ಲಂಡನ್/ ನವದೆಹಲಿ: ಆರ್‌ಎಸ್‌ಎಸ್ (RSS) ಒಂದು ರಹಸ್ಯ ಸಂಘವಾಗಿದ್ದು ಇದು ಮುಸ್ಲಿಂ ಬ್ರದರ್‌ಹುಡ್ (Muslim Brotherhood) ರೀತಿಯಲ್ಲಿ ರೂಪಿತವಾಗಿದೆ. ಪ್ರಜಾಪ್ರಭುತ್ವದ ಮೂಲಕವಾಗಿ ಅಧಿಕಾರಕ್ಕೆ ಬಂದ ನಂತರ ಪ್ರಜಾಪ್ರಭುತ್ವವವನ್ನೇ ದಮನ ಮಾಡುತ್ತಿದೆ ಎಂದು ರಾಹುಲ್ ಗಾಂಧಿ (Rahul Gandhi) ಕಿಡಿಕಾರಿದ್ದಾರೆ.
ಲಂಡನ್ ಪ್ರವಾಸದಲ್ಲಿರುವ (London Tour) ಎಐಸಿಸಿ ನಾಯಕ ರಾಹುಲ್ ಗಾಂಧಿ ಛಾತಂಹೌಸ್ ಥಿಂಕ್‍ಟ್ಯಾಂಕ್ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದು ಭಾರತದಲ್ಲಿ (India) ಪ್ರಜಾಪ್ರಭುತ್ವದ ಸ್ವರೂಪವೇ ಸಂಪೂರ್ಣವಾಗಿ ಬದಲಾಗಿವೆ. ಅದಕ್ಕೆ ಏಕೈಕ ಕಾರಣ ಆರ್‌ಎಸ್‍ಎಸ್. ಇದು ಫ್ಯಾಸಿಸ್ಟ್ (Fascist) ಸಂಸ್ಥೆಯಾಗಿದ್ದು ದೇಶದ ಎಲ್ಲಾ ಸಂಸ್ಥೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭಾರತವು ಹಿಂದೂ ಬೆಳವಣಿಗೆ ದರದ ಅಪಾಯಕ್ಕೆ ಹತ್ತಿರದಲ್ಲಿದೆ : ಚರ್ಚೆಗೆ ಗ್ರಾಸವಾಯ್ತು ರಘುರಾಮ್ ರಾಜನ್ ಹೇಳಿಕೆ
Advertisement
RSS has captured all important institutions like Press, Judiciary etc. It is like a secret society. It's built along the lines of the Muslim Brotherhood, and the idea is to use the democratic contest to come to power and then subvert the democratic contest afterwards: Rahul… https://t.co/20ASrS3qru pic.twitter.com/q68yETghly
— Megh Updates ????™ (@MeghUpdates) March 7, 2023
Advertisement
ಇವರು ಸಾಧಿಸುತ್ತಿರುವ ಗೆಲುವುಗಳು ನಮ್ಮನ್ನು ಶಾಕ್ ಮಾಡುತ್ತಿವೆ. ಮಾಧ್ಯಮಗಳು, ನ್ಯಾಯವ್ಯವಸ್ಥೆ, ಸಂಸತ್, ಚುನಾವಣಾ ಆಯೋಗ ಹೀಗೆ ಎಲ್ಲವು ಅಪಾಯದ ಅಂಚಿನಲ್ಲಿವೆ. ಇವೆಲ್ಲಾ ನೇರ ಅಥವಾ ಪರೋಕ್ಷವಾಗಿ ಆರ್‌ಎಸ್‍ಎಸ್ ನಿಯಂತ್ರಣದಲ್ಲಿವೆ ಎಂದು ಆರೋಪಿಸಿದ್ದಾರೆ.
Advertisement
ಕೇಂದ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಬಿಜೆಪಿ ತೀಕ್ಷ್ಣವಾಗಿಯೇ ತಿರುಗೇಟು ನೀಡಿದ್ದು, ಆರ್‌ಎಸ್‍ಎಸ್ ಕುರಿತು ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಖಂಡನಾರ್ಹ ಎಂದು ರವಿಶಂಕರ್ ಪ್ರಸಾದ್ (Ravishankar Prasad) ತಿರುಗೇಟು ನೀಡಿದ್ದಾರೆ.
Advertisement
Rahul Gandhi, through his lectures in London, has made a mockery of India's Parliament, India's Politics, India's Laws and Security and India's People.
He has sought to shame India's Democracy from a foreign land.
– Shri @rsprasad pic.twitter.com/Bk19uzs9xx
— BJP (@BJP4India) March 7, 2023
ಕೂಡಲೇ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು. ರಾಹುಲ್ ಸಂಪೂರ್ಣವಾಗಿ ಮಾವೋವಾದಿ ಚಿಂತನಾ ಕ್ರಮವನ್ನು ಅನುಸರಿಸುತ್ತಿದ್ದಾರೆ. ಅವರ ಮಾತುಗಳಲ್ಲಿ ಅರಾಜಕತೆಯ ಅಂಶಗಳು ಇವೆ ಎಂದು ರವಿಶಂಕರ್ ಪ್ರಸಾದ್ ಆಪಾದಿಸಿದ್ದಾರೆ.
1925ರಿಂದಲೂ ಆರ್‌ಎಸ್‍ಎಸ್ ದೇಶಸೇವೆಯಲ್ಲಿದೆ. ನಾವು ಸ್ವಯಂಸೇವಕರು ಆಗಿರುವುದಕ್ಕೆ ಹೆಮ್ಮೆ ಪಡುತ್ತಿದ್ದೇವೆ. ವಿದೇಶದಲ್ಲಿ ನಿಂತು ದೇಶದ ಬಗ್ಗೆ ಅವಹೇಳನ ಮಾಡಿ ಪಾಶ್ಚಾತ್ಯ ದೇಶಗಳ ಮಧ್ಯಪ್ರವೇಶಕ್ಕೆ ರಾಹುಲ್ ಗಾಂಧಿ ಪ್ರಚೋದನೆ ನೀಡುತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ವಿಚಾರ ಎಂದು ಕಿಡಿಕಾರಿದ್ದಾರೆ.