ಮಂಡ್ಯ: ಬಿಜೆಪಿ (BJP) ನಾಯಕರು ರೌಡಿಶೀಟರ್‌ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದನ್ನು ತೀವ್ರವಾಗಿ ಖಂಡಿಸಿದ್ದ ಜೆಡಿಎಸ್ ನಾಯಕರು ಇದೀಗ ಮಂಡ್ಯ (Mandya) ಜಿಲ್ಲೆಯ ಮದ್ದೂರು (Madduru) ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ (DC Thammanna) ಜೆಡಿಎಸ್‌ಗೆ (JDS) ಮೂವರು ರೌಡಿಶೀಟರ್‌ಗಳನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ.
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆಯೇ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಬಲವರ್ಧನೆಗೆ ಹಲವು ಸ್ಟ್ಯಾಟರ್ಜಿಗಳನ್ನು ಮಾಡುತ್ತಿವೆ. ಈ ಹಿಂದೆ ಬಿಜೆಪಿ ಫೈಟರ್ ರವಿ ಹಾಗೂ ಇತರ ರೌಡಿಶೀಟರ್‌ಗಳನ್ನು ಪಕ್ಷಕ್ಕೆ ಸೆರ್ಪಡೆ ಮಾಡಿಕೊಂಡ ಬೆನ್ನಲ್ಲೇ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್‌ನ ನಾಯಕರು ವಾಗ್ದಾಳಿ ನಡೆಸಿದ್ದರು. ಇದೀಗ ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ. ತಮ್ಮಣ್ಣ ಜೆಡಿಎಸ್ ಪಕ್ಷಕ್ಕೆ ಮೂವರು ರೌಡಿಶೀಟರ್‌ಗಳನ್ನು ಸೇರ್ಪಡೆ ಮಾಡಿಕೊಳ್ಳುವುದರ ಮೂಲಕ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಮೋದಿ ಭೇಟಿ ಬೆನ್ನಲ್ಲೆ ಶಿರಾದಲ್ಲಿ ಟಿಕೆಟ್ ಫೈಟ್ ಜೋರು
Advertisement
Advertisement
ಮದ್ದೂರು ಪೊಲೀಸ್ ಠಾಣೆಯಲ್ಲಿ ಕೊಲೆ, ಗಲಭೆ, ಆಫ್ ಮರ್ಡರ್ ಕೇಸ್‌ಗಳಲ್ಲಿ ರೌಡಿಶೀಟರ್‌ಗಳಾಗಿರುವ ಪ್ರಶಾಂತ್@ ಕುಳ್ಳಿ, ವರುಣ್@ ಚೊತ್ತ ಹಾಗೂ ನಿತಿನ್ ಎಂಬ ಮೂವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕಳೆದ 8 ವರ್ಷಗಳಿಂದ ಈ ಮೂವರು ರೌಡಿಜಂನಲ್ಲಿ ಆಕ್ಟೀವ್ ಆಗಿದ್ದಾರೆ. ಇಷ್ಟು ದಿನ ಬಿಜೆಪಿ ಅವರು ರೌಡಿ ರಾಜಕೀಯ ಮಾಡ್ತಾ ಇದ್ದಾರೆ ಎಂದು ಮಾತನಾಡುತ್ತಿದ್ದ ಜೆಡಿಎಸ್ ನಾಯಕರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿವೆ. ಇದನ್ನೂ ಓದಿ: ಗ್ರಾಹಕರಿಗೆ ಮತ್ತೆ ಶಾಕ್: ರೆಪೋ ದರ ಹೆಚ್ಚಿಸಿದ RBI – ಸಾಲದ EMI ಹೆಚ್ಚಳ ಸಾಧ್ಯತೆ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k