ನವದೆಹಲಿ: ಗುಜರಾತ್ ರಾಜ್ಯಸಭಾ ಚುನಾವಣೆ ಕಾಂಗ್ರೆಸ್ ಶಾಸಕರಿಗೆ ಆಶ್ರಯ ನೀಡಿದ್ದ ರಾಜ್ಯ ಸರ್ಕಾರ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಶಾಸಕರಿಗೆ ರಾಜಾತಿಥ್ಯದ ನೇತೃತ್ವ ವಹಿಸಿದ್ದ ಇಂಧನ ಸಚಿವ ಡಿಕೆ ಶಿವಕುಮಾರ್ ಐಟಿ ದಾಳಿಗೆ ಗುರಿಯಾಗಿದ್ದಾರೆ.
ಬುಧವಾರ ಬೆಳ್ಳಂಬೆಳಗ್ಗೆ ಗುಜರಾತ್ ಶಾಸಕರು ತಂಗಿರುವ ಬಿಡದಿಯ ಈಗಲ್‍ಟನ್ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೆ, ಬೆಂಗಳೂರಿನ ಸದಾಶಿವನಗರದ ನಿವಾಸ, ಕನಕಪುರದ ಹುಟ್ಟೂರು ದೊಡ್ಡಹಾಲಹಳ್ಳಿ ನಿವಾಸ, ಸಹೋದರ-ಸಂಸದ ಡಿ.ಕೆ. ಸುರೇಶ್ ತೋಟದ ಮನೆ, ಡಿಕೆಶಿ ಅತ್ಯಾಪ್ತ ಮತ್ತು ಮೇಲ್ಮನೆ ಸದಸ್ಯ ಎಸ್.ರವಿ, ದೆಹಲಿಯಲ್ಲಿನ ಆಪ್ತರು, ಸ್ನೇಹಿತರು, ಮೈಸೂರಿನ ಅತ್ತೆ ಮನೆಯೂ ಸೇರಿದಂತೆ ಸುಮಾರು 40 ಕಡೆ ಐಟಿ ಅಧಿಕಾರಿಗಳು ಏಕಾಏಕಿ ದಾಳಿ ನಡೆಸುವ ಮೂಲಕ ರಾಜ್ಯದ ಪವರ್‍ಫುಲ್ ಮಿನಿಸ್ಟರ್ ಡಿಕೆಶಿಗೆ ಬಿಗ್ ಶಾಕ್ ನೀಡಿದ್ದಾರೆ.
Advertisement
ಬೆಳಗ್ಗೆ 12 ಗಂಟೆಗೆ ಸದಾಶಿವನಗರ ನಿವಾಸಕ್ಕೆ ಡಿಕೆಶಿ ಅವರನ್ನ ಕರೆದುತಂದ ಐಟಿ ಅಧಿಕಾರಿಗಳು ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ, ಈಗಲ್‍ಟನ್ ರೆಸಾರ್ಟ್‍ನಲ್ಲಿ ಐಟಿ ವಿಚಾರಣೆ ವೇಳೆ ಡಿಕೆಶಿ ಹರಿದು ಹಾಕಿದರು ಎನ್ನಲಾದ ದಾಖಲೆಯಲ್ಲಿ ಮತ್ತಷ್ಟು ನಾಯಕರ ಹೆಸರು ಇದೆ ಎನ್ನಲಾಗಿದೆ. ಇವರೆಲ್ಲರ ಮೇಲೆಯೂ ದಾಳಿ ನಡೆಯುವ ಸಾಧ್ಯತೆ ಇದೆ. ಇನ್ನು, ಜಾರಿ ನಿರ್ದೇಶನಾಲಯ ಎಂಟ್ರಿಯಾಗುತ್ತಿದ್ದು, ಐಟಿಯಿಂದ ಮಾಹಿತಿ ಪಡೆದು ಎಫ್‍ಐಆರ್ ದಾಖಲಿಸಿದ್ದೇ ಆದಲ್ಲಿ ಡಿಕೆಶಿ ಅರೆಸ್ಟ್ ಆಗುವ ಸಾಧ್ಯತೆ ಇದೆ.
Advertisement
ದೆಹಲಿಯಲ್ಲಿ ಡಿಕೆ ಶಿವಕುಮಾರ್ ಅವರ 2 ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ 7.5 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.
Advertisement
Advertisement
ಪವರ್’ ಮಿನಿಸ್ಟರ್ ಡಿಕೆ ಶಿವಕುಮಾರ್ ಬಳಿ ಆಸ್ತಿ ಎಷ್ಟಿದೆ? https://t.co/pxgqKP3sRX#congress #karnataka #dkshivakumar #itraid #election pic.twitter.com/jyqtwlvkxX
— PublicTV (@publictvnews) August 2, 2017
Bangalore: D.K.Shivakumar's Wife Usha Under Interrogation Inside Sadashivanagar Residence: https://t.co/Gn3hG51oFK via @YouTube
— PublicTV (@publictvnews) August 2, 2017
ಎಬಿವಿಪಿ, ಆರ್‍ಎಸ್‍ಎಸ್, ಬಜರಂಗದಳದ ರೀತಿಯಲ್ಲೇ ಐಟಿ, ಇಡಿ, ಸಿಬಿಐ ಬಿಜೆಪಿಗೆ ಕಾರ್ಯನಿರ್ವಹಿಸುತ್ತಿವೆ: ದಿನೇಶ್ ಗುಂಡೂರಾವ್ https://t.co/SPwWJLpGDl#Bengaluru pic.twitter.com/CR2xB8WCLS
— PublicTV (@publictvnews) August 2, 2017
ಪ್ರಜಾಪ್ರಭುತ್ವದ ಕೊಲೆ, ತನ್ನ ವಿರುದ್ಧ ಧ್ವನಿ ಎತ್ತುವವರ ಮೇಲೆ ಬಿಜೆಪಿಯಿಂದ ಐಟಿ ದಾಳಿ: ಸಿಎಂ ಕಿಡಿ https://t.co/7TR7FArmjv @Cm#ITRaid #DKShivakumar pic.twitter.com/OFGVv2iSOw
— PublicTV (@publictvnews) August 2, 2017
ಬಿಜೆಪಿಯ ಸಿದ್ದೇಶ್ವರ್ ಮನೆ ಮೇಲೆ ಐಟಿ ದಾಳಿ ನಡೆದಿದೆ: ಕೈ ಆರೋಪಕ್ಕೆ ಸಿಟಿ ರವಿ ಸಮರ್ಥನೆ https://t.co/oeGr0rJM89@withDKS @ArshadRizwan @CTRavi_BJP pic.twitter.com/SihMzkjFCW
— PublicTV (@publictvnews) August 2, 2017
ನನ್ನ ಮನೆ ಮೇಲೆ #ITraid ನಡೆಸಿದ್ರೆ ಐಟಿ ಅಧಿಕಾರಿಗಳಿಗೆ ಹೂ ಗುಚ್ಛ ನೀಡಿ ಸ್ವಾಗತಿಸುತ್ತೇನೆ: @reachmbp https://t.co/EGLSdvXH5c #DKShivakumar pic.twitter.com/i22ZOdHaSf
— PublicTV (@publictvnews) August 2, 2017