ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಾಗಿ ಎರಡು ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಇಂಗ್ಲಿಷ್ ಹೊರತಾದ ಸಿನಿಮಾಗಳಿಗೆ ನೀಡುವ ವಿಭಾಗದಲ್ಲಿ ಈ ಸಿನಿಮಾ ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ಗೀತೆ ವಿಭಾಗದಲ್ಲಿ ಸಿನಿಮಾ ನಾಮಿನೇಟ್ ಆಗಿದೆ. ಇಂಗ್ಲಿಷ್ ಹೊರತಾದ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಹಾಗೂ ಹಾಡಿನ ವಿಭಾಗದಲ್ಲಿ ಈ ಸಿನಿಮಾದ ನಾಟು ನಾಟು ಚಿತ್ರ ಪ್ರಬಲ ಸ್ಪರ್ಧೆಯನ್ನು ನೀಡಲಿದೆ. ಹೀಗಾಗಿ ಸಹಜವಾಗಿಯೇ ರಾಜಮೌಳಿ ಫ್ಯಾನ್ಸ್ ಸಂಭ್ರಮಿಸಿದ್ದಾರೆ.
Advertisement
ತೆಲುಗಿನ ಸಿನಿಮಾವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡುವ ಮೂಲಕ ಸಾವಿರಾರು ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು. ಅಲ್ಲದೇ, ಆಸ್ಕರ್ ಪ್ರಶಸ್ತಿಗಾಗಿ ಅದು ಭಾರತದಿಂದ ನಾಮನಿರ್ದೇಶನಗೊಂಡಿರಲಿಲ್ಲ ಎಂದು ಅಭಿಮಾನಿಗಳು ನಿರಾಸೆಯಾಗಿದ್ದರು. ಆಸ್ಕರ್ ಪ್ರಶಸ್ತಿಗಾಗಿ ಚಿತ್ರತಂಡ ನೇರವಾಗಿ ಸ್ಪರ್ಧಿಸುವ ಮೂಲಕ ಇನ್ನೂ ರೇಸ್ ನಲ್ಲಿ ಇದೆ. ಅದಕ್ಕೂ ಮುನ್ನ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಾಗಿ ನಾಮಿನೇಟ್ ಆಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ಮಗಳ ಮುಖ ಪರಿಚಯಿಸಿದ `ಯುವರತ್ನ’ ನಟಿ
Advertisement
Advertisement
ಈ ವಿಷಯವನ್ನು ಸ್ವತಃ ರಾಜಮೌಳಿ ಅವರೇ ಟ್ವಿಟ್ ಮಾಡುವ ಮೂಲಕ ಅಭಿಮಾನಿಗಳ ಖುಷಿಯನ್ನು ಇಮ್ಮಡಿಗೊಳಿಸಿದ್ದಾರೆ. ತಮ್ಮ ತಂಡಕ್ಕೂ ಶುಭಾಶಯ ಕೋರಿದ್ದಾರೆ. ಹಾಗಂತ ಸ್ಪರ್ಧೆಯು ಸಾಧಾರಣವಾಗಿಲ್ಲ, ದಕ್ಷಿಣ ಕೊರಿಯಾ, ಅರ್ಜೆಂಟೀನಾ, ಜರ್ಮನಿ, ಬೆಲ್ಜಿಯಂ ಸಿನಿಮಾಗಳ ಜೊತೆ ಅದು ಪೈಪೋಟಿ ಮಾಡಬೇಕಿದೆ. ಇವೆಲ್ಲವೂ ಹೆಸರಾಂತ ಸಿನಿಮಾಗಳೇ ಆಗಿವೆ ಎನ್ನುವುದು ವಿಶೇಷ. 11 ಜನವರಿ 2023ರಂದು ಈ ಪ್ರಶಸ್ತಿಯನ್ನು ಲಾಸ್ ಎಂಜಲೀಸ್ ನಲ್ಲಿ ಪ್ರದಾನ ಮಾಡಲಾಗುತ್ತದೆ.
Advertisement
ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಕಾಂಬಿನೇಷನ್ ನ ಆರ್.ಆರ್.ಆರ್ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಅಷ್ಟೂ ಕಡೆ ಉತ್ತಮ ಪ್ರದರ್ಶನವನ್ನೇ ಕಂಡಿತ್ತು. ಅಲ್ಲುರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ಮಿಂಚಿದ್ದರೆ, ಕೊಮರಮ್ ಭೀಮ ಪಾತ್ರಕ್ಕೆ ಜ್ಯೂನಿಯರ್ ಜೀವ ತುಂಬಿದ್ದರು. ಸ್ವಾತಂತ್ರ್ಯ ಹೋರಾಟಗಾರರಿಬ್ಬರ ಕಥೆಯನ್ನು ಒಳಗೊಂಡಿದ್ದ ಸಿನಿಮಾ ಇದಾಗಿತ್ತು.