ಬೆಂಗಳೂರು: ರಾಜ್ಯ ಸರ್ಕಾರ ಶಿಕ್ಷಣ ಕೇಸರೀಕರಣಕ್ಕೆ ದೊಡ್ಡಮಟ್ಟದಲ್ಲಿ ಪ್ರಯತ್ನ ನಡೆಸ್ತಿದೆ ಎಂಬ ಆರೋಪ ಆಗಾಗ ಕೇಳಿಬರುತ್ತಲೇ ಇರುತ್ತೆ. ಇದಕ್ಕೆ ಪೂರಕ ಎಂಬಂತೆ ಕೋಲಾರ ಮತ್ತು ಉತ್ತರ ಕನ್ನಡ ಜಿಲ್ಲೆಯ ಮೋರಾರ್ಜಿ (Morarji Desai) ಶಾಲೆಗಳಲ್ಲಿ ಪ್ರಶಿಕ್ಷಾ ವರ್ಗ ನಡೆಸಲು ಸಮಾಜಕಲ್ಯಾಣ ಸಚಿವರು ಅನುಮತಿ ನೀಡಿದ್ದಾರೆ. ಆದರೆ ನೇರವಾಗಿ ಎಲ್ಲಿಯೂ ಆರ್‌ಎಸ್‍ಎಸ್ (RSS) ಹೆಸರು ಉಲ್ಲೇಖವಾಗಿಲ್ಲ.
Advertisement
ಕೋಲಾರದಲ್ಲಿ (Kolar) ಪ್ರೇರಣಾ ಪ್ರತಿಷ್ಠಾನದ ಹೆಸರಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ಷಯ ಸೇವಾ ಪ್ರತಿಷ್ಠಾನದ ಹೆಸರಲ್ಲಿ ಪ್ರಶಿಕ್ಷಾ ವರ್ಗ ನಡೆಸಲು ಕೋಟಾ ಶ್ರೀನಿವಾಸ್ ಪೂಜಾರಿ ಪರ್ಮೀಷನ್ ಕೊಟ್ಟಿದ್ದಾರೆ. ಅಕ್ಟೋಬರ್ 7ರಿಂದ ಮುಳಬಾಗಲಿನ ಕೂತಾಂಡ್ಲಹಳ್ಳಿಯ ಮೋರಾರ್ಜಿ ಶಾಲೆಯಲ್ಲಿ ಈ ಶಿಬಿರ ನಡೀತಿದೆ. ಇದ್ರಲ್ಲಿ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ. ಹೊರಗಿನವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಇದೇ 16ಕ್ಕೆ ಮುಳಬಾಗಲಿನಲ್ಲಿ ಆರ್‌ಎಸ್‍ಎಸ್ ಪಥಸಂಚಲನ ಕೂಡ ಆಯೋಜಿಸಿದೆ. ಇದಕ್ಕೆ ಎಸ್‍ಎಫ್‍ಐ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
Advertisement
Advertisement
ಈ ಶಿಬಿರದಲ್ಲಿ ಶಸ್ತ್ರಾಸ್ತ್ರ ಬಳಕೆ ಆಗ್ತಿದೆ. ಸಮಾಜಘಾತುಕ ಕೃತ್ಯಗಳಿಗೆ ಪ್ರಚೋದನೆ ನೀಡಲಾಗ್ತಿದೆ ಎಂದು ಎಸ್‍ಎಫ್‍ಐ ಆಪಾದಿಸಿದೆ. ಆದರೆ ಕೋಟಾ ಶ್ರೀನಿವಾಸಪೂಜಾರಿ ಮಾತ್ರ, ಆರ್‌ಎಸ್‍ಎಸ್‍ಗೆ ಅನುಮತಿ ನೀಡಿಲ್ಲ. ದೇಶ ಮೊದಲು ಎನ್ನುವ ಸಂಸ್ಥೆಗಳ ಶಿಬಿರಕ್ಕೆ ಅನುಮತಿ ಕೊಟ್ಟಿದ್ದೇವೆ. ಇದೇನು ಹೊಸದಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಯಚೂರಿಗೆ ಬರಲಿದೆ ಏಮ್ಸ್, ಮಂತ್ರಾಲಯ ಸೇತುವೆಗೆ ಬಿಎಸ್‌ವೈ ಹೆಸರು: ಸಿಎಂ ಬೊಮ್ಮಾಯಿ
Advertisement
ಸಚಿವ ಸುನೀಲ್ ಕುಮಾರ್ ಕೂಡ ಈ ಶಿಬಿರದ ಪರ ಬ್ಯಾಟ್ ಮಾಡಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ, ಕೋಲಾರದ ಆರ್‌ಎಸ್‍ಎಸ್ ಘಟಕ ಹಂಚಿಕೆ ಮಾಡಿದ ಪಾಂಪ್ಲೆಟ್‍ನಲ್ಲಿ ಪ್ರಾಶಿಕ್ಷಾ ವರ್ಗಾ ಆಯೋಜಿಸುತ್ತಿರುವ ಬಗ್ಗೆ ಹೇಳಿಕೊಂಡಿದೆ. ಇದನ್ನೂ ಓದಿ: 2005ರಲ್ಲೇ ನಾನು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷನಾಗಬೇಕೆಂದು ಸೋನಿಯಾ ಬಯಸಿದ್ದರು: ಮಲ್ಲಿಕಾರ್ಜುನ ಖರ್ಗೆ