ಬೀದರ್: ಸಿದ್ದರಾಮಯ್ಯನವರೇ ತಾಲಿಬಾನ್ ಅಂದ್ರೆ ಏನು ಗೋತ್ತಾ ನಿಮಗೆ? ತಾಲಿಬಾನ್ ಅಂದ್ರೆ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡೋದು ಎಂದರ್ಥ ಆರ್‌ಎಸ್‌ಎಸ್ ಅನ್ನು ತಾಲಿಬಾನ್‍ಗೆ ಹೋಲಿಕೆ ಮಾಡಿದ್ರೆ ಕಾಂಗ್ರೆಸ್ ಐತಿಹಾಸವನ್ನು ತೆಗೆಯಬೇಕಾಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ರೀರಾಮ್ ಸೇನೆಯ ಸಂಸ್ಥಾಪಕ ಪ್ರಮೋದ್ ಮುತ್ತಾಲಿಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೀದರ್‍ನಲ್ಲಿ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಂದೂಕಿನ, ಭಯೋತ್ಪಾದನೆಯ ಆಧಾರದ ಮೇಲೆ ರಾಜ್ಯ ನಡೆಸುವವರಿಗೆ ತಾಲಿಬಾನ್ ಎನ್ನತ್ತಾರೆ. ಆರ್‌ಎಸ್‌ಎಸ್ ಆ ರೀತಿ ನಡೆಸುತ್ತಿದೆಯಾ? ಒಂದಾದ್ರು ಕೊಲೆ, ಅತ್ಯಾಚಾರ, ದೇಶದ್ರೋಹ ಪ್ರಕರಣ ಇದೆಯಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್ ಸದಸ್ಯನಾಗಿದ್ದ ಡಿಕೆಶಿಯವರೇ ಸಿದ್ದರಾಮಯ್ಯನವರ ಮಾತನ್ನು ಒಪ್ಪುತ್ತೀರಾ – ಬಿಜೆಪಿ ಪ್ರಶ್ನೆ
ನಾನು ಸಿದ್ದರಾಮಯ್ಯಗೆ ಕೈಮುಗಿದು ಕೇಳುತ್ತೇನೆ ತಾಲಿಬಾನ್ ಜೊತೆಗೆ ಆರ್‌ಎಸ್‌ಎಸ್ ಅನ್ನು ಹೋಲಿಕೆ ಮಾಡಬೇಡಿ ಹೋಲಿಕೆ ಮಾಡುವ ಹಠ ಹಿಡಿದರೆ ಕಾಂಗ್ರೆಸ್‍ನ ಐತಿಹಾಸವನ್ನು ತೆಗೆಯಬೇಕಾಗುತ್ತದೆ, ಒಂದು ಮನೆತನದ ಗುಲಾಮಗಿರಿಯಲ್ಲಿ ಕೆಲಸ ಮಾಡುತ್ತಿದ್ದಂತವರು ಕಾಂಗ್ರೆಸ್‍ನವರು ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಸಿದ್ದರಾಮಯ್ಯಗಿಲ್ಲ : ಮಹಾಂತೇಶ್ ಕವಟಗಿಮಠ