ಬೆಂಗಳೂರು: ಕುಮಾರಸ್ವಾಮಿ ಲೇಔಟ್‍ನ 2 ಕೋಟಿ ರೂ. ದರೋಡೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪತ್ನಿ ಮಾಡಿದ ಸಾಲ ತೀರಿಸಲು ಪತಿ ಈ ಕೃತ್ಯಕ್ಕೆ ಇಳಿದ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಬಂಧಿತ ಇಬ್ಬರು ಆರೋಪಿಗಳ ಪೈಕಿ ಒಬ್ಬನಾಗಿರುವ ಸುನೀಲ್‍ಗೆ ಇಬ್ಬರು ಪತ್ನಿಯರು. ಇವನು ತನ್ನ ಪತ್ನಿ ಪುಷ್ಪ ಮಾಡಿದ ಸಾಲ ತೀರಿಸಲು ಕನ್ನ ಹಾಕಿದ್ದ. ಇದನ್ನೂ ಓದಿ: ಮದ್ಯದ ಬಾಟಲಿಯಿಂದ ಸಿಕ್ಕಿ ಬಿದ್ರು 2 ಕೋಟಿ ಕದ್ದ ಖದೀಮರು
Advertisement
ಸುನೀಲ್, ಲಕ್ಷ್ಮಿ ಮತ್ತು ಪುಷ್ಪ ಇಬ್ಬರನ್ನು ಮದುವೆಯಾಗಿದ್ದನು. ಎರಡನೇ ಹೆಂಡತಿ ಪುಷ್ಪ ತಲಘಟ್ಟ ಪುರದಲ್ಲಿ ಕಳ್ಳತನದ ಆರೋಪದಲ್ಲಿ ಜೈಲು ಪಾಲಾಗಿದ್ದಳು. ಈ ಹಿನ್ನೆಲೆ ಸುನೀಲ್ ಶ್ಯೂರಿಟಿ ಕೊಟ್ಟು ಬೇಲ್ ನೀಡಿ ಹೆಂಡತಿಯನ್ನು ಬಿಡಿಸಿಕೊಂಡು ಬಂದಿದ್ದ.
Advertisement
ಈ ನಡುವೆ ಸುನೀಲ್ ಮೂರು ತಿಂಗಳ ಹಿಂದೆ ಜೈಲು ಪಾಲಾಗಿದ್ದ. ಗಂಡನನ್ನು ಪುಷ್ಪಾ ಕೋರ್ಟ್‍ನಿಂದ ಬಿಡಿಸಿದ್ದಳು. ಈ ಸಂಬಂಧ ಕೋರ್ಟ್ ಶ್ಯೂರಿಟಿ, ವಕೀಲರ ಶುಲ್ಕಕ್ಕಾಗಿ 2 ಲಕ್ಷ ರೂ. ಸಾಲ ಮಾಡಿದ್ದಳು. ಈ ಸಾಲ ತೀರಿಸುವ ಉದ್ದೇಶದಿಂದ ಮನೆ ದರೋಡೆಗೆ ದಂಪತಿ ಸ್ಕೆಚ್ ಹಾಕಿದ್ದರು.
Advertisement
Advertisement
ಸುನೀಲ್ ಆಟೋದಲ್ಲಿ ಕುಳಿತಿದ್ದಾಗ ಸಂದೀಪ್ ಅವರ ತಂದೆ ಮೋಹನ್ ಲಾಲ್‍ಗೆ ವ್ಯಕ್ತಿಯೊಬ್ಬ 2 ಕಂತೆ ಹಣ ನೀಡುವುದನ್ನು ನೋಡಿದ್ದ. 2 ಕಂತೆ ಹಣ ನೀಡಿದ್ದನ್ನು ಕಂಡು ಇವರ ಮನೆಯಲ್ಲಿ ಭಾರೀ ಹಣ ಇದೆ ಎಂದು ತಿಳಿದು ದರೋಡೆಗೆ ಸ್ಕೆಚ್ ಹಾಕಿದ್ದ. ಗಂಡನ 2 ಕೋಟಿ ರೂ. ದರೋಡೆಗೆ ಹೆಂಡತಿ ಪುಷ್ಪ ಕೂಡಾ ಸಾಥ್ ಕೊಟ್ಟಿದ್ದಳು. ಇದನ್ನೂ ಓದಿ: 2 ಲಕ್ಷ ದೋಚಲು ಬಂದು 2 ಕೋಟಿ ಕಳ್ಳತನ – ಓನರ್ ಮನೆಗೆ ಐಟಿ, ಇಡಿ, ಎಂಟ್ರಿ ಸಾಧ್ಯತೆ
ಈ ದಂಪತಿ ಜೈಲಿನಿಂದ ಬಿಡುಗಡೆಯಾದ ಮೇಲೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಬಳಿಕ ದಂಪತಿ ಕನಕಪುರದ ರಸ್ತೆಯಲ್ಲಿರುವ ಮಾರುತಿನಗರದಲ್ಲಿ ಸೆಟಲ್ ಆಗಿದ್ದರು.