ಮುಂಬೈ: ಕೆಲವು ಜನರು ಎಣ್ಣೆಗಾಗಿ ತಮ್ಮ ಮನೆ, ಆಸ್ತಿ ಎಲ್ಲವನ್ನು ಮರೆಕೊಳ್ಳುತ್ತಾರೆ. ಅದಕ್ಕಾಗಿ ಎಷ್ಟೊ ಬಾರಿ ಕೊಲೆ ಸಹ ನಡೆದಿದೆ. ಆದರೆ ಇಲ್ಲೊಂದು ವಿಚಿತ್ರ ಹುಂಜ ಎಣ್ಣೆಗೆ ಮಾರುಹೋಗಿ ಅದರ ದಾಸನಾಗಿರುವ ವಿಚಿತ್ರ ಸ್ಟೋರಿಯೊಂದು ಮಹಾರಾಷ್ಟ್ರದ ಭಂಡಾರದಲ್ಲಿ ನಡೆದಿದೆ.
ಭಂಡಾರಾ ಜಿಲ್ಲೆಯ ಪಿಪಾರಿ ಗ್ರಾಮದಲ್ಲಿ, ತನ್ನ ಜೀವನದಲ್ಲಿ ಎಂದಿಗೂ ಮದ್ಯವನ್ನು ಮುಟ್ಟದ ಭಾವು ಕಟೋರೆ, ತನ್ನ ಹುಂಜಕ್ಕಾಗಿ ಮದ್ಯದ ಬಟಲಿ ಖರೀದಿಸಲು ಹೋಗುತ್ತಾರೆ. ಅದರಲ್ಲಿಯೂ ಈ ಹುಂಜಕ್ಕೆ ಲೋಕಲ್ ಲೋಕಲ್ ಎಣ್ಣೆ ಕೊಟ್ಟರೆ ಆ ಕಡೆ ತಿರುಗಿ ಸಜ ನೋಡುವುದಿಲ್ಲ. ಫಾರೀನ್ ಹೆಂಡ ಕೊಟ್ಟರೆ ಗಟಗಟ ಕುಡಿಯುತ್ತೆ. ಇದನ್ನೂ ಓದಿ: ಗ್ಯಾಂಗ್ ರೇಪ್: ಅಪ್ರಾಪ್ತ ಆರೋಪಿ ಫೋಟೋ ರಿಲೀಸ್ – ಬಿಜೆಪಿ ಶಾಸಕನ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Advertisement
Advertisement
ಏನಿದು ಸ್ಟೋರಿ?
ಕಟೋರೆ ಕೋಳಿ ಸಾಕಾಣಿಕೆ ವೃತ್ತಿ ಮಾಡುತ್ತಿದ್ದಾರೆ. ಇವರು ತಮ್ಮ ಫಾರ್ಮ್‍ನಲ್ಲಿ ಅನೇಕ ರೀತಿಯ ಕೋಳಿಗಳನ್ನು ಬೆಳೆಸುತ್ತಿದ್ದಾರೆ. ಆದರೆ, ಇಲ್ಲಿರುವ ಹುಂಜ ಮಾತ್ರ ರಾಯಲ್ ಜೀವನ ನಡೆಸುತ್ತಿದೆ. ಕಟೋರೆ ಹುಂಜಗೆ ಒಳ್ಳೆ ಆಹಾರವನ್ನು ಸಹ ನೀಡುತ್ತಿದ್ದಾರೆ. ಆದರೆ, ಒಂದು ದಿನ ಹುಂಜ ಅನಾರೋಗ್ಯಕ್ಕೀಡಾಗಿ ಯಾವುದೇ ಆಹಾರವನ್ನು ಮುಟ್ಟುತ್ತಿರಲಿಲ್ಲ.
Advertisement
ಹುಂಜ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿತ್ತು. ಈ ಹಿನ್ನೆಲೆ ಸ್ಥಳೀಯರ ಸಲಹೆಯ ಮೇರೆಗೆ ಕಟೋರೆ ಅವರು ಹುಂಜಗೆ ಮದ್ಯ ಸೇವನೆ ಮಾಡಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಹುಂಜ ಸಂಪೂರ್ಣ ಚೇತರಿಸಿಕೊಂಡು, ಸಹಜ ಜೀವನಕ್ಕೆ ಮರಳಿತು. ನಂತರ ಹುಂಜಗೆ ಹಿಂದೆ ಕೊಡುತ್ತಿದ್ದ ಆಹಾರವನ್ನು ಕೊಟ್ಟರೆ ಅದನ್ನು ಸೇವಿಸುತ್ತಿರಲಿಲ್ಲ, ನೀರನ್ನು ಸಹ ಕುಡಿಯುತ್ತಿರಲಿಲ್ಲ.
Advertisement
ಇದರಿಂದ ಮತ್ತೆ ಹುಂಜಗೆ ಏನಾಯಿತು ಎಂದು ಕಟೋರಿ ಅವರು ಯೋಚನೆಯಲ್ಲಿ ಮುಳುಗಿದ್ದಾರೆ. ಅದಕ್ಕೆ ಮಾರನೇ ದಿನ ಒಂದು ಗ್ಲಾಸ್ ಮದ್ಯವನ್ನು ಕೊಟ್ಟ ಕೂಡಲೇ ಹುಂಜ ಗಟಗಟನೆ ಕುಡಿದು ಬಿಟ್ಟಿತು. ಇದನ್ನು ನೋಡಿದ ಕಟೋರೆ ಒಂದು ಕ್ಷಣ ಶಾಕ್ ಆಗಿ ಹೋಗಿದ್ದಾರೆ. ಇದನ್ನೂ ಓದಿ: ಜಾಗತಿಕ ಪರಿಸರ ಉಪಕ್ರಮ ‘ಲೈಫ್ ಮೂವ್ಮೆಂಟ್’ಗೆ ಚಾಲನೆ ನೀಡಲಿರುವ ಮೋದಿ
ದಿನಕ್ಕೆ 2 ಸಾವಿರ ಖರ್ಚು
ಇದೀಗ ಹುಂಜಗೆ ನಿತ್ಯವೂ ಎಣ್ಣೆ ಬೇಕೇ ಬೇಕು. ಹುಂಜನಿಗೆಂದೇ ಪ್ರತಿ ತಿಂಗಳು 2 ಸಾವಿರ ರೂಪಾಯಿ ಖರ್ಚಾಗುತ್ತಿದೆ. ಈ ವೆಚ್ಚವನ್ನು ಭರಿಸಲು ಸಾಧ್ಯವಾಗದೇ ಕಟೋರೆ ಅವರು ಪಶುವೈದ್ಯರನ್ನು ಸಂಪರ್ಕಿಸಿದ್ದಾರೆ. ಮದ್ಯದ ವಾಸನೆಯ ವಿಟಮಿನ್ ಮಾತ್ರೆಗಳನ್ನು ನೀಡಲು ಪ್ರಾರಂಭಿಸುವುದು ಸೂಕ್ತ ಎಂದು ಕಟೋರೆಗೆ ವೈದ್ಯರು ಸಲಹೆ ನೀಡಿದ್ದಾರೆ. ಹುಂಜನ ಈ ವಿಚಿತ್ರ ಕ್ಷಣವನ್ನು ಕಣ್ಣುಂಬಿಕೊಳ್ಳಲು ಸಾಕಷ್ಟು ಜನರು ಕಟೋರೆ ಅವರ ಮನೆಯ ಮುಂದೆ ಪ್ರತಿದಿನ ಜಮಾಯಿಸುತ್ತಿದ್ದಾರೆ.