ಬೆಂಗಳೂರು: ಗುಜರಾತ್ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಆರ್‌ಎಸ್‌ಎಸ್‌ನ(RSS) ಸಹ ಸರಕಾರ್ಯವಾಹ ಮುಕುಂದ್(Mukund) ಭೇಟಿಯಾಗಿದ್ದಾರೆ.
ರೇಸ್‌ಕೋರ್ಸ್ ನಿವಾಸದಲ್ಲಿ ಇಂದು ಬೆಳಗ್ಗೆ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸಿಎಂ ಅವರನ್ನು ಭೇಟಿ ಮಾಡಿದ್ದರು. ಈಗ ಮುಕುಂದ್ ಅವರು ಸಿಎಂ ಅವರನ್ನು ಭೇಟಿ ಮಾಡಿ ಕೆಲ ಹೊತ್ತು ಇಬ್ಬರೇ ಪ್ರತ್ಯೇಕ ಚರ್ಚೆ ನಡೆಸಿದ್ದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: `ನಮೋ’ಗೆ ಜೈ ಎಂದ ಗುಜರಾತ್ ಜನ – ನೋಟಾ ಮತ ಶೇ.9ರಷ್ಟು ಇಳಿಕೆ
ಈ ಹಿಂದೆ ಬೊಮ್ಮಾಯಿ ಅವರನ್ನು ಆರ್‌ಎಸ್‌ಎಸ್ ಮುಖ್ಯ ಕಚೇರಿ ʼಕೇಶವ ಕೃಪಾʼಗೆ ಕರೆಸಿಕೊಂಡಿದ್ದ ಮುಕುಂದ್ ಒಂದು ಗಂಟೆಗೂ ಹೆಚ್ಚು ಕಾಲ ಕೂರಿಸಿಕೊಂಡು ಚುನಾವಣೆ ತಯಾರಿ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ: ಕಾಂಗ್ರೆಸ್- ಬಿಜೆಪಿ ನಡುವಿನ ಮತದ ಅಂತರ ಕೇವಲ ಶೇ.0.9 – ಇಲ್ಲಿದೆ ಹಿಮಾಚಲದ ವೋಟ್ ಲೆಕ್ಕ
ಆರ್‌ಎಸ್‌ಎಸ್ ಮತ್ತು ಹೈಕಮಾಂಡ್ ನಿರೀಕ್ಷೆಗಳು, ಪಾರ್ಟಿ ಮತ್ತು ಸರ್ಕಾರದ ನಡುವಿನ ಕಂದಕಗಳು, ಪಕ್ಷದಿಂದ ಹೊರಗೆ ಕಾಲು ಇಟ್ಟವರು, ಒಳಗೆ ಬರಬೇಕು ಅನ್ನುವವರು, ಸಂಪುಟ ವಿಸ್ತರಣೆ ಬೇಕಾ? ಬೇಡವೇ ಇವುಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದರು.
ಯಡಿಯೂರಪ್ಪ ಇರಲಿ ಬೊಮ್ಮಾಯಿ ಇರಲಿ, ಕೆಲ ಸಲಹೆ ಸೂಚನೆಗಳನ್ನು ಬಿಜೆಪಿ ಹೈಕಮಾಂಡ್ ಮುಕುಂದ್ ಅವರಿಂದ ಕೊಡಿಸುತ್ತದೆ.