– ಬೈಕ್ ಸಹಿತ ತುಂಗಾ ನಾಲೆಗೆ ಹಾರಿದ ಸಿಬ್ಬಂದಿ
ದಾವಣಗೆರೆ: ಪ್ರಮೋಷನ್ (Pramotion) ನೀಡುವುದಾಗಿ 50 ಸಾವಿರ ರೂ. ಲಂಚ ಪಡೆದು ಪ್ರಮೋಷನ್ ನೀಡದ ಹಿನ್ನೆಲೆ ಸೆಲ್ಫಿ ವೀಡಿಯೋ ಮಾಡಿಟ್ಟು ಬ್ಯಾಂಕ್ ಸಿಬ್ಬಂದಿ (Bank Staff) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ (Honnali) ತಾಲೂಕಿನ ಮಾದನಬಾವಿ ಗ್ರಾಮದ ಬಳಿ ನಡೆದಿದೆ.
ಮೋಹನ್ ಕುಮಾರ್ ಮೃತ ಬ್ಯಾಂಕ್ ಸಿಬ್ಬಂದಿ. ಮೋಹನ್ ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದು, ಪ್ರಮೋಷನ್ ನೀಡುವುದಾಗಿ ಹೇಳಿ ಅಧಿಕಾರಿಗಳು ಮೋಹನ್ ಬಳಿ ನಕಲಿ ಅಂಕಪಟ್ಟಿಗೆ 50 ಸಾವಿರ ಲಂಚ ಪಡೆದಿದ್ದರು. ಮೋಹನ್ ಸಾಲ ಮಾಡಿ ನಕಲಿ ಅಂಕಪಟ್ಟಿಗೆ ಹಣ ಕೊಟ್ಟಿದ್ದರು. ಕೊನೆಗೆ ಯಾವುದೇ ಪ್ರಮೋಷನ್ ನೀಡದೇ, ಇತ್ತ ಸಾಲ ಬಾಧೆ ಹೆಚ್ಚಾಗಿ ಮೋಹನ್ ನೊಂದಿದ್ದರು. ನನ್ನ ಸಾವಿಗೆ ಬ್ಯಾಂಕ್ ಸಿಬ್ಬಂದಿ ತಿಪ್ಪೇಸ್ವಾಮಿ, ನಕಲಿ ಅಂಕಪಟ್ಟಿ ಮಾಡಿಕೊಟ್ಟ ಕೊಟ್ರೇಶ್ ಕಾರಣ ಎಂದು ಸೆಲ್ಫಿ ವೀಡಿಯೋದಲ್ಲಿ ಮೋಹನ್ ಹೇಳಿದ್ದಾರೆ. ನನಗೆ ನ್ಯಾಯ ಒದಗಿಸುವಂತೆ ಸೆಲ್ಫಿ ವೀಡಿಯೋ ಮುಖಾಂತರ ಮಾಜಿ ಸಚಿವ ಎಂಪಿ ರೇಣುಕಾಚಾರ್ಯಗೆ ಮನವಿ ಕೂಡ ಮಾಡಿದ್ದಾರೆ. ಬಳಿಕ ಬೈಕ್ ಸಹಿತ ತುಂಗಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನೇಪಾಳದಲ್ಲಿ ವಿನಾಶಕಾರಿ ಪ್ರವಾಹ – 700ರ ಗಡಿ ದಾಟಿದ ಸಾವಿನ ಸಂಖ್ಯೆ; 2,500 ಮಂದಿ ಇನ್ನೂ ಕಣ್ಮರೆ
ಸದ್ಯ ತುಂಗಾ ನಾಲೆಯಲ್ಲಿ ಮೋಹನ್ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ನಾಲೆಯಲ್ಲಿ ಬೈಕ್ ಪತ್ತೆಯಾಗಿದ್ದು, ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: KPSC ಬಗ್ಗೆ ಸಾರ್ವಜನಿಕರಿಗೆ ಅಸಹ್ಯಕರ ಭಾವನೆ ಮೂಡಿದೆ: ಹೆಚ್‌ಡಿಕೆ
