– ಮಹಾರಾಷ್ಟ್ರ, ಜಾರ್ಖಂಡ್‌ನಲ್ಲೇ 858 ಕೋಟಿ ಸೀಜ್
– 2019ರ ಚುನಾವಣೆಗಿಂತ 7 ಪಟ್ಟು ಹೆಚ್ಚು
ಮುಂಬೈ: ಮಹಾರಾಷ್ಟ್ರ (Maharashtra), ಜಾರ್ಖಂಡ್ ಸೇರಿದಂತೆ ಉಪಚುನಾವಣೆ ನಡೆಯುತ್ತಿರುವ 14 ರಾಜ್ಯಗಳಲ್ಲಿ ಒಟ್ಟು 1,000 ಕೋಟಿ ರೂ. ಮೌಲ್ಯದ ನಗದು, ಮದ್ಯ ಹಾಗೂ ಇತರ ಮಾದಕ ವಸ್ತುಗಳನ್ನು ಚುನಾವಣಾ ಆಯೋಗ (Election Commission) ವಶಪಡಿಸಿಕೊಂಡಿದೆ. ಈ 1,000 ಕೋಟಿ ಪೈಕಿ 858 ಕೋಟಿ ಮೌಲ್ಯದ ವಸ್ತುಗಳನ್ನು ಮಹಾರಾಷ್ಟ್ರ ಜಾರ್ಖಂಡ್‌ನಲ್ಲೇ ವಶಪಡಿಸಿಕೊಳ್ಳಲಾಗಿದೆ ಎಂದು ಆಯೋಗ ಹೇಳಿದೆ.
ಇದು 2019ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ವಶಪಡಿಸಿಕೊಂಡ ಪ್ರಮಾಣಕ್ಕಿಂತ 7 ಪಟ್ಟು ಹೆಚ್ಚು ಹೆಚ್ಚಾಗಿದೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ 103.61 ಕೋಟಿ ರೂ. ಹಾಗೂ ಜಾರ್ಖಂಡ್‌ನಲ್ಲಿ (Jharkhand) 18.76 ಕೋಟಿ ರೂ. ಮೌಲ್ಯದ ನಗದು, ಮದ್ಯ ಹಾಗೂ ಇತರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೇ ವರ್ಷ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ದೇಶಾದ್ಯಂತ ಒಟ್ಟು 8,889 ಕೋಟಿ ಮೌಲ್ಯದ ನಗದು, ಡ್ರಗ್ಸ್, ಮದ್ಯ ಜಪ್ತಿ ಮಾಡಿತ್ತು.
- Advertisement -
- Advertisement -
ಇದೇ ನವೆಂಬರ್ 20ರಂದು ಜಾರ್ಖಂಡ್‌ನಲ್ಲಿ 2ನೇ ಸುತ್ತಿನ ಮತದಾನ ನಡೆಯಲಿದೆ. ಅದೇ ದಿನ ಮಹಾರಾಷ್ಟ್ರದಲ್ಲಿ 288 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ನವೆಂಬರ್ 23 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: ದೆಹಲಿ | 10, 12ನೇ ತರಗತಿಯವರಿಗೆ ಬೇರೆ ಬಗೆಯ ಶ್ವಾಸಕೋಶಗಳಿಲ್ಲ – ತರಗತಿ ಬಂದ್‌ಗೆ ಸುಪ್ರೀಂ ನಿರ್ದೇಶನ
- Advertisement -
- Advertisement -
ಎಸಿಯಲ್ಲಿತ್ತು 4,500 ಕೆಜಿ ಗಾಂಜಾ ಗಿಡ:
ಮಹಾರಾಷ್ಟ್ರ, ಜಾರ್ಖಂಡ್ ಸೇರಿದಂತೆ 14 ರಾಜ್ಯಗಳಿಗೆ ಉಪಚುನಾವಣೆ ಘೋಷಣೆಯಾದ ದಿನಾಂಕದಿಂದ ಈವರೆಗೆ ನಗದು ಸೇರಿ ಒಟ್ಟು 1,000 ಕೋಟಿ ರೂ. ಮೌಲದು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅವುಗಳಲ್ಲಿ ಕೆಲ ಪ್ರಕರಣಗಳು ಗಮನ ಸೆಳೆದಿವೆ. ಕಾರ್ಯಾಚರಣೆ ಸಂದರ್ಭದಲ್ಲಿ ಪಾಲ್ಘರ್ ಜಿಲ್ಲೆಯ ವಾಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ಜೀಪ್‌ನಿಂದ 3.70 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಬುಲ್ಧಾನಾ ಜಿಲ್ಲೆಯ ಮತ್ತೊಂದು ಪ್ರಕರಣದಲ್ಲಿ ಎಸಿಯಲ್ಲಿ ಬಚ್ಚಿಟ್ಟಿದ್ದ 4.51 ಕೋಟಿ ಮೌಲ್ಯದ 4,500 ಕೆಜಿ ಗಾಂಜಾ ಗಿಡಗಳು ಹಾಗೂ 5.20 ಕೋಟಿ ರೂ. ಮೌಲ್ಯದ ಬೆಳ್ಳಿಯ ಬಾರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತದಾನ ಪೂರ್ಣಗೊಳ್ಳುವವರೆಗೆ ಯಾವುದೇ ಪ್ರಚೋದನೆಗೆ ಒಳಗಾಗದಂತೆ ಅಕ್ರಮ ತಡೆಯುವಂತೆಮು ಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರದಂತೆ ಜಾರ್ಖಂಡ್‌ನಲ್ಲೂ ವಿಶೇಷ ಪ್ರಕರಣದಗಳು ಬೆಳಕಿಗೆ ಬಂದಿವೆ. ಸಾಹಿಬ್‌ಗಂಜ್ ಜಿಲ್ಲೆಯ ರಾಜಮಹಲ್ ಎಸಿಯಲ್ಲಿ 2.26 ಕೋಟಿ ಮೌಲ್ಯದ ಅಕ್ರಮ ಗಣಿಗಾರಿಕೆ ವಸ್ತುಗಳು ಪತ್ತೆಯಾಗಿವೆ. ಮತ್ತೊಂದು ಪ್ರಕರಣದಲ್ಲಿ ದಾಲ್ತೋಂಗಂಜ್‌ನಲ್ಲಿ 687 ಕೆಜಿ ಗಸಗಸೆ ಸ್ಟ್ರಾ, ಹಜಾರಿಬಾಗ್‌ನಲ್ಲಿ 48.18 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ವಿವರಿಸಿದೆ. ಇದನ್ನೂ ಓದಿ: ಮಣಿಪುರ ಗಲಭೆ: ಅಮಿತ್ ಶಾ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ – 50 ಕೇಂದ್ರೀಯ ಭದ್ರತಾ ಪಡೆ ನಿಯೋಜನೆ