಿಚಾರಣೆ, FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಬೈರತಿ ಬಸವರಾಜ್

KGF Babu 3

ಬಾಗಿಲು ತೆರೆಯದೇ ಬಾಬು ಮೊಂಡಾಟ
ಆರ್‌ಟಿಓ ಜಂಟಿ ಆಯುಕ್ತರಾದ ಶೋಭಾ ನೇತೃತ್ವದ ತಂಡವು ಕೆಜಿಎಫ್ ಬಾಬು ಅವರ ವಸಂತನಗರದ ಮನೆ ಮೇಲೆ ದಾಳಿ ನಡೆದಿದೆ. ಬಾಬು ರೋಲ್ಸ್ ರಾಯ್ಸ್, ವೆಲ್ಫೇರ್ ಸೇರಿ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದು, ಈ ದಾಳಿಯ ಸಂದರ್ಭದಲ್ಲಿ, ಅಧಿಕಾರಿಗಳು ಬಾಬುಗೆ ಸೇರಿದ ಕಾರುಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಆದರೆ, ಬಾಬು ಮನೆಯ ಗೇಟ್ ತೆರೆಯದಿರುವುದರಿಂದ, ಆರ್‌ಟಿಓ ತಂಡವು ಮನೆಯ ಹೊರಗಡೆಯೇ ಕಾದು ನಿಂತಿದೆ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್; ಆರೋಪಿ ಜಗ್ಗನ ಮೇಲೆ ಲುಕ್‌ಔಟ್ ನೋಟಿಸ್‌ಗೆ ಸಿದ್ಧತೆ

KGF Babu 5

ಬಾಬು ಹೇಳೋದೇನು?
ಒಂದು ರೋಲ್ಸ್‌ ರಾಯ್ಸ್‌ ಕಾರನ್ನ ನಟ ಅಮಿತಾಬ್ ಬಚ್ಚನ್ ಮತ್ತೊಂದು ರೋಲ್ಸ್‌ ರಾಯ್ಸ್‌ ಕಾರನ್ನ ಆಮೀರ್‌ ಖಾನ್‌ ಅವರಿಂದ ಖರೀದಿ ಮಾಡಿದ್ದೀನಿ. ಎರಡೂ ಕೂಡ ಬಾಂಬೆ ರಿಜಿಸ್ಟ್ರೇಷನ್‌, ನಾನು ಟ್ಯಾಕ್ಸ್‌ ಕಟ್ಟು ಹಾಗಿಲ್ಲ. ಈಗ ಆರ್‌ಟಿಓ ಅಧಿಕಾರಿಗಳು ಬಂದಿದ್ದಾರೆ. ಟ್ಯಾಕ್ಸ್‌ ಎಷ್ಟು ಅಂತ ಹೇಳಿದ್ರೆ ಕಟ್ತೀನಿ. ಅದನ್ನ ಬಿಟ್ಟು ಏಕಾಏಕಿ ಸೀಜ್‌ ಮಾಡ್ರೀನಿ ಅಂದ್ರೆ ಹೇಗೆ ಅಂತ ಬಾಬು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ 18 ದಿನ – ಭೂಮಿಯಲ್ಲಿ ಮತ್ತೆ ನಡೆಯುವುದನ್ನ ಕಲಿಯುತ್ತಿದ್ದಾರೆ ಶುಭಾಂಶು ಶುಕ್ಲಾ

Share This Article