Rozgar Mela: 51,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ

Public TV
2 Min Read
Modi 1

ನವದೆಹಲಿ: ರೋಜ್‍ಗಾರ್ ಮೇಳದ (Rozgar Mela) ಭಾಗವಾಗಿ ಶನಿವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನೂತನವಾಗಿ ಸರ್ಕಾರಿ ಸೇವೆಗೆ ಸೇರ್ಪಡೆಯಾದ 51,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ ಮಾಡಿದರು. ವರ್ಚುಯಲ್ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ವಲಯಗಳಲ್ಲಿ ನೇಮಕವಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿದರು.

ಬಳಿಕ ಮಾತನಾಡಿದ ಅವರು, ಇಂದು 50,000ಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗಗಳ ನೇಮಕಾತಿ ಪತ್ರ ನೀಡಲಾಗಿದೆ. ಇದು ಅವರ ಕುಟುಂಬಗಳಿಗೆ ಈ ಸಂದರ್ಭವು ದೀಪಾವಳಿಗಿಂತ ಸಂಭ್ರಮಕ್ಕಿಂತ ಕಡಿಮೆಯಲ್ಲ ಎಂದರು. ಕಳೆದ ವರ್ಷ ಅಕ್ಟೋಬರ್‍ನಲ್ಲಿ ‘ರೋಜ್‍ಗರ್ ಮೇಳ’ ಪ್ರಾರಂಭಿಸಲಾಗಿದೆ. ಕೇಂದ್ರ ಮತ್ತು ಎನ್‍ಡಿಎ ಆಡಳಿತದ ರಾಜ್ಯಗಳಲ್ಲಿ ‘ರೋಜ್‍ಗರ್ ಮೇಳ’ ಆಯೋಜಿಸಲಾಗುತ್ತಿದೆ. ಇದುವರೆಗೆ ಲಕ್ಷಾಂತರ ಯುವಕರಿಗೆ ನೇಮಕಾತಿ ನೀಡಲಾಗಿದೆ ಎಂದರು.

ಇಂದು ಭಾರತವು ಮುನ್ನಡೆಯುತ್ತಿರುವ ದಿಕ್ಕು, ವೇಗ ಬದಲಾಗುತ್ತಿದೆ. ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಕೆಲ ದಿನಗಳ ಹಿಂದೆ ಕಚ್‍ನಲ್ಲಿರುವ ಗುಜರಾತ್‍ನ ಧೋರ್ಡೊ ಗ್ರಾಮವನ್ನು ವಿಶ್ವಸಂಸ್ಥೆಯು ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮವೆಂದು ಘೋಷಿಸಿತು. ಇದಕ್ಕೂ ಮೊದಲು ಕರ್ನಾಟಕದ ಹೊಯ್ಸಳ ದೇವಾಲಯಗಳು ಮತ್ತು ಪಶ್ಚಿಮ ಬಂಗಾಳದ ಶಾಂತಿನಿಕೇತನವನ್ನು ವಿಶ್ವ ಪರಂಪರೆಯ ತಾಣಗಳೆಂದು ಘೋಷಿಸಲಾಯಿತು. ಇದು ಉದ್ಯೋಗದ ಸಾಧ್ಯತೆಗಳನ್ನು ಮತ್ತು ಆರ್ಥಿಕತೆಯ ವಿಸ್ತರಣೆಯನ್ನು ಹೆಚ್ಚಿಸಿತು. ಪ್ರವಾಸೋದ್ಯಮದಲ್ಲಿ ಅಭಿವೃದ್ಧಿ ಎಂದರೆ ಪ್ರತಿಯೊಂದು ಕ್ಷೇತ್ರಕ್ಕೂ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಟಿಕೆಟ್ ಕೊಡಿಸೋದಾಗಿ ಚೈತ್ರಾ ಮಾದರಿಯಲ್ಲೇ ಕೋಟಿ ಕೋಟಿ ವಂಚನೆ- ಆರೋಪಿ ಅರೆಸ್ಟ್

ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯೋಜಿಸಲಾಗಿರುವ ‘ರೋಜ್‍ಗಾರ್ ಮೇಳ’ ಯುವಜನರಿಗೆ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ನಮ್ಮ ಸರ್ಕಾರವು ಯುವಜನರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಿಷನ್ ಮೋಡ್‍ನಲ್ಲಿ ಕೆಲಸ ಮಾಡುತ್ತಿದೆ. ನಾವು ಉದ್ಯೋಗ ನೀಡುವುದು ಮಾತ್ರವಲ್ಲದೆ, ಇಡೀ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುತ್ತಿದ್ದೇವೆ. ಇದು ಉದ್ಯೋಗ ಪ್ರಕ್ರಿಯೆಯಲ್ಲಿ ಜನರ ನಂಬಿಕೆಯನ್ನು ಹೆಚ್ಚಿಸಿದೆ ಎಂದರು.

ನಾವು ನೇಮಕಾತಿ ಪ್ರಕ್ರಿಯೆಯನ್ನು ಸುಗಮಗೊಳಿಸಿದ್ದೇವೆ. ಮಾತ್ರವಲ್ಲದೆ ಕೆಲವು ಪರೀಕ್ಷೆಗಳನ್ನು ಪುನರ್ ರಚಿಸಿದ್ದೇವೆ. ನೇಮಕಾತಿ ಸಮಯ ಸಿಬ್ಬಂದಿ ಆಯ್ಕೆ ಆಯೋಗವನ್ನು ಅರ್ಧದಷ್ಟು ಕಡಿಮೆ ಮಾಡಲಾಗಿದೆ. ಈಗ ಹಿಂದಿ ಮತ್ತು ಇಂಗ್ಲಿಷ್ ಹೊರತುಪಡಿಸಿ 13 ಪ್ರಾದೇಶಿಕ ಭಾಷೆಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳಲಾಗಿದೆ. ಇದು ಭಾಷಾ ತಡೆಯನ್ನು ಎದುರಿಸಿದವರಿಗೆ ಅವಕಾಶವನ್ನು ನೀಡುತ್ತಿದೆ ಎಂದು ಹೇಳಿದರು.

ಕ್ರೀಡಾ ಕ್ಷೇತ್ರವು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ನಮ್ಮ ಆಟಗಾರರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಐತಿಹಾಸಿಕ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಕ್ರೀಡಾ ಕ್ಷೇತ್ರವು ಅಭಿವೃದ್ಧಿಗೊಂಡಾಗ ತರಬೇತುದಾರರು, ಫಿಸಿಯೋ, ರೆಫರಿಗಳಿಗೆ ಅವಕಾಶಗಳು ಸಿಗುತ್ತವೆ ಎಂದು ತಿಳಿಸಿದರು.

Web Stories

Share This Article