Connect with us

Bengaluru City

ಬೆಚ್ಚಿ ಬೀಳುವ ದೃಶ್ಯ- ಗೋಶಾಲೆಯಲ್ಲಿ ರೌಡಿ ರಂಜಿತ್‍ನನ್ನು ಕಟುಕರಂತೆ ಕೊಚ್ಚಿ ಕೊಂದ್ರು

Published

on

ಬೆಂಗಳೂರು: ಬೆಂಗಳೂರಿನ ಪುಲಿಕೇಶಿನಗರದ ಗೋಶಾಲೆಯಲ್ಲಿ ನಡೆದ ರೌಡಿಶೀಟರ್ ರಂಜಿತ್ ಕೊಲೆ ಪ್ರಕರಣದ ದೃಶ್ಯಾವಳಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಇಬ್ಬರು ಯುವಕರು ಕಟುಕರನ್ನು ಮೀರಿಸುವ ರೀತಿಯಲ್ಲಿ ರಂಜಿತ್‍ನನನ್ನ ಕೊಚ್ಚಿ ಕೊಚ್ಚಿ ಕೊಂದಿದ್ದಾರೆ. ಗುರುವಾರ ರಾತ್ರಿ ಪುಲಿಕೇಶಿನಗರದ ಪೊಲೀಸರು ಈ ಇಬ್ಬರು ಆರೋಪಿಗಳಾದ ಶ್ಯಾಮ್ ಮತ್ತು ಸಂತೋಷ್ ಮೇಲೆ ಗುಂಡು ಹಾರಿಸಿದ್ದಾರೆ. ಬಾಣಸವಾಡಿ ಫ್ಲೈಓವರ್ ಬಳಿ ಆರೋಪಿಗಳನ್ನ ಅರೆಸ್ಟ್ ಮಾಡಲು ಮುಂದಾದ ಸಂದರ್ಭದಲ್ಲಿ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ರು. ಈ ವೇಳೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ.

ಫ್ರೇಜರ್ ಟೌನ್‍ನ ರೌಡಿಶೀಟರ್ ರಂಜಿತ್ ಬುಧವಾರ ರಾತ್ರಿ ಸುಮಾರು 12.30ರ ವೇಳೆಯಲ್ಲಿ ಬೆಂಗಳೂರಿನ ಪುಲಕೇಶಿನಗರ ವ್ಯಾಪ್ತಿಯ ಗೋಶಾಲೆಯಲ್ಲಿ ಊಟಕ್ಕೆ ಕುಳಿತು ಮದ್ಯಪಾನ ಮಾಡುತ್ತಿದ್ದ. ಈ ವೇಳೆ ದುಷ್ಕರ್ಮಿಗಳು ಬಂದು ಏಕಾಏಕಿ ರಂಜಿತ್ ಮೇಲೆ ಮಾರಕಾಸ್ತ್ರಗಳಿಂದ ಇರಿದಿದ್ದರು. ಪರಿಣಾಮ ವಿಪರೀತ ರಕ್ತಸ್ತಾವವಾಗಿ ರಂಜಿತ್ ಗೋವುಗಳ ನಡುವೆ ಪ್ರಾಣಬಿಟ್ಟಿದ್ದ.

ಈ ಹಿಂದೆ ಈತನ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣ ಸೇರಿದಂತೆ ಫ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿಯೂ ಕೆಲ ಕೇಸ್ ದಾಖಲಾಗಿದ್ದವು.

ಕೊಲೆಗೆ ಸಂಬಂಧಿಸಿದಂತೆ ಫ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

https://www.youtube.com/watch?v=U7-TcO2IuDw&feature=youtu.be

Click to comment

Leave a Reply

Your email address will not be published. Required fields are marked *