ಗಾಂಧಿನಗರ: 500 ಮತ್ತು ಸಾವಿರ ರೂ. ಮುಖಬೆಲೆಯ ನೋಟುಗಳು ಬ್ಯಾನ್ ಆಗಿ ಸುಮಾರು 2 ವರ್ಷಗಳು ಕಳೆದಿದೆ. ಆದರೂ 500 ಮತ್ತು 1000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗುತ್ತಿವೆ. ಈಗ ಗುಜರಾತಿನಲ್ಲಿ ಹಳೆಯ ನೋಟಿನ ಬರೋಬ್ಬರಿ 3.36 ಕೋಟಿ ಹಣ ಪತ್ತೆಯಾಗಿದೆ.
ಸೂರತ್ ನ ಕಟೋದರದಲ್ಲಿ 3.36 ಕೋಟಿ ರೂ. ಮೊತ್ತದ ಅಮಾನೀಕರಣಗೊಂಡಿರುವ ನೋಟುಗಳು ಪತ್ತೆಯಾಗಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಗಗನೀಶ್ ರಜ್‍ಪೂತ್, ಮೊಹಮ್ಮದ್ ಅಲಿ ಶೇಖ್ ಹಾಗೂ ಲತೀಫ್ ಶೇಖ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಪೊಲೀಸರು ಕಟೋದರ ಪ್ರದೇಶದಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಕಾರೊಂದರಲ್ಲಿ 1 ಸಾವಿರ ಹಾಗೂ 500 ರೂ.ಗಳ ನಿಷೇಧಿತ ನೋಟುಗಳು ಸಿಕ್ಕಿದೆ. ಕಾರಿನಲ್ಲಿ ಪತ್ತೆಯಾದ ಹಣದಲ್ಲಿ ಹಳೆಯ 500 ರೂ. ಮುಖಬೆಲೆಯ 1.20 ಕೋಟಿ ರೂ. (24 ಸಾವಿರ ನೋಟುಗಳು) ಹಾಗೂ 1 ಸಾವಿರ ರೂ. ಮುಖಬೆಲೆಯ 2.16 ಕೋಟಿ ರೂ. (21,600 ನೋಟುಗಳು) ಪತ್ತೆಯಾಗಿದೆ. ಒಟ್ಟು 3.36 ಕೋಟಿ ಹಣ ಸಿಕ್ಕಿದ್ದು, ಸೂರತ್ ಪೊಲೀಸರು ಹಣವನ್ನು ವಶಪಡಿಸಿಕೊಂಡಿದ್ದಾರೆ.
Advertisement
ಅಷ್ಟೇ ಅಲ್ಲದೇ ಆರೋಪಿಗಳ ಬಳಿ ಇದ್ದ ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದೇವೆ. ಸದ್ಯಕ್ಕೆ ಸಿಕ್ಕಿರುವ ಹಣದ ಸಂಪೂರ್ಣ ಮಾಹಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv