ದೊಡ್ಮನೆಯ ಆಟ ದಿನ ಕಳೆದಂತೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ವೀಕ್ಷಕರಿಗೆ ಟಿವಿ ಬಿಗ್ ಬಾಸ್(Bigg Boss) ನೋಡಲು ಮತ್ತಷ್ಟು ಉತ್ಸುಕರಾಗಿದ್ದಾರೆ. ಕ್ಯಾಪ್ಟೆನ್ಸಿ ವಿಚಾರವಾಗಿ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಟಾಪಟಿ ನಡೆಯುತ್ತಿದೆ. ಮೂರನೇ ವಾರದ ಕ್ಯಾಪ್ಟೆನ್ಸಿ ಟಾಸ್ಕ್‌ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಲು ಬಿಗ್ ಬಾಸ್ ಕಡೆಯಿಂದ ರೋಚಕ ಟಾಸ್ಕೊಂದು ಸಿಕ್ಕಿತ್ತು. ಚಿನ್ನದ ಗಣಿ ಟಾಸ್ಕ್‌ನಲ್ಲಿ ರೂಪೇಶ್ ಗಳಿಸಿದ ಚಿನ್ನವನ್ನು ನೇಹಾ ಮತ್ತು ಅಮೂಲ್ಯ ಕಳ್ಳತನ ಮಾಡಿದ್ದಾರೆ. ರೂಪೇಶ್ ಶೆಟ್ಟಿ (Roopesh Shetty), ಚಿನ್ನ ಸಿಗದೇ ಪರದಾಡಿದ್ದಾರೆ.
ರೂಪೇಶ್ ಶೆಟ್ಟಿ ಅವರು ಒಟಿಟಿಯಲ್ಲಿ ಗಮನ ಸೆಳೆದಿದ್ದರು. ಒಟಿಟಿಯ ಟಾಪರ್ ಆಗಿ ಹೊರಹೊಮ್ಮಿದ್ದರು. ಈಗ ಅವರು ಟಿವಿ ಸೀಸನ್‌ನಲ್ಲೂ ಅವರು ಮಿಂಚುತ್ತಿದ್ದಾರೆ. ಚಿನ್ನದ ಗಣಿ ಟಾಸ್ಕ್‌ನಲ್ಲಿ ರೂಪೇಶ್ ಶೆಟ್ಟಿ ಅವರು ಒಳ್ಳೆಯ ಪರ್ಫಾರ್ಮೆನ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಟಾಸ್ಕ್ ನಂತರದಲ್ಲಿ ಕಳ್ಳರ ಕಾಟ ಶುರುವಾಗಿದೆ. ಇದನ್ನೂ ಓದಿ:ಕನ್ನಡದ ಹೆಸರಲ್ಲಿ ರೋಲ್‌ಕಾಲ್: ಪ್ರೂವ್ ಮಾಡಿದರೆ ನೇಣಿಗೇರುವೆ ಎಂದ ರೂಪೇಶ್ ರಾಜಣ್ಣ
ಕರಾವಳಿ ಹುಡುಗ ರೂಪೇಶ್ ಬಳಿ ಒಂದೂವರೆ ಕೆ.ಜಿಗೂ ಅಧಿಕ ಚಿನ್ನ ಇತ್ತು. ಇದನ್ನು ಅಮೂಲ್ಯ ಹಾಗೂ ನೇಹಾ ಎಗರಿಸಿದ್ದರು. ರೂಪೇಶ್ ಹೋಗಿ ನೋಡಿದಾಗ ಅಲ್ಲಿ ಚಿನ್ನವೇ ಇರಲಿಲ್ಲ. ಇದನ್ನು ಕಂಡು ರೂಪೇಶ್‌ಗೆ ಶಾಕ್ ಆಗಿದೆ. ನನ್ನ ಚಿನ್ನವನ್ನು ನೀವು ಕದ್ದಿದ್ದೀರಾ ಎಂದು ಎಲ್ಲರಿಗೂ ಪ್ರಶ್ನೆ ಮಾಡಿದ್ದಾರೆ ರೂಪೇಶ್. ಆದರೆ, ನಿಜವಾದ ಕಳ್ಳ ಯಾರು ಎಂಬುದು ಗೊತ್ತಾಗದೇ ರೂಪೇಶ್ ಒದ್ದಾಡಿದ್ದಾರೆ.
ಮಾರನೇ ದಿನ ನೇಹಾ(Neha Gowda) ಹಾಗೂ ಅಮೂಲ್ಯ (Amulya Gowda) ಬಂದು ಚಿನ್ನ ಕದ್ದಿದ್ದು ನಾವೇ ಎಂದು ಒಪ್ಪಿಕೊಂಡಿದ್ದಾರೆ. ಜತೆಗೆ ಆ ಚಿನ್ನವನ್ನು ಮರಳಿ ರೂಪೇಶ್ ಶೆಟ್ಟಿಗೆ ನೀಡಿದ್ದಾರೆ. ಕಳೆದುಕೊಂಡ ಚಿನ್ನ ಸಿಕ್ಕ ಖುಷಿಯಲ್ಲಿದ್ದಾರೆ ರೂಪೇಶ್.