ಬೆಂಗಳೂರು: ಟ್ರಾಫಿಕ್ ನಿಯಮಗಳನ್ನು ಬ್ರೇಕ್ ಮಾಡುವವರಿಗೆ ಬಿಸಿ ಮುಟ್ಟಿಸಲು ದಂಡ ಹೆಚ್ಚಳ, ಫಾಸ್ಟ್ ಟ್ಯಾಗ್ ಹೀಗೆ ನಾನಾ ಸುಧಾರಣೆ ಬಳಿಕ ಇದೀಗ ಕೇಂದ್ರ ಸಾರಿಗೆ ಇಲಾಖೆ ಮತ್ತೊಂದು ಐತಿಹಾಸಿಕ ನಿರ್ಧಾರಕ್ಕೆ ಮುಂದಾಗಿದೆ.
ವಾಹನಗಳ ನಂಬರ್ ಪ್ಲೇಟ್ ಮೇಲೆ ನಂಬರ್ ಮಾತ್ರ ಇರಬೇಕು. ಅದನ್ನ ಹೊರತುಪಡಿಸಿ ಹೆಸರು, ಚಿಹ್ನೆಗಳಿಗೆ ಇರಬಾರದು ಎಂಬುದು ಕೇಂದ್ರ ಸಾರಿಗೆ ಇಲಾಖೆ ನಿಯಮ ಮಾಡಿದೆ. ಹೀಗಾಗಿ ನೆಲಮಂಗಲ ಆರ್‌ಟಿಓ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
Advertisement
Advertisement
ಕೇಂದ್ರ ಮೋಟಾರು ವಾಹನಗಳ ನಿಯಮ 1989ರ ನಿಯಮ, 50 ಮತ್ತು 51ರ ಪ್ರಕಾರ ಎಲ್ಲಾ ವಾಹನಗಳು ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಬೇಕು. ವಾಹನಗಳ ನೋಂದಣಿ ಫಲಕದ ಮೇಲೆ ಚಿತ್ರಗಳಗನ್ನು, ವಿವಿಧ ದೇವರಗಳ ಹೆಸರುಗಳನ್ನು, ಸಂಘ ಸಂಸ್ಥೆಗಳ ಹೆಸರಗಳನ್ನು ಬರೆಸುವುದು ಕಾನೂನಿಗೆ ವಿರುದ್ಧವಾಗಿದೆ. ಹೀಗಾಗಿ ಇದನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಮೋಟಾರು ವಾಹನಗಳ ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ನೆಲಮಂಗಲ ಆರ್‌ಟಿಓ ಅಧಿಕಾರಿ ಒಡೆಯರ್ ವಾಹನ ಸವಾರರಿಗೆ ತಿಳಿಸಿದ್ದಾರೆ.
Advertisement
Advertisement
ಆರ್‌ಟಿಓ ಕಚೇರಿಯ ಮೋಟಾರು ವಾಹನಗಳ ಹಿರಿಯ ನಿರೀಕ್ಷಕರು, ಚಾಲನಾ ಅನುಜ್ಞಾ ಪತ್ರ ಪಡೆಯಲು ಬಂದ ಸುಮಾರು 200 ಅಭ್ಯರ್ಥಿಗಳಲ್ಲಿ ಕಾನೂನು ಜಾಗೃತಿ ಮೂಡಿಸಿದ್ದಾರೆ. ನಿಮ್ಮ ವಾಹನಗಳ ನೋಂದಣಿ ಫಲಕದಲ್ಲಿ ಯಾವುದೇ ಚಿಹ್ನೆ, ಹೆಸರುಗಳನ್ನು ಹಾಕುವುದು ತಪ್ಪು. ಹೀಗೆ ಮಾಡಬೇಡಿ ಎಂದು ಕೇಂದ್ರ ಮೋಟಾರು ವಾಹನಗಳ ನಿಯಮವನ್ನು ಅಭ್ಯರ್ಥಿಗಳಿಗೆ ತಿಳಿಸಿಕೊಟ್ಟಿದ್ದಾರೆ.