ಬೆಂಗಳೂರು: ಆರ್‌ಎಸ್‌ಎಸ್ (RSS) ಸಂವಿಧಾನದ ವಿರೋಧ ಸಂಸ್ಥೆ. ಅವರು ಮನುಸ್ಮೃತಿಯಲ್ಲಿ ನಂಬಿಕೆಯಿಟ್ಟವರು, ಯಾವತ್ತಿಗೂ ಸಂವಿಧಾನವನ್ನು (Constitution Of India) ಗೌರವಿಸಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದರು.
ಲೇಖಕ ನಟರಾಜ್ ಹುಳಿಯಾರ್ ರಚಿತ `ಎಲ್ಲರ ಗಾಂಧಿ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬಿಜೆಪಿ (BJP), ಆರ್‌ಎಸ್‌ಎಸ್ (RSS) ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಂಕ್ರಾಂತಿ ಹಬ್ಬಕ್ಕೆ ಸೆಲೆಬ್ರೆಟಿಗಳ ಸಂಭ್ರಮ
Advertisement
Advertisement
ಸಂವಿಧಾನ ಬಂದಾಗಲೇ ವಿರೋಧ ಮಾಡಿದ್ರು, ಈಗಲೂ ವಿರೋಧ ಮಾಡ್ತಾರೆ. ಮನುಸ್ಮೃತಿ ಯಲ್ಲಿ ನಂಬಿಕೆ ಇಟ್ಟವರು ಆರ್‌ಎಸ್‌ಎಸ್ ನವರು. ಇವರಿಗೆ ಸಂವಿಧಾನಕ್ಕಿಂತ ಮನುಸ್ಮೃಯೇ ಮುಖ್ಯ. ಇವರಿಂದ ಗಾಂಧೀಜಿ ಅವರಿಗೆ ಗೌರವ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸಂಕ್ರಾಂತಿಯ ವಿಸ್ಮಯ – ಸೂರ್ಯ ರಶ್ಮಿ ಗರ್ಭಗುಡಿ ಪ್ರವೇಶ
Advertisement
ಹಿಂದೂ ಮಹಾ ಸಭಾದವರು ಗಾಂಧಿಯವರನ್ನ ಕೊಂದೇ ಹಾಕಿ ಬಿಟ್ರು. ಗಾಂಧಿ ಹತ್ಯೆ ಕೇಸ್ ನಲ್ಲಿ ಇದ್ದ ಸಾವರ್ಕರ್ (Savarkar) ಫೋಟೋವನ್ನ ವಿಧಾನಸಭೆಯಲ್ಲಿ ಇಟ್ಟಿದ್ದಾರೆ. ಸಾವರ್ಕರ್ ಅವರನ್ನ ಪೂಜಿಸುತ್ತಾರೆ. ಇವರು ಎಂತಹ ನೀಚರು. ಇಂತಹ ನೀಚರಿಗೆ ಗಾಂಧಿಯವರ ವಿಚಾರಧಾರೆ ಪರಿಹಾರ ಎಂದು ಕುಟುಕಿದರು.
Advertisement
ಇಂದಿನ ಸರ್ಕಾರ, ಸರ್ಕಾರದ ವಿರುದ್ಧ ಮಾತನಾಡುವವರ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಗಾಂಧೀಜಿ ಅವರನ್ನ ಮರೆತರೇ ದೇಶವನ್ನ ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗಲು ಕಷ್ಟ. ಗಾಂಧಿಜೀ ಚಿಂತನೆಗಳು, ಭಾಷಣ, ಮಾತುಗಳು ಎಂದೆಂದಿಗೂ ಪ್ರಸ್ತುತ. ಲೋಹಿಯಾ, ಅಂಬೇಡ್ಕರ್, ಬಸವಣ್ಣ, ಬುದ್ಧನ ಚಿಂತನೆಗಳು, ಬರಹಗಳು ಎಂದೆಂದಿಗೂ ಪ್ರಸ್ತುತ. ಸುಂದರ ಸಮಾಜ ನಿರ್ಮಾಣ ಮಾಡಬೇಕಾದ್ರೆ ಈ ಎಲ್ಲಾ ಚಿಂತನೆಗಳು ಅವಶ್ಯಕ, ಅಗತ್ಯ. ಇಂತಹ ದಾರಿಯಲ್ಲಿ ನಡೆದರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಸಲಹೆ ನೀಡಿದರು.
ಇಂದಿನ ರಾಜಕೀಯ ಸೇಡು, ಕೋಮುವಾದ, ಅಮಾನವೀಯ ದಾರಿಯಲ್ಲಿ ನಡೆಯುತ್ತಿದೆ. ಈ ಸರ್ಕಾರದ ವಿರುದ್ಧ ಮಾತಾಡಿದ್ರೆ ಅದೇ ಅಪರಾಧ ಆಗಿದೆ. ಒಳ್ಳೆ ಸರ್ಕಾರ ಇರಲಿ, ಕೆಟ್ಟ ಸರ್ಕಾರ ಇರಲಿ. ಮಾತಾಡುವುದು ಎಲ್ಲರ ಹಕ್ಕು. ಮಾತನಾಡುವ ಸ್ವಾತಂತ್ರ‍್ಯವನ್ನು ಕಿತ್ತುಕೊಳ್ಳುವ ಕೆಲಸ ಆಗ್ತಿದೆ. ಅವರ ವಿರುದ್ಧ ಮಾತಾಡಿದ್ರೆ ಜೈಲಿಗೆ ಹಾಕಿ, ದೇಶ ದ್ರೋಹ ಪಟ್ಟ ಕಟ್ಟುತ್ತಾರೆ. ಇದಕ್ಕೆಲ್ಲ ಗಾಂಧಿ, ಬುದ್ಧ, ಚಿಂತನೆಗಳು ಪರಿಹಾರ ಎಂದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k