ಟಾಲಿವುಡ್ ನಟ ರಾಮ್‍ಚರಣ್ ತೇಜ ಹಾಗೂ ಜೂ.ನಿಯರ್ ಎನ್‍ಟಿಆರ್ ಅಭಿನಯದ ಬಹುನಿರೀಕ್ಷಿತ ಆರ್‌ಆರ್‌ಆರ್ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಬಾಕ್ಸ್ ಆಫೀಸ್ ಧೂಳೆಬ್ಬಿಸಿದೆ.
Advertisement
ಬಾಹುಬಲಿಯ ಯಶಸ್ಸಿನ ಬಳಿಕ ನಿರ್ದೇಶಕ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿರುವ ಆರ್‌ಆರ್‌ಆರ್ ಸಿನಿಮಾ ಬಿಡುಗಡೆಗೊಂಡಿದ್ದು, 500 ಕೋಟಿ ಬಿಗ್ ಬಜೆಟ್‍ನಲ್ಲಿ ತಯಾರಾಗಿರುವ ಈ ಸಿನಿಮಾ ವಿಶ್ವಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ತೆರೆಕಂಡಿದೆ. ದುಬಾರಿ ವೆಚ್ಚದಲ್ಲಿ ನಿರ್ಮಾ ಇದನ್ನೂ ಓದಿ: ಡ್ಯಾನ್ಸ್ ಮಾಸ್ಟರ್‌ಗೆ ದುಬಾರಿ ಗಿಫ್ಟ್ ಕೊಟ್ಟ ಕಿಚ್ಚ
Advertisement
#RRR ‘s UK Premiere Gross is £ 238,313 [₹ 2.40 cr]
— Ramesh Bala (@rameshlaus) March 26, 2022
Advertisement
ಆರ್‌ಆರ್‌ಆರ್ ಸಿನಿಮಾ ನೋಡಿ ಪ್ರೇಕ್ಷಕರು ಫಿದಾ ಆಗಿದ್ದು, ಮೊದಲ ದಿನವೇ ಹಿಂದಿಯಲ್ಲಿ 18 ಕೋಟಿ ರೂ. ಗಳಿಸಿದೆ ಮತ್ತು ಎಲ್ಲಾ ಸಿನಿಮಾದ ದಾಖಲೆಗಳನ್ನು ಬ್ರೇಕ್ ಮಾಡಿ ತೆಲುಗು ರಾಜ್ಯಗಳಲ್ಲಿ ಆರ್‌ಆರ್‌ಆರ್ 100 ಕೋಟಿ ರೂ.ಗೂ ಹೆಚ್ಚು ಗಳಿಸಿದೆ ಎಂದು ಸಿನಿಮಾ ಬಾಕ್ಸ್ ಆಫೀಸ್ ವಿಶ್ಲೇಷಕ ರಮೇಶ್ ಬಾಲಾ ಅವರು ತಮ್ಮ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
Advertisement
All-time Record Alert!#RRR ‘s Day 1 Share in Nizam is a new all-time record of ₹ 23.3 Crs..
Day 1 Telugu States gross must be more than ₹ 100 Crs..
— Ramesh Bala (@rameshlaus) March 26, 2022
ಜೊತೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‍ನಲ್ಲೂ ಆರ್‌ಆರ್‌ಆರ್ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಯುರೋಪ್‍ನಲ್ಲಿ 2.40 ಕೋಟಿ ಗಳಿಸಿದೆ. ಈಗಾಗಲೇ 200ಕ್ಕೂ ಹೆಚ್ಚು ಕೋಟಿ ರೂ.ವನ್ನು ಜೋಳಿಗೆ ಹಾಕಿಕೊಂಡಿರುವ ಆರ್‌ಆರ್‌ಆರ್ ಸಿನಿಮಾ ಮೇಲೆ ಓವರಾಲ್ 800 ಕೋಟಿ ಗಳಿಕೆಯ ನಿರೀಕ್ಷೆ ಇದೆ. ಇದನ್ನೂ ಓದಿ: ಸಿನಿಜರ್ನಿಯನ್ನ ಕೊನೆಗೊಳಿಸುತ್ತಾರಾ ನಾಟ್ಯಸುಂದರಿ ಸಾಯಿ ಪಲ್ಲವಿ?
#RRR is off to a strong start at #Australia and #NewZealand Box office..
Day 1 Gross :
Australia – A$702,480
New Zealand – NZ$69,741
— Ramesh Bala (@rameshlaus) March 26, 2022
ಆರ್‌ಆರ್‌ಆರ್ ತೆಲುಗು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಜೀವನ ಕಥೆ ಆಧರಿಸಿದ ಕಾಲ್ಪನಿಕ ಚಿತ್ರವಾಗಿದ್ದು, ಸಿನಿಮಾದಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಮತ್ತು ಜೂನಿಯರ್ ಎನ್‍ಟಿಆರ್ ಕೋಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಡಿವಿವಿ ದಾನಯ್ಯ ಬಂಡವಾಳ ಹೂಡಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್, ಸಮುದ್ರಕನಿ, ಅಜಯ್ ದೇವಗನ್, ರೇ ಸ್ಟೀವನ್ಸನ್, ಅಲಿಸನ್ ಡೂಡಿ ಮತ್ತು ಒಲಿವಿಯಾ ಮೋರಿಸ್ ಬಣ್ಣಹಚ್ಚಿದ್ದಾರೆ.