
ಬೆಂಗಳೂರು: ಅಕ್ರಮವಾಗಿ ನಾಡ ಪಿಸ್ತೂಲ್ (Countrymade Pistol) ತಂದು ಮಾರಾಟ ಮಾಡುತ್ತಿದ್ದ ರೌಡಿಶೀಟರ್‌ನನ್ನು ಬೆಂಗಳೂರಿನಲ್ಲಿ (Bengaluru) ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ.
ಕೆಜಿ ಹಳ್ಳಿ ರೌಡಿಶೀಟರ್ ಸಮೀರ್ ಬಂಧಿತ ಆರೋಪಿ. ಸಮೀರ್ ದೆಹಲಿಯಿಂದ ಕಡಿಮೆ ಬೆಲೆಗೆ ಪಿಸ್ತೂಲ್ ತಂದು ಬೆಂಗಳೂರಿನಲ್ಲಿ ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದ. ಅಲ್ಲದೇ ರೌಡಿಶೀಟರ್‌ಗಳಿಗೂ ಪಿಸ್ತೂಲ್ ಮಾರಾಟ ಮಾಡುತ್ತಿದ್ದ. ಈ ಹಿನ್ನೆಲೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿ ಸಮೀರ್‌ನನ್ನು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಪಾಕ್ ಶೆಲ್ ದಾಳಿಗೆ ಒಳಗಾಗಿದ್ದ ಪೂಂಚ್ ಗುರುದ್ವಾರಕ್ಕೆ ರಾಹುಲ್ ಗಾಂಧಿ ಭೇಟಿ
ಬಂಧಿತ ಆರೋಪಿಯಿಂದ 2 ನಾಡ ಪಿಸ್ತೂಲ್‌ನನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಆರೋಪಿಗೆ ಪಿಸ್ತೂಲ್ ಹೇಗೆ ಸಿಕ್ಕಿತು ಎಂಬುದರ ತನಿಖೆಗೆ ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: 2025ರ UG-CET ಫಲಿತಾಂಶ ಪ್ರಕಟ – 2,75,677 ವಿದ್ಯಾರ್ಥಿಗಳಿಗೆ ರ‍್ಯಾಂಕ್