– ದರ್ಶನ್‌ಗೆ ತಪ್ಪು ಮಾಡಿದ ಭಾವನೆ ಇದ್ದಂತೆ ಕಾಣ್ತಿಲ್ಲ: ಶಿವನಗೌಡ್ರು
– ದರ್ಶನ್‌ಗೆ ಸಿಗರೇಟ್ ನೀಡಿರುವ ಬಗ್ಗೆಯೂ ತನಿಖೆಯಾಗಲೆಂದು ಆಗ್ರಹ
ಚಿತ್ರದುರ್ಗ: ನಮಗಿಲ್ಲಿ ನೋವು, ಸಂಕಟ ಆಗ್ತಿದೆ, ಆದ್ರೆ ದರ್ಶನ್‌ಗೆ ತಪ್ಪು ಮಾಡಿದ ಭಾವನೆ ಇದ್ದಂತೆ ಕಾಣ್ತಿಲ್ಲ. ಅವರೇನು ಜೈಲಿನಲ್ಲಿದ್ದಾರೋ ರೆಸಾರ್ಟ್ ನಲ್ಲಿ ಇದ್ದಾರೋ ಅನ್ನಿಸುತ್ತಿದೆ. ದರ್ಶನ್ (Drshan) ಸಾಮಾನ್ಯ ಕೈದಿಯಂತೆಯೇ ಇರಬೇಕು. ರೆಸಾರ್ಟ್ ನಲ್ಲಿ ಕುಳಿತಂತೆ ನಟ ದರ್ಶನ್ ಕುಳಿತಿರುವುದು ಕಂಡು ಗಾಬರಿ ಆಗಿದೆ. ಹೀಗೆ ಆದ್ರೆ ಮುಂದೆ ಸಿಬಿಐ (CBI) ತನಿಖೆಗೆ ವಹಿಸಬೇಕು ಅನ್ನಿಸುತ್ತೆ.. ಕೊಲೆಯಾದ ರೇಣುಕಸ್ವಾಮಿ (Renukaswamy) ತಂದೆ ಕಾಶೀನಾಥ್ ಶಿವನಗೌಡ್ರ ನೋವಿನ ನುಡಿಗಳಿವು.
Advertisement
ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದಾರೆ ಎನ್ನಲಾದ ಫೋಟೋ ಬೆಳಕಿಗೆ ಬಂದ ಬೆನ್ನಲ್ಲೇ ಕೊಲೆಯಾದ ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡ್ರು ಹಾಗೂ ಸಮಾಜದ ಮುಖಂಡರ ಸಮ್ಮುಖದಲ್ಲಿಂದು ಸುದ್ದಿಗೋಷ್ಠಿ ನಡೆಸಲಾಯಿತು. ಇದನ್ನೂ ಓದಿ: ಸಿಎಂ ವಿರುದ್ಧದ ಮುಡಾ ಕೇಸ್‌ನಲ್ಲಿ ಯಾವುದೇ ಹುರುಳಿಲ್ಲ ಅಂತ ಕಾನೂನು ತಜ್ಞರೇ ಹೇಳಿದ್ದಾರೆ: ಸಚಿವ ಮಹದೇವಪ್ಪ
Advertisement
Advertisement
ಈ ವೇಳೆ ರೇಣುಕಾಸ್ವಾಮಿ ತಂದೆ ಕಾಶೀನಾಥ ಶಿವನಗೌಡ್ರು ಮಾತನಾಡಿ, ಜೈಲಿನಲ್ಲಿದ್ದಾರೋ ಇಲ್ಲವೋ ಎಂಬ ಭಾವನೆ ಮೂಡುತ್ತಿದೆ. ಸಾಮಾನ್ಯ ಕೈದಿಯಂತೆ ನಟ ದರ್ಶನ್ ಸಹ ಇರಬೇಕು. ಆದ್ರೆ ರೆಸಾರ್ಟ್ನಲ್ಲಿ ಕುಳಿತಂತೆ ನಟ ದರ್ಶನ್ ಕುಳಿತಿರುವುದು ಕಂಡು ಗಾಬರಿ ಆಯಿತು. ಪೊಲೀಸ್ ತನಿಖೆ, ನ್ಯಾಯಾಂಗ ಬಗ್ಗೆ ನಮಗೆ ಇನ್ನೂ ನಂಬಿಕೆ ಇದೆ. ಒಟ್ಟಿನಲ್ಲಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು. ನಟ ದರ್ಶನ್‌ಗೆ ವ್ಯವಸ್ಥೆ ಕಲ್ಪಿಸಿದವರಿಗೂ ಶಿಕ್ಷೆ ಆಗಬೇಕು. ಸರ್ಕಾರವನ್ನು ನಾವು ನಂಬಿದ್ದೇವೆ. ಸಿಎಂ (Siddaramaiah), ಗೃಹ ಮಂತ್ರಿಗಳು ಈ ಬಗ್ಗೆ ಗಮನಹರಿಸಬೇಕು. ಮಗನನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾರ್ಕಳ ಅತ್ಯಾಚಾರ ಕೇಸ್; ಇದೊಂದು ಹೇಯಕೃತ್ಯ, ಸಂತ್ರಸ್ತೆಗೆ ಜಿಲ್ಲಾಡಳಿತದಿಂದ ನೆರವು – ಲಕ್ಷ್ಮಿ ಹೆಬ್ಬಾಳ್ಕರ್
Advertisement
ನಮಗಿಲ್ಲಿ ನೋವು, ಸಂಕಟ ಆಗ್ತಿದೆ. ತಪ್ಪು ಮಾಡಿದ ಭಾವನೆ ದರ್ಶನ್‌ಗೆ ಇದ್ದಂತೆ ಕಾಣುತ್ತಿಲ್ಲ. ಆರೋಪಿಗಳು ಜೈಲಿನಲ್ಲಿ ಚೈನಿ ಹೊಡೆಯುತ್ತಿದ್ದಾರೆ ಎಂದು ಕಣ್ಣೀರು ಹಾಕಿದರು. ಸರಿಯಾದ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹೀಗಾದರೆ ಸಿಬಿಐ ತನಿಖೆಗೆ ವಹಸಿಬೇಕೆಂದು ಅನಿಸುತ್ತದೆ. ಇಲ್ಲಿಯವರೆಗೆ ಉತ್ತಮ ರೀತಿಯಲ್ಲಿ ತನಿಖೆ ನಡೆದಿದೆ. ಇನ್ಮುಂದೆಯೂ ಸರಿಯಾದ ರೀತಿಯಲ್ಲಿ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಚಲಿಸುತ್ತಿದ್ದ ಬಸ್‌ನಲ್ಲೇ ಬಾಲಕಿ ಮೇಲೆ ಗ್ಯಾಂಗ್‌ರೇಪ್ – ಐವರ ವಿರುದ್ಧ ಪೋಕ್ಸೋ ಕೇಸ್!
ನಂತರ, ರೇಣುಕಾಸ್ವಾಮಿ ಚಿಕ್ಕಪ್ಪ ಷಡಕ್ಷರಿ ಮಾತನಾಡಿ, ಮಾಧ್ಯಮಗಳ ಮೂಲಕ ವಿಷಯ ತಿಳಿದು ಗಾಬರಿ ಆಯಿತು. ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯುತ್ತಿದೆ ಎಂದು ನಾವು ಭಾವಿಸಿದ್ದೆವು. ಯಾಕೆ ಈ ರೀತಿ ಆಗುತ್ತಿದೆ ಎಂಬ ಅನುಮಾನ ಮೂಡಿದೆ. ಸರ್ಕಾರದ ಮೇಲೆ ನಮಗೆ ಇನ್ನೂ ನಂಬಿಕೆಯಿದೆ. ಜೈಲಿನಲ್ಲಿ ನಟ ದರ್ಶನ್‌ಗೆ ಸಕಲ ವ್ಯವಸ್ಥೆ ಕಲ್ಪಿಸಿದ್ದರ ಬಗ್ಗೆ ತನಿಖೆ ಆಗಲಿ. ಈ ರೀತಿಯ ಘಟನೆಗಳು ಮರುಕಳಿಸದಿರಲಿ. ನಟ ದರ್ಶನ್‌ಗೆ ಸಿಗರೇಟ್ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ