ಬೆಂಗಳೂರು: ಒಂಟಿ ಮನೆ ಟಾರ್ಗೆಟ್ ಮಾಡಿ ಡಕಾಯಿತಿ ಮಾಡಿದ್ದ ರೌಡಿ ಗ್ಯಾಂಗ್ ಬೆಂಗಳೂರಿನ (Bengaluru) ಸೋಲದೇವನಹಳ್ಳಿ ಪೊಲೀಸರ ಬಲೆಗೆ ಬಿದ್ದಿದೆ.
ಮೂವರು ರೌಡಿ ಶೀಟರ್‌ಗಳು ಪ್ಲ್ಯಾನ್ ಮಾಡಿ ಡಕಾಯಿತಿ ಮಾಡಿಸಿದ್ದರು. ಸದ್ಯ ಮೂವರು ರೌಡಿಗಳು ಸೇರಿದಂತೆ 8 ಆರೋಪಿಗಳು ಅರೆಸ್ಟ್ ಆಗಿದ್ದಾರೆ. ನಾಲ್ವರು ವಾಸವಿದ್ದ ಒಂದು ಮನೆಗೆ ನುಗ್ಗಿದ್ದ ಆರೋಪಿಗಳು, ಬಾಗಿಲು ತೆಗೆದ ತಕ್ಷಣ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆಯುತ್ತಿದ್ದರು. ಅಷ್ಟೇ ಅಲ್ಲದೇ ಮನೆಯಲ್ಲಿದ್ದವರ ಕೈ ಕಾಲು ಕಟ್ಟಿ ಹಾಕಿದ್ದರು. ವಿರೋಧ ಒಡ್ಡಿದ್ದ ಓರ್ವ ವ್ಯಕ್ತಿಗೆ ಆ ಗುಂಪು ಮಚ್ಚಿನಿಂದ ಹಲ್ಲೆ ಕೂಡ ಮಾಡಿತ್ತು. ಅದಾದ ಬಳಿಕ ಮನೆಯಲ್ಲಿ ಇದ್ದ ಹಣ ಮತ್ತು ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದರು. ಇದನ್ನೂ ಓದಿ: ನಾಳೆ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ – ಡಿಕೆಶಿ
Advertisement
Advertisement
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಸೋಲದೇವನಹಳ್ಳಿ ಪೊಲೀಸರು, ರೌಡಿ ಶೀಟರ್‌ಗಳಾದ ನಿತಿನ್ ಅಲಿಯಾಸ್ ಲೊಡ್ಡೆ, ಕಿಶನ್, ಶಿವರಾಜ್ ಅಲಿಯಾಸ್ ರಾಜ ಉರುಫ್ ಶಿವ ಸೇರಿದಂತೆ 8 ಆರೋಪಿಗಳನ್ನು ಅರೆಸ್ಟ್ (Arrest) ಮಾಡಿದ್ದಾರೆ. ಕಟ್ಟಡ ನಿರ್ಮಾಣ ಮಾಡುವ ಮೇಸ್ತ್ರಿಗಳು ವಾಸ ಮಾಡುತ್ತಿದ್ದ ಮನೆಯಲ್ಲಿ ದರೋಡೆ ಮಾಡಿದ್ದ ಅವರು, ಸದ್ಯ ಜೈಲು ಕಂಬಿ ಎಣಿಸುತ್ತಿದ್ದಾರೆ. ಇದನ್ನೂ ಓದಿ: ಉರಿಗೌಡ-ನಂಜೇಗೌಡ ಪ್ರಕರಣದಲ್ಲಿ ಹಿನ್ನಡೆ ಪ್ರಶ್ನೆಯೇ ಇಲ್ಲ- ಬೊಮ್ಮಾಯಿ