ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಬಂಧನದ ಬಳಿಕ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದೆ. ಹಲವು ನಗರಗಳಲ್ಲಿ ನಡೆದಿರುವ ಘರ್ಷಣೆಗೆ ಹತ್ತಾರು ಜನ ಬಲಿಯಾಗಿ ನೂರಾರು ಜನರು ಗಾಯಗೊಂಡಿದ್ದಾರೆ. ಇದೀಗ ಪಾಕಿಸ್ತಾನದಲ್ಲಿ ಮುಂದುವರಿದಿರುವ ಈ ಎಲ್ಲಾ ಹಿಂಸಾಚಾರಕ್ಕೂ ಬಿಜೆಪಿ (BJP) ಹಾಗೂ ಆರ್‌ಎಸ್‌ಎಸ್ (RSS) ಹೊಣೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರ ಆಪ್ತರೊಬ್ಬರು ಆರೋಪಿಸಿದ್ದಾರೆ.
ಪಾಕಿಸ್ತಾನದ ಹಿಂಸಾಚಾರದ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಷರೀಫ್ ಆಪ್ತ ಸಹಾಯಕ ಅತ್ತ ತರಾರ್ (Atta Tarar), ಪಾಕಿಸ್ತಾನದಲ್ಲಿ ಬೆಂಕಿ ಹಚ್ಚುತ್ತಿರುವ ಹಾಗೂ ವಿಧ್ವಂಸಕರ ಕೃತ್ಯಗಳಲ್ಲಿ ಭಾಗಿಯಾದವರು ಎಲ್ಲರೂ ಭಾರತದ ಆರ್‌ಎಸ್‌ಎಸ್ ಹಾಗೂ ಬಿಜೆಪಿಯಿಂದ ಕಳುಹಿಸಲ್ಪಟ್ಟವರು. ಇಷ್ಟಕ್ಕೇ ನಿಲ್ಲದೇ ಪಾಕಿಸ್ತಾನದ ಪರಿಸ್ಥಿತಿಯನ್ನು ಕಂಡು ಭಾರತದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಮಂಗಳವಾರ ಪ್ರಕರಣವೊಂದರ ವಿಚಾರಣೆಗೆಂದು ಇಸ್ಲಾಮಾಬಾದ್‌ನ ಹೈಟೋರ್ಟ್ಗೆ ತೆರಳುತ್ತಿದ್ದ ವೇಳೆ ಇಮ್ರಾನ್ ಖಾನ್ ಅವರನ್ನು ಪ್ಯಾರಾ ಮಿಲಿಟರಿ ಪಡೆ ಬಂಧಿಸಿತು. ಇದಾದ ಬಳಿಕ ಖಾನ್ ಬೆಂಬಲಿಗರು ಬಂಧನವನ್ನು ವಿರೋಧಿಸಿ ಪಾಕಿಸ್ತಾನದಾದ್ಯಂತ ಭಾರೀ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಸುಳ್ಳು, ಆಧಾರ ರಹಿತ: ಮಾರಿಷಸ್ ಸಂಸತ್ತಿಗೆ ಸರ್ಕಾರ ಉತ್ತರ
ಇಲ್ಲಿಯವರೆಗೆ ಪಾಕಿಸ್ತಾನದಾದ್ಯಂತ ಪ್ರತಿಭಟನೆ ನಡೆಸಿದ ಸಾವಿರಾರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಘರ್ಷಣೆಯಲ್ಲಿ 8ಕ್ಕೂ ಹೆಚ್ಚು ಜನರ ಸಾವಾಗಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂರು ಬುಕ್ಕಿಗಳ ಬಂಧನ – 1.84 ಕೋಟಿ ರೂ. ವಶ