`ಆರ್‌ಆರ್‌ಆರ್’ ಚಿತ್ರದ ಸಕ್ಸಸ್ ನಂತರ ಹಾಲಿವುಡ್‌ಗೆ ಜ್ಯೂ.ಎನ್‌ಟಿಆರ್

Advertisements

`ಆರ್‌ಆರ್‌ಆರ್’ ಮೂಲಕ ಸಂಚಲನ ಮೂಡಿಸಿರುವ ನಟ ಜ್ಯೂ.ಎನ್‌ಟಿಆರ್ ಈ ಚಿತ್ರದ ಸಕ್ಸಸ್ ನಂತರ ಇದೀಗ ಹಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಹಾಲಿವುಡ್ ರಂಗದಲ್ಲಿ ಮಿಂಚಲು ತಾರಕ್ ಸಜ್ಜಾಗಿದ್ದಾರೆ.

ದಕ್ಷಿಣದ ಸಾಕಷ್ಟು ಸಿನಿಮಾಗಳ ಮೂಲಕ ಕಮಾಲ್ ಮಾಡಿರುವ ಪ್ರತಿಭಾವಂತ ನಟ ಜ್ಯೂ.ಎನ್‌ಟಿಆರ್, ಇತ್ತೀಚಿನ ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ ಚಿತ್ರದಲ್ಲಿ ರಗಡ್ ಆಗಿ ನಟಿಸಿ ಸೈ ಎನಿಸಿಕೊಂಡರು. ರಾಮ್ ಚರಣ್ ಮತ್ತು ಜ್ಯೂ.ಎನ್‌ಟಿಆರ್ ಡೆಡ್ಲಿ ಕಾಂಬಿನೇಷನ್‌ಗೆ ಫ್ಯಾನ್ಸ್ ಫಿದಾ ಆಗಿದ್ದರು. ಈ ಚಿತ್ರದ ಸಕ್ಸಸ್ ಬೆನ್ನಲ್ಲೇ ಜ್ಯೂ.ಎನ್‌ಟಿಆರ್ ಮಹತ್ತರದ ಹೆಜ್ಜೆಯನಿಟ್ಟಿದ್ದಾರೆ. ಇದನ್ನೂ ಓದಿ:ರೊಮ್ಯಾಂಟಿಕ್ ಥ್ರಿಲ್ಲರ್ ಮೂಲಕ ಮತ್ತೋರ್ವ ನಾಯಕನನ್ನು ಪರಿಚಯಿಸುತ್ತಿದ್ದಾರೆ ಡೈರೆಕ್ಟರ್ ಶಶಾಂಕ್

Advertisements

`ಆರ್‌ಆರ್‌ಆರ್’ ಸಿನಿಮಾ ಜ್ಯೂ.ಎನ್‌ಟಿಆರ್ ಕೆರಿಯರ್‌ಗೆ ಬಿಗ್ ಬ್ರೇಕ್ ಕೊಟ್ಟಿದೆ. ಇದೀಗ ಹಾಲಿವುಡ್ ಚಿತ್ರಗಳಲ್ಲಿ ನಟಿಸಲು ಮನಸ್ಸು ಮಾಡಿರುವ ಜ್ಯೂ.ಎನ್‌ಟಿಆರ್, ಪವರ್‌ಫುಲ್ ಪಾತ್ರದ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರವನ್ನು ನೆಟ್‌ಫ್ಲಿಕ್ಸ್ ಅವರು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಹಾಲಿವುಡ್‌ನಲ್ಲಿ ತಾರಕ್ ಹೇಗೆಲ್ಲಾ ಕಮಾಲ್ ಮಾಡಬಹುದು ಅಂತಾ ಕಾದುನೋಡಬೇಕಿದೆ.

Live Tv

Advertisements
Exit mobile version