– ಮಾರುಕಟ್ಟೆಯಲ್ಲಿದ್ದ 50% ರಷ್ಟು 2,000ದ ನೋಟುಗಳು ವಾಪಸ್
ನವದೆಹಲಿ: 500 ರೂ. ನೋಟುಗಳನ್ನು (Rs. 500 Note) ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಅಥವಾ 1,000 ರೂ. ನೋಟುಗಳನ್ನು (Rs. 1,000 Note) ಮರು ಪರಿಚಯಿಸುವ ಯಾವುದೇ ಯೋಜನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಂದಿಲ್ಲ ಎಂದು ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಗುರುವಾರ ಹೇಳಿದ್ದಾರೆ.
Advertisement
ಆರ್ಥಿಕ ವರ್ಷ 2024 ರ ಎರಡನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಅನಾವರಣಗೊಳಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಬಿಐ 500 ರೂ. ನೋಟುಗಳನ್ನು ಹಿಂತೆಗೆದುಕೊಳ್ಳುವ ಅಥವಾ 1,000 ರೂ. ಮುಖಬೆಲೆಯ ನೋಟುಗಳನ್ನು ಮರು ಪರಿಚಯಿಸುವ ಬಗ್ಗೆ ಯೋಚಿಸುತ್ತಿಲ್ಲ, ಊಹಾಪೋಹ ಮಾಡದಂತೆ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.
Advertisement
Advertisement
2,000 ನೋಟುಗಳನ್ನು (Rs. 2,000 Note) ಚಲಾವಣೆಯಿಂದ ಹಿಂದೆ ಪಡೆದ ಬಳಿಕ ಮಾರುಕಟ್ಟೆಯಲ್ಲಿದ್ದ 3.62 ಲಕ್ಷ ಕೋಟಿ ರೂ. ಪೈಕಿ 1.82 ಲಕ್ಷ ಕೋಟಿ ರೂ. ಬ್ಯಾಂಕುಗಳಿಗೆ ಮರಳಿದೆ. ಇದರ ಪ್ರಮಾಣ 50% ರಷ್ಟಾಗಿದೆ. ಬ್ಯಾಂಕುಗಳಿಗೆ ಬಂದ ಹಣದ ಪೈಕಿ 85% ರಷ್ಟು ನೋಟುಗಳು ಬ್ಯಾಂಕ್ ಠೇವಣಿಗಳಾಗಿ ಹಿಂತಿರುಗಿದರೆ, ಉಳಿದ ಪ್ರಮಾಣದ ಹಣ ನೋಟು ವಿನಿಮಯಕ್ಕಾಗಿ ಬಂದಿವೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಖಲಿಸ್ತಾನಿ ಬೆಂಬಲಿಗರಿಂದ ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರ ಮೆರವಣಿಗೆ
Advertisement
ಆರ್‌ಬಿಐ ಮೇ 19 ರಂದು ತನ್ನ ಅತ್ಯಧಿಕ ಮೌಲ್ಯದ 2,000 ರೂ. ಕರೆನ್ಸಿ ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತದೆ. ಆದರೆ ಜನರು ಸೆಪ್ಟೆಂಬರ್ 30 ರವರೆಗೆ ದಿನಕ್ಕೆ 20,000 ರೂ.ವರೆಗೆ ಠೇವಣಿ ಅಥಾವ ವಿನಿಮಯ ಮಾಡುವ ಮೂಲಕ ಬದಲಾಯಿಸಿಕೊಳ್ಳಬಹುದು ಎಂದು ಆರ್‌ಬಿಐ ಹೇಳಿದೆ. ಇದನ್ನೂ ಓದಿ: ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ: ಮಧು ಬಂಗಾರಪ್ಪ ಸ್ಪಷ್ಟನೆ