ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತ್ರಿವರ್ಣ ಧ್ವಜವನ್ನು ತನ್ನ ಪ್ರೊಫೈಲ್ ಫೋಟೋವನ್ನಾಗಿ ಮಾಡಿದೆ.
ಅಜಾದಿ ಕೀ ಅಮೃತಮಹೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಪ್ರೊಫೈಲ್‌ನಲ್ಲಿ ತ್ರಿವರ್ಣಧ್ವಜವನ್ನು ಡಿಪಿ(ಡಿಸ್ಪ್ಲೇ ಪಿಚ್ಚರ್) ಮಾಡಬೇಕೇಂದು ಕೇಳಿಕೊಂಡಿದ್ದರು. ಇದನ್ನೂ ಓದಿ: ಮೋದಿ ಚೀನಾದೊಂದಿಗೆ `ರಾಷ್ಟ್ರಧ್ವಜ ಒಪ್ಪಂದ’ ಮಾಡ್ಕೊಂಡಿದ್ದಾರೆ – ರಾಹುಲ್ ಗಾಂಧಿ ಆರೋಪ
Advertisement
स्वाधीनता का अमृत महोत्सव मनाएँ.
हर घर तिरंगा फहराएँ.
राष्ट्रीय स्वाभिमान जगाएँ. pic.twitter.com/li2by2b0dK
— RSS (@RSSorg) August 13, 2022
Advertisement
ಬಿಜೆಪಿ ನಾಯಕರು ತ್ರಿವರ್ಣ ಧ್ವಜವನ್ನು ಡಿಪಿ ಮಾಡಿಕೊಂಡಿದ್ದರೂ ಆರ್‌ಎಸ್‌ಎಸ್ ತನ್ನ ಖಾತೆಯಲ್ಲಿ ಡಿಪಿ ಬದಲಿಸಿರಲಿಲ್ಲ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿತ್ತು. ಈಗ ಆರ್‌ಎಸ್‌ಎಸ್ ತನ್ನ ಡಿಪಿಯಲ್ಲಿ ತ್ರಿವರ್ಣ ಧ್ವಜವನ್ನು ಹಾಕಿದೆ. ಅಷ್ಟೇ ಅಲ್ಲದೇ ಸರ ಸಂಚಾಲಕ ಮೋಹನ್ ಭಾಗವತ್ ಅವರು ತಮ್ಮ ಡಿಪಿಯಲ್ಲಿ ತ್ರಿವರ್ಣ ಧ್ವಜವನ್ನು ಹಾಕಿದ್ದಾರೆ.
Advertisement
ರಾಷ್ಟ್ರಧ್ವಜದ ಬಗೆಗಿನ ನಿಲುವನ್ನು ಆರ್ ಎಸ್ ಎಸ್ ಬದಲಾಯಿಸಿಕೊಂಡು 'ಹರ್ ಘರ್ ಮೇ ತಿರಂಗಾ’ ಕಾರ್ಯಕ್ರಮವನ್ನು ಬೆಂಬಲಿಸುತ್ತದೆ ಎಂದು ನಿಮಗನಿಸುತ್ತಿದೆಯೇ? ಬದಲಾಯಿಸಿಕೊಂಡಿದ್ದರೆ ಅದಕ್ಕೆ ಕಾರಣಗಳೇನು ಎಂದು ತಿಳಿಸುವಿರಾ @BSBommai? 7/14#AnswerMadiBommai pic.twitter.com/qtUxoFUwwo
— Siddaramaiah (@siddaramaiah) August 12, 2022
Advertisement
ಮೋಹನ್ ಭಾಗವತ್ ಅವರು ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವ ವೀಡಿಯೋವನ್ನು ಆರ್‌ಎಸ್‌ಎಸ್ ಅಪ್ಲೋಡ್ ಮಾಡಿದೆ.