ಆಸ್ಕರ್ ರೇಸ್ ನಲ್ಲಿ ‘ಆರ್.ಆರ್.ಆರ್’ ಹೆಸರು, ‘ಕೆಜಿಎಫ್ 2’ ಯಾಕಿಲ್ಲ ಎಂದ ಅಭಿಮಾನಿಗಳು

Public TV
1 Min Read
FotoJet 49

ಸ್ಕರ್ ಪ್ರಶಸ್ತಿಗಳ ಕುರಿತು ಇದೀಗ ಮತ್ತೊಂದು ಸುತ್ತಿನ ಚರ್ಚೆ ಶುರುವಾಗಿದೆ. ಈ ಬಾರಿ ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿ ಆರ್.ಆರ್.ಆರ್ ಹೆಸರು ಕೇಳಿ ಬರುತ್ತಿದ್ದು, ಈ ಬಾರಿ ಈ ಸಿನಿಮಾ ಭಾರೀ ಪೈಪೋಟಿ ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ. ಈ ಸಿನಿಮಾಗಿಂತಲೂ ಹೆಚ್ಚು ಸದ್ದು ಮಾಡಿದ್ದ ಕನ್ನಡದ ಕೆಜಿಎಫ್ 2 ಸಿನಿಮಾ ಹೆಸರು ಯಾಕೆ ರೇಸ್ ನಲ್ಲಿ ಕೇಳಿ ಬರುತ್ತಿಲ್ಲ ಎಂಬ ಪ್ರಶ್ನೆ ಕನ್ನಡ ಅಭಿಮಾನಿಗಳದ್ದು.

FotoJet 2 23

ದಕ್ಷಿಣದ ಸಿನಿಮಾಗಳು ಒಂದೇ ಎಂದು ನಂಬಿಸುತ್ತಾ ಬರುತ್ತಿದ್ದರೂ, ಕನ್ನಡ ಮೂಲದ ಸಿನಿಮಾಗಳಿಗೆ ಅದಕ್ಕೆ ಸಿಗಬೇಕಾದ ಮನ್ನಣೆ ದೊರೆಯದೇ ಇರುವುದಕ್ಕೂ ಕೆಲವರು ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಾರೆ. ಆರ್.ಆರ್.ಆರ್ ಸಿನಿಮಾಗಿಂತಲೂ ಕೆಜಿಎ‍ಫ್ 2 ಸಿನಿಮಾ ಹೆಚ್ಚು ಕಡೆ ರಿಲೀಸ್ ಆಗಿದೆ. ಬಾಕ್ಸ್ ಆಫೀಸಿನಲ್ಲು ಸದ್ದು ಮಾಡಿದೆ, ಇನ್ನೂ ಹಲವು ಕಡೆ ಪ್ರದರ್ಶನ ಕಾಣುತ್ತಿದೆ. ಕನ್ನಡದ ಸಿನಿಮಾವೊಂದು ಈ ಮಟ್ಟಕ್ಕೆ ಹೆಸರು ಮಾಡಿದ್ದರೂ ಆಸ್ಕರ್ ರೇಸ್ ನಲ್ಲಿ ಈ ಸಿನಿಮಾ ಇದೆ ಎಂದು ಎಲ್ಲೂ ಬಿಂಬಿತವಾಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್‌ಬೀರ್‌ ಕೊಟ್ರು ಬ್ರೇಕಿಂಗ್‌ ನ್ಯೂಸ್

FotoJet 1 29

ಕೆಜಿಎಫ್ 2 ಸಿನಿಮಾ ಬಾಲಿವುಡ್ ಮಂದಿಯನ್ನು ನಿದ್ದೆಗೆಡಿಸಿದೆ. ಬಾಕ್ಸ್ ಆಫೀಸಿನಲ್ಲಿ ಅತೀ ಹೆಚ್ಚು ಹಣಗಳಿಸಿದ್ದು ಹಿಂದಿಯಲ್ಲಿ. ಹಾಗಾಗಿ ಬಾಲಿವುಡ್ ನವರು ಆರ್.ಆರ್.ಆರ್ ಗೆ ಮಣೆ ಹಾಕಿ, ಕೆಜಿಎಫ್ 2 ಸಿನಿಮಾವನ್ನು ಹಿಂದಿಕ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡ ಇದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಂತೂ ಭಾರೀ ಚರ್ಚೆ ಆಗುತ್ತಿದೆ. ಕನ್ನಡದ ಸಿನಿಮಾಗೆ ಮನ್ನಣೆ ಸಿಗಲೇಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *