ಅತ್ತ ದರ್ಶನ್‌ಗೆ ರಾಜಾತಿಥ್ಯ – ಇತ್ತ ಎ5 ಆರೋಪಿ ನಂದೀಶ್ ಕುಟುಂಬ ಜೀವನ ಸಾಗಿಸಲು ಪರದಾಟ

Public TV
4 Min Read
Renukaswamy Murder Case A5 Nandish

ಮಂಡ್ಯ: ಅತ್ತ ಪರಪ್ಪನ ಅಗ್ರಹಾರದಲ್ಲಿ (Parappana Agrahara) ದರ್ಶನ್‌ಗೆ (Darshan) ರಾಜಾತಿಥ್ಯ ನೀಡುತ್ತಿದ್ದರೆ, ಇತ್ತ ಎ5 ಆರೋಪಿ ನಂದೀಶ್ ಕುಟುಂಬ ಜೀವನ ಸಾಗಿಸಲು ಪರದಾಡುತ್ತಿದೆ. ಮಗ ಜೈಲು ಸೇರಿದ ಬಳಿಕ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಇದುವರೆಗೂ ದರ್ಶನ್ ಆಗಲೀ ಅವರ ವಕೀಲರಾಗಲೀ ನಮ್ಮ ಮಗನನ್ನು ಭೇಟಿ ಮಾಡಿಲ್ಲ ಎಂದು ಎ5 ಆರೋಪಿ ನಂದೀಶ್ ತಂದೆ ಶ್ರೀನಿವಾಸಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಮನೆಗಾಗಿ ನಂದೀಶ್ ಮಾಡಿದ್ದ ಸಾಲದ ಹೊರೆ ವಯಸ್ಸಾದ ತಂದೆ, ತಾಯಿ ಹೆಗಲಿಗೆ ಬಂದು ಬಿದ್ದಿದೆ. ಪ್ರತಿ ತಿಂಗಳು 20 ಸಾವಿರ ರೂ. ಕಟ್ಟಲೇ ಬೇಕಾದ ದುಸ್ಥಿತಿ ನಂದೀಶ್ ಕುಟುಂಬದವರಿಗೆ ಎದುರಾಗಿದೆ. ನಂದೀಶ್ ಕಷ್ಟ ನೋಡಲಾಗದೇ ಒಂದು ತಿಂಗಳು ಸಾಲದ ಕಂತನ್ನು ಸಂಬಂಧಿಗಳು ಕಟ್ಟಿದ್ದಾರೆ. ರೌಡಿ ವಿಲ್ಸನ್ ಗಾರ್ಡನ್ ನಾಗ ಜೊತೆಗೆ ದರ್ಶನ್ ಹರಟೆ ಹೊಡೆಯುತ್ತಿದ್ದು, ಅದೇ ಜೈಲಿನಲ್ಲಿದ್ರೂ ನಂದೀಶ್‌ಗೆ ಇನ್ನೂ ದಾಸನ ದರ್ಶನಕ್ಕೆ ಅವಕಾಶ ಸಿಗಲಿಲ್ಲ. ತನ್ನಿಂದ ಜೈಲು ಸೇರಿದವರಿಗೆ ಈವರೆಗೂ ದರ್ಶನ್ ಧೈರ್ಯ ಹೇಳಲಿಲ್ಲ. ದರ್ಶನ್ ನಡೆಯಿಂದ ನಂದೀಶ್ ಕುಟುಂಬಕ್ಕೆ ಆತಂಕ ಶುರುವಾಗಿದೆ. ಇದನ್ನೂ ಓದಿ: ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ – ಇಂದಿನಿಂದ ಮದ್ಯದ ದರ ಇಳಿಕೆ

renukaswamy murder case

ಈ ವಿಚಾರದ ಕುರಿತು ಮಂಡ್ಯದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಶ್ರೀನಿವಾಸಯ್ಯ, ನಮ್ಮ ಮಗನಿಗೆ 3 ಬಾರಿ ಜೈಲೂಟ ಕೊಡುತ್ತಿದ್ದಾರೆ. ದರ್ಶನ್ ಅವರನ್ನ ನೊಡುತ್ತಿದ್ದರೆ ಬೇಜಾರು ಆಗುತ್ತದೆ. ಆದರರೆ ನಾವು ಏನು ಮಾಡೋದಕ್ಕೆ ಸಾಧ್ಯ? ನೀವು ಮಾತ್ರ ಒಳ್ಳೆಯ ಆಹಾರ ತಿನ್ನುತ್ತಿದ್ದೀರಿ, ನಮ್ಮ ಹುಡುಗನಿಗೆ ಮಾತ್ರ ಜೈಲೂಟ ಅಂತ ಕೇಳೋದಕ್ಕೆ ಆಗುತ್ತಾ? ದುಡ್ಡು ಇರೋರದು ಏನು ಬೇಕಾದರೂ ನಡೆಯುತ್ತದೆ ಎಂದರು. ಇದನ್ನೂ ಓದಿ: ಸುಡಾನ್‌ನಲ್ಲಿ ಭಾರೀ ಮಳೆಗೆ ಕೊಚ್ಚಿ ಹೋಯ್ತು ಅಣೆಕಟ್ಟು – 60 ಸಾವು, ಹಲವು ಮಂದಿ ನಾಪತ್ತೆ

ಮಗನಿಗೆ ಬೇಲ್ ಕೊಡಿಸುವ ಸ್ಥಿತಿಯಲ್ಲಿ ನಾವು ಇಲ್ಲ. ಲಕ್ಷಾಂತರ ರೂಪಾಯಿ ಬೇಕು. ಅಷ್ಟೊಂದು ದುಡ್ಡು ಎಲ್ಲಿಂದ ನಾವು ತರೋಣ. ಜಮೀನು ಇದ್ದಿದ್ರೆ 20 ಗುಂಟೆ ಮಾರಿ ಬಿಡಬಹುದಿತ್ತು. ನಮಗೆ ಊಟಕ್ಕೆ ಕಷ್ಟ ಪಡುವ ಸ್ಥಿತಿಯಾಗಿದೆ. ಮಗನನ್ನು ಕರೆದುಕೊಂಡು ಹೋಗಿದ್ದಾರೆ, ಅವರೇ ಕರೆದುಕೊಂಡು ಬರಲಿ. ಬಿಡಿಸಿಕೊಡಿ ಅಂತ ನಾವು ನೇರವಾಗಿ ದರ್ಶನ್ ಅವರನ್ನ ಕೇಳೋದಕ್ಕೆ ಸಾಧ್ಯನಾ? ಇವತ್ತು ಇಲ್ಲ ಅಂದ್ರೂ 6 ತಿಂಗಳು ಬಿಟ್ಟು ಕರೆದುಕೊಂಡು ಬರಲಿ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸುಡಾನ್‌ನಲ್ಲಿ ಭಾರೀ ಮಳೆಗೆ ಕೊಚ್ಚಿ ಹೋಯ್ತು ಅಣೆಕಟ್ಟು – 60 ಸಾವು, ಹಲವು ಮಂದಿ ನಾಪತ್ತೆ

renukaswamy murder case a5 nadeesh family

ನಂದೀಶ್ ತಾಯಿ ಭಾಗ್ಯಮ್ಮ ಮಾತನಾಡಿ, ದರ್ಶನ್ ಅವರಿಗೆ ದುಡ್ಡು ಇದೆ, ಅದಕ್ಕಾಗಿ ಚೆನ್ನಾಗಿ ಇದ್ದಾರೆ. ನಾವು ಬಡವರು ಏನ್ ಮಾಡೋದು. ಅವರು ಒಳಗಡೆ ಹೇಗಿದ್ದಾರೆ ಅಂತ ನಮಗೆ ಗೊತ್ತಿಲ್ಲ. ಈವರೆಗೂ ನಮ್ಮ ಮಗನನ್ನ ದರ್ಶನ್ ಭೇಟಿ ಮಾಡಿಲ್ಲ. ಮಗನಿಗೆ ಬೇಲ್ ಕೊಟ್ಟು ಅವರೇ ಬಿಡಿಸಿಕೊಡಬೇಕು. ನಾವು ಕೂಲಿ ಮಾಡೋದು, ಅಷ್ಟೊಂದು ದುಡ್ಡು ಎಲ್ಲಿಂದ ತರೋದು? ನಮ್ಮ ಮನೆಗೆ ದರ್ಶನ್ ಕಡೆಯವರು ಯಾರೂ ಬಂದಿಲ್ಲ. ಆದ್ರೆ ಜೈಲಿನಿಂದ ಬಿಡಿಸಿಕೊಂಡು ಬರ್ತಾರೆ ಅಂತ ನಂಬಿಕೆ ಇಟ್ಟುಕೊಂಡಿದ್ದೇವೆ. ಜೈಲಿನಲ್ಲಿ ಏನು ಆಗುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ಅಲ್ಲಿ 10 ನಿಮಿಷ ನೋಡೋದಕ್ಕೂ ಬಿಡುವುದಿಲ್ಲ ಎಂದು ಅಳಲು ತೋಡಿಕೊಂಡರು. ಇದನ್ನೂ ಓದಿ: 1 ವರ್ಷದಿಂದ ಸವಾಲಿನ ಮೇಲೆ ಸವಾಲು – ಪರಮೇಶ್ವರ್ ಇಮೇಜ್‌ಗೆ ಧಕ್ಕೆ ಮತ್ತೆ ಮುಜುಗರ

renukaswamy murder case a5 nandeesh family

ನಂದೀಶ್ ಮಾವ ಅಶ್ವತ್ ಮಾತನಾಡಿ, ದರ್ಶನ್ ಅವರಿಗೆ ಅಷ್ಟೊಂದು ಆತಿಥ್ಯ ಸಿಗುತ್ತಿದೆ. ಈವರೆಗೂ ದರ್ಶನ್ ಕಡೆಯವರು ಯಾರೂ ನಂದೀಶ್‌ನನ್ನು ಭೇಟಿಯಾಗಿಲ್ಲ. ಜೈಲಿನಲ್ಲಿದ್ದರೂ ದರ್ಶನ್ ಅವರನ್ನ ನೋಡೋದಕ್ಕೂ ಸಾಧ್ಯವಾಗುವುದಿಲ್ವಂತೆ. ಇದನ್ನ ನೋಡಿದರೆ ನಮ್ಮ ಮಕ್ಕಳನ್ನ ಅಲ್ಲೇ ಬಿಡ್ತಾರೇನು ಎಂಬ ಭಯ ಶುರುವಾಗಿದೆ. ನಾಲ್ಕೈದು ಜನ ಆರ್ಥಿಕವಾಗಿ ಕಷ್ಟದಲ್ಲಿ ಇರುವವರು ಇದ್ದಾರೆ. ಅವರನ್ನ ಎ1, ಎ2, ಎ3 ಮಾಡಿ ಬಿಡ್ತಾರೆ ಎಂಬ ಭಯ ಇದೆ. ನಮಗೆ ನಂದೀಶ್ ಜೊತೆಗೆ ಮಾತನಾಡೋದಕ್ಕೆ ಕಷ್ಟ. ಆದರೆ ದರ್ಶನ್ ಅವರಿಗೆ ಎಲ್ಲಾ ಫೆಸಿಲಿಟಿ ಕೊಡುತ್ತಿದ್ದಾರೆ. ದರ್ಶನ್ ಕಡೆಯವರು ಧೈರ್ಯ ತುಂಬುವ ಕೆಲಸ ಮಾಡಿದ್ರೆ ನಮಗೆ ಸಮಾಧಾನ ಆಗುತ್ತದೆ. ಆದರೆ ಎರಡು ಮೂರು ದಿನದ ಬೆಳವಣಿಗೆ ನೋಡಿದರೆ ಭಯ ಆಗುತ್ತಿದೆ. ಶಾಶ್ವತವಾಗಿ ಅಲ್ಲೇ ಉಳಿಸುಬಿಡುತ್ತಾರೊ ಎಂದು ಭಯ ಆಗುತ್ತಿದೆ. ನಂದೀಶ್ ಮನೆ ರೆಡಿ ಮಾಡಿಸಲು ಸಾಲ ಮಾಡಿದ್ದ. ಈಗ ನಾವು ಲೋನ್ ಕಟ್ಟಬೇಕಾದ ಸ್ಥಿತಿ ಬಂದಿದೆ. ಅವರ ತಂದೆ, ತಾಯಿ ಸಾಲ ತೀರಿಸುವ ಸ್ಥಿತಿಯಲ್ಲಿ ಇಲ್ಲ. ಅವನು ಹೊರಗಡೆ ಇದ್ದಿದ್ದರೆ ಅವನೇ ಸಾಲ ತೀರಿಸುತ್ತಿದ್ದ. ದರ್ಶನ್ ಕಡೆಯವರು ನಂದೀಶ್ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಪರಪ್ಪನ ಜೈಲಿಂದ ಹಿಂಡಲಗಾ ಜೈಲಿಗೆ ‘ಜಗ್ಗುದಾದ’ ಶಿಫ್ಟ್ ಸಾಧ್ಯತೆ – ಬೆಳಗಾವಿ ಜೈಲಿನ ವಿಶೇಷತೆ ಏನು?

ನಂದೀಶ್ ಮೇಲಿರುವ ಆರೋಪ ಏನು?
ಕೇಬಲ್ ಕೆಲಸಗಾರ ನಂದೀಶ್ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ದೈಹಿಕ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ ಕರೆಂಟ್‌ಶಾಕ್ ನೀಡಿದ ಆರೋಪಕ್ಕೆ ನಂದೀಶ್ ತುತ್ತಾಗಿದ್ದಾನೆ. ಈ ಕೃತ್ಯ ಎಸಗಿದ ಬಳಿಕ ತಪ್ಪಿಸಿಕೊಂಡಿದ್ದ ಆತನನ್ನು ಬಿಡದಿ ಬಳಿ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಮಲ್ಲೇಶ್ವರಂ ಹೊಯ್ಸಳ ಪೊಲೀಸರಿಂದ ಹಫ್ತಾ ವಸೂಲಿ – ವೀಡಿಯೋ ವೈರಲ್

Share This Article