ಹಾಸನ: ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ ಪ್ರಕರಣದ 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಚನ್ನರಾಯಪಟ್ಟಣ (Channarayapatna) ಹೆಚ್ಚುವರಿ ಅಪರ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ನಟೋರಿಯಸ್ ರೌಡಿ ಯಾಚೇನಹಳ್ಳಿ ಚೇತು ಸೇರಿ 9 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕೊಲೆ ನಡೆದು ಹತ್ತೇ ತಿಂಗಳಲ್ಲಿ ವಿಚಾರಣೆ ಮುಗಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಇದನ್ನೂ ಓದಿ: ಇಂದು ಹೆಚ್.ಡಿ.ರೇವಣ್ಣ ಜಾಮೀನು ಅರ್ಜಿ ವಿಚಾರಣೆ – ಮಾಜಿ ಮಂತ್ರಿಗೆ ಜೈಲಾ.. ಬೇಲಾ?
2023 ರ ಜುಲೈ 4 ರಂದು ಚನ್ನರಾಯಪಟ್ಟಣದ ಮುಖ್ಯ ರಸ್ತೆಯಲ್ಲಿ ರೌಡಿಶೀಟರ್ ಮಾಸ್ತಿಗೌಡ ಎಂಬಾತನನ್ನು ಆರೋಪಿಗಳು ಹತ್ಯೆಗೈದಿದ್ದರು. ಗುಲ್ಬರ್ಗಾ ಜೈಲಲ್ಲಿ ಇದ್ದುಕೊಂಡೇ ಮಾಸ್ತಿಗೌಡ ಎಂಬಾತನನ್ನು ಯಾಚೇನಹಳ್ಳಿ ಚೇತು ಕೊಲೆ ಮಾಡಿಸಿದ್ದ.
ಯಾಚೇನಹಳ್ಳಿ ಚೇತನ್, ಮಂಡ್ಯ ಶಿವು ಅಲಿಯಾಸ್ ಶಿವಕುಮಾರ್, ಉಲಿವಾಲ ಚೇತು, ರಾಕಿ ಅಲಿಯಾಸ್ ರಾಕೇಶ್, ಸುಮಂತ, ಭರತ್, ಹರೀಶ್, ಮೊಟ್ಟೆ ಅಲಿಯಾಸ್ ರಾಹುಲ್ ಮತ್ತು ರಾಘು ಅಲಿಯಾಸ್ ರಾಘವೇಂದ್ರಗೆ ಜೀವವಾಧಿ ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಕೋಮುಲ್‌ನಲ್ಲಿ ನೇಮಕಾತಿ ಹಗರಣ – ಶಾಸಕ ನಂಜೇಗೌಡ ಸೇರಿ ಪ್ರಭಾವಿ ನಾಯಕರ ವಿರುದ್ಧ ತನಿಖೆಗೆ ಪತ್ರ
ಪ್ರಕರಣದ ಮತ್ತಿಬ್ಬರು ಆರೋಪಿಗಳಿಗೆ ತಲಾ 2.5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇನ್‌ಸ್ಪೆಕ್ಟರ್ ವಸಂತ್‌ಕುಮಾರ್ ಕೆ.ಎಂ. ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿತ್ತು. ಚನ್ನರಾಯಪಟ್ಟಣ ಭಾಗದಲ್ಲಿ ರೌಡಿ ಚಟುವಟಿಕೆ ಮಟ್ಟಹಾಕುವ ನಿಟ್ಟಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ವಹಿಸಿದ್ದರು.