ಬೆಂಗಳೂರು: ರೌಡಿಶೀಟರ್ (Rowdy Sheeter) ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಸರೆಂಡರ್ ಆಗುವ ಮುನ್ನ ಕೈ ಕೈ ಮಿಲಾಯಿಸಿಕೊಂಡು ಏಟು ಮಾಡಿಕೊಂಡಿದ್ದರು ಎಂಬ ವಿಚಾರವೊಂದು ಬಯಲಾಗಿದೆ.
ಆರೋಪಿಗಳಾದ ಕಿರಣ್, ವಿಮಲ್, ಪ್ರದೀಪ್, ಸ್ಯಾಮ್ಯುಯೆಲ್ ಮತ್ತು ಮದನ್ ಐವರು ಕೊಲೆ ಮಾಡಿರುವುದಾಗಿ ತಿಳಿಸಿ ಸರೆಂಡರ್ ಆಗಿದ್ದರು. ಸದ್ಯ ಪೊಲೀಸರು ಐವರನ್ನು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಕೊಲೆಯ ಭೀಕರತೆ ಬಯಲಾಗಿದೆ.ಇದನ್ನೂ ಓದಿ: ಮೈಸೂರಿನಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ – ಪ್ರತಿ ಕುರ್ಚಿಯಲ್ಲೂ ರಾರಾಜಿಸುತ್ತಿವೆ ಸಿಎಂ ಫೋಟೊಗಳು
ರೌಡಿಶೀಡರ್ ಬಿಕ್ಲು ಶಿವನ ಮೇಲೆ ಅಟ್ಯಾಕ್ ಮಾಡುವಾಗ ಆರೋಪಿಗಳಿಗೆ ಲಾಂಗ್ ತಗುಲಿ ಏಟಾಗಿತ್ತು. ಕೊಲೆ ಬಳಿಕ ಬೆಂಗಳೂರು ಹೊರವಲಯದಲ್ಲಿ ರಕ್ತದ ಕಲೆಗಳಿದ್ದ ಬಟ್ಟೆಗಳನ್ನ, ಚಪ್ಪಲಿಗಳನ್ನ ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ. ನಂತರ ಅನಿಲ್ ಎಂಬವನ ಬಳಿ ಹೊಸ ಬಟ್ಟೆ ತರಿಸಿಕೊಂಡಿದ್ದರು. ಜೊತೆಗೆ ಕೊಲೆಗೆ ಬಳಸಿದ ಮಾರಕಾಸ್ತ್ರಗಳನ್ನ ಎಸೆದು ಹೋಗಿದ್ದಾರೆ. ಅದಲ್ಲದೇ ಸರೆಂಡರ್ ಆಗುವ ವಿಚಾರಕ್ಕೆ ಆರೋಪಿಗಳ ಮಧ್ಯೆ ಗಲಾಟೆಯಾಗಿ ಕೈ ಕೈ ಮಿಲಾಯಿಸಿಕೊಂಡು ಏಟು ಮಾಡಿಕೊಂಡಿದ್ದರು. ಸದ್ಯ ಪೆಟ್ರೋಲ್ ತಂದ ಸ್ಥಳ ಹಾಗೂ ಬಟ್ಟೆ ಸುಟ್ಟುಹಾಕಿದ ಸ್ಥಳವನ್ನು ಮಹಜರ್ ಮಾಡಬೇಕಿದ್ದು, ಸಾಕ್ಷ್ಯ ನಾಶ, ಆರೋಪಿಗಳ ವಿಚಾರಣೆ, ಕೃತ್ಯಕ್ಕೆ ಬಳಸಿದ ಮಾರಕಾಸ್ತçಗಳ ಪತ್ತೆ ಕಾರ್ಯ ನಡೆಯುತ್ತಿದೆ.
ಇನ್ನೂ ಈ ಪ್ರಕರಣದಲ್ಲಿ ಹಾಲಿ ಶಾಸಕ ಬೈರತಿ ಬಸವರಾಜ್ (Byrathi Basavaraj) ಮೇಲೆ ಕೊಲೆ ಆರೋಪವಿದ್ದು, ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.
ಪೊಲೀಸರ ವಶದಲ್ಲಿರುವ ಕಿರಣ್‌ನನ್ನು ವಿಚಾರಣೆಗೆ ಒಳಪಡಿಸಿದ್ದು, ಎ1 ಆರೋಪಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ನನಗೂ ಬಿಕ್ಲು ಶಿವ @ ಶಿವಪ್ರಕಾಶ್‌ಗೆ ದ್ವೇಷ ಇತ್ತು. ಕೊಲೆ ಮಾಡುವಾಗ ವಿಡಿಯೋದಲ್ಲಿರುವುದು ನಾನು ಮಾತ್ರ. ಪ್ರಕರಣದಲ್ಲಿ ನನ್ನ ಭಾವ ಪ್ರಕರಣದ ಎ1 ಆರೋಪಿ ಜಗ್ಗ @ ಜಗದೀಶನ ಪಾತ್ರ ಇಲ್ಲ. ನನ್ನ ಮತ್ತು ಬಿಕ್ಲು ಶಿವು ಮಧ್ಯೆ ಇದ್ದ ಮನಸ್ತಾಪ ಅಷ್ಟೇ. ಹಾಗಾಗಿ ನಾನೇ ಹತ್ಯೆ ಮಾಡಿದ್ದಿನಿ ಎಂದು ಹೇಳಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಸದ್ಯ ಕೊಲೆ ಮಾಡುವ ವೀಡಿಯೋದಲ್ಲಿರುವ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಹಲವು ಮಾಹಿತಿಗಳನ್ನ ಕಲೆ ಹಾಕುತ್ತಿದ್ದಾರೆ.ಇದನ್ನೂ ಓದಿ: ವ್ಯಾಪಾರ ಬೆದರಿಕೆ ಹಾಕಿ ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದೆ: ಟ್ರಂಪ್