ಕಾರವಾರ: ದಾಖಲೆ ಇಲ್ಲದೇ ಸರ್ಕಾರಿ ವಾಹನದಲ್ಲಿ ಆಕ್ರಮವಾಗಿ ಸಾಗಿಸುತ್ತಿದ್ದ 7 ಲಕ್ಷ ಹಣ ರೂ. ವನ್ನು ವಶಪಡಿಸಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.
ಬೆಂಗಳೂರು – ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206 ರ ಸಾಗರ್ ರೆಸಿಡೆನ್ಸಿ ಹೋಟಲ್ ಬಳಿ ಹೊನ್ನಾವರ ಪೊಲೀಸರು ವಾಹನ ತಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Advertisement
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜ್ಯೂನಿಯರ್ ಎಂಜಿನಿಯರ್ ಗಂಗಾ ನಾಯ್ಕ್ ಕುಮಟಾ ದ ಎಂಬುವವರು ದಾಖಲೆ ಇಲ್ಲದ ಹಣವನ್ನು ಸಾಗಿಸುತ್ತಿದ್ದರು. ಪ್ರಾಥಮಿಕ ತನಿಖೆ ವೇಳೆ ದೀರು ಶಾನಬಾಗ್ ಎಂಬುವವರು ಗಂಗಾ ನಾಯ್ಕ್ ಗೆ ಹಣ ನೀಡಿದ್ದು, ಈ ಹಣವನ್ನು ಹೊನ್ನಾವರ ತಾಲೂಕಿನ ಬಂಗಾರಮಕ್ಕಿಗೆ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.
Advertisement
ಘಟನೆ ಸಂಬಂಧ ಸರ್ಕಾರಿ ವಾಹನ ಹಾಗೂ 7 ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಎಂಜಿನಿಯರ್ ರಿಂದ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದು, ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.