– ನಾವು ಅಧಿಕಾರಕ್ಕೆ ಬಂದ್ರೆ ಆರ್‌ಎಸ್‌ಎಸ್‌ಗೆ ಇಡಿ ರೇಡ್ ಮಾಡಿಸ್ತೇವೆ
– ಬಿಜೆಪಿ ನಾಯಕರ ಯಾರ ಮಕ್ಕಳು ಆರ್‌ಎಸ್‌ಎಸ್ ಚಡ್ಡಿ ಹಾಕಿದ್ದಾರೆ? ಎಂದ ಸಚಿವ
ಬೆಂಗಳೂರು: `ಆರ್‌ಎಸ್‌ಎಸ್ ಬ್ಯಾನ್’ (RSS Ban) ತೆಗೆದದ್ದು ತಪ್ಪಾಯ್ತು, ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದ್ರೆ ಆರ್‌ಎಸ್‌ಎಸ್‌ಗೆ ಇ.ಡಿ ರೇಡ್ ಮಾಡಿಸ್ತೇವೆ ಎಂದಿರುವ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ.
ಕಾಂಗ್ರೆಸ್ ಮುಕ್ತ ಭಾರತ ಆಗುತ್ತೆ
ಯಡಿಯೂರಪ್ಪ (BS Yediyurappa) ಮಾತಾಡಿ ಪ್ರಿಯಾಂಕ್ ಖರ್ಗೆಗೆ ಅಧಿಕಾರದ ಮದ. ಹುಚ್ಚು ಹೇಳಿಕೆ ಕೊಡ್ತಿದ್ದಾರೆ. ದೇಶದ ಕ್ಷಮೆ ಕೇಳಿ ಅಂತ ಆಗ್ರಹಿಸಿದ್ದಾರೆ. ವಿಪಕ್ಷ ನಾಯಕ ಅಶೋಕ್ (R Ashok) ಪ್ರತಿಕ್ರಿಯಿಸಿ, ಆರ್‌ಎಸ್‌ಎಸ್ ಸಂಸ್ಥೆಯನ್ನು ಯಾರಾದ್ರೂ ಮುಟ್ಟಿದರೆ ಸರ್ವನಾಶ ಆಗ್ತಾರೆ. ಮುಂದಿನ ಚುನಾವಣೆಗೆ ಕಾಂಗ್ರೆಸ್ ಮುಕ್ತ ಭಾರತ ಆಗಿರುತ್ತದೆ ಅಂದಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಅಧಿಕಾರದ ಮದದಿಂದ ಆರ್‌ಎಸ್‌ಎಸ್ ಬ್ಯಾನ್ ಮಾಡ್ತೀವಿ ಅಂತಿದ್ದಾರೆ: ಯಡಿಯೂರಪ್ಪ ಕಿಡಿ
ಡಿವಿ ಸದಾನಂದಗೌಡರು ಮಿನಿ ಖರ್ಗೆ ವ್ಯಾಪ್ತಿ ಮೀರಿ ಹೋಗ್ತಿದ್ದಾರೆ. ಸಂಘವನ್ನು ಮುಟ್ಟಿದರೆ ಭಸ್ಮ ಆಗಿ ಹೋಗ್ತಾರೆ ಅಂತ ಕಿಡಿಕಾರಿದ್ದಾರೆ. ಪ್ರಿಯಾಂಕ್‌ಗೆ ಮೆಂಟಲ್ ಅಂತ ಮೈಸೂರಿನಲ್ಲಿ ಶಾಸಕ ಶ್ರೀವತ್ಸ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ತಾನೇ RSS ಬ್ಯಾನ್ ಮಾಡೋದು – ಪ್ರಿಯಾಂಕ್ ಖರ್ಗೆಗೆ ಶಾಸಕ ಶ್ರೀವತ್ಸ ತಿರುಗೇಟು
ಇದಕ್ಕೆ ಕಲಬುರಗಿಯಲ್ಲಿ ಕೌಂಟರ್ ಕೊಟ್ಟಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿ ನಾಯಕರ ಯಾರ ಮಕ್ಕಳು ಆರ್‌ಎಸ್‌ಎಸ್ ಚಡ್ಡಿ ಹಾಕಿದ್ದಾರೆ? ಯಾರು ಶಾಖೆಗೆ ಹೋಗಿದ್ದಾರೆ..? ಅಂತ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕರ ಪುತ್ರರಿಗಾಗಿ ʻಸೇಲ್ಫಿಸ್ ಇನ್ ಶಾಖಾʼ ಅಂತ ಒಂದು ಅಭಿಯಾನ ಮಾಡೋಣ, ಆಗ ಬಿಜೆಪಿ ಯಾವ ನಾಯಕರ ಮಕ್ಕಳು ಶಾಖೆಗೆ ಹೋಗಿದ್ದಾರೆ ಎಂಬುದು ಗೋತ್ತಾಗುತ್ತದೆ. ಇನ್ನೂ ಆರ್‌ಎಸ್‌ಎಸ್ ಅನ್ನು ರಾಜಕೀಯ ಪಕ್ಷ ಅಲ್ಲ ತರಬೇಡಿ ಅಂತಾ ಮುಖಂಡರು ಹೇಳುತ್ತಿದ್ದಾರೆ. ಹಾಗಿದ್ರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯಾಕೆ ಆರ್‌ಎಸ್‌ಎಸ್‌ನವರು 4 ಜನರ ಹೆಸರು ಕಳಿಸಿದ್ದಾರೆ? ಕರಾವಳಿಯ ಬಹುತೇಕ ಶಾಸಕರು ಆರ್‌ಎಸ್‌ಎಸ್‌ನಿಂದ ಬಂದವರಾಗಿದ್ದಾರೆ ಎಂದು ಕುಟುಕಿದ್ದಾರೆ.
ಇನ್ನೂ ಮಲ್ಲಿಕಾರ್ಜುನ ಖರ್ಗೆಯವರನ್ನ ಸಿಎಂ ಮಾಡೋಕೆ ದಲಿತ ನಾಯಕರ ರಣತಂತ್ರ ವಿಚಾರವಾಗಿ ರಿಯಾಕ್ಟ್ ಮಾಡಿದ ಪ್ರಿಯಾಂಕ್ ಖರ್ಗೆ, ಈಗಾಗಲೇ ಈ ಬಗ್ಗೆ ಖರ್ಗೆ ಸಾಹೇಬ್ರೆ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಕೂಡ ಹೇಳಿದ್ದಾರೆ. ಅದು ಮುಗಿದ ಅಧ್ಯಾಯ ಅಂತ ಹೇಳಿದ್ದಾರೆ. ಇದನ್ನೂ ಓದಿ: ಜನಸೇವೆಗಾಗಿ 30-40 ವರ್ಷಗಳ ಕಾಲ ಬದುಕುವ ಆಶಯವಿದೆ – ಉತ್ತರಾಧಿಕಾರಿ ವದಂತಿಗೆ ತೆರೆ ಎಳೆದ ದಲೈ ಲಾಮಾ