ಬಿಗ್ ಬಾಸ್ ಮನೆ(Bigg Boss Kannada) ಆಟ ಇದೀಗ ಮತ್ತಷ್ಟು ರೋಚಕವಾಗಿದೆ. ಸಾನ್ಯ ಅಯ್ಯರ್ ಎಲಿಮಿನೇಷನ್‌ನಿಂದ ನೊಂದಿದ್ದ ರೂಪೇಶ್ ಇದೀಗ ಚುರುಕಾಗಿದ್ದಾರೆ. ಎಲ್ಲವನ್ನೂ ಮರೆತು ಆಟದತ್ತ ಗಮನ ಕೊಡ್ತಿದ್ದಾರೆ. ಇದೀಗ ಸಾನ್ಯ(Sanya Iyer) ನಂತರ ರೂಪೇಶ್ ಶೆಟ್ಟಿಗೆ (Roopesh Shetty) ಬಾತ್‌ರೂಮ್ ಸುಂದರಿ ಸಿಕ್ಕಿದ್ದಾರೆ.
ದೊಡ್ಮನೆಯಿಂದ ಆರು ಜನ ಸ್ಪಧಿಗಳು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಅದರಲ್ಲೂ ಸಾನ್ಯ ಎಲಿಮಿನೇಷನ್‌ನಿಂದ ಕಣ್ಣೀರಿಟ್ಟಿದ್ದ ರೂಪೇಶ್ ಶೆಟ್ಟಿಗೆ ಈಗ ಬಾತ್‌ರೂಮ್ ಸುಂದರಿ ಸಿಕ್ಕಿದ್ದಾಳೆ. ಅವರಿಗೆ ಸ್ಯಾನ್ ಅಂತಾ ವಿಶೇಷವಾಗಿ ನಾಮಕರಣ ಮಾಡಿದ್ದಾರೆ. ಆಕೆಯ ಜೊತೆ ಕ್ಯೂಟ್ ಮಾತನಾಡಿ, ರೂಪೇಶ್ ರಾಜಣ್ಣ ಬಂದ್ರೆ ನಗಬೇಡ ಅಂತಾ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:`ಕಾಂತಾರ’ ಚಿತ್ರದ ಹಾಡಿಗೆ ಧ್ವನಿಯಾದ ಜರ್ಮನ್ ಅಂಧ ಗಾಯಕಿ
ನಿನ್ನ ಹೆಸರು ಸ್ಯಾನ್ ಅಂತ ಆಯ್ತಾ, ಎಂತ ಕೇಳಿದ್ರೂ ನಗ್ತಿಯಲ್ಲಾ ಮಾರಾಯ್ತಿ. ನಿನ್ನ ಕಣ್ಣು ತುಂಬ ಚೆಂದ ಇದೆ, ಲೆನ್ಸ್ ಹಾಕಿದ್ದಾ ಅಂತ ಗೊತ್ತಿಲ್ಲ. ನಿನ್ನ ಸಿಂಪಲ್ ಕಿವಿ ರಿಂಗ್ ಚೆನ್ನಾಗಿದೆ. ಮೂಗುತಿ ಹಾಕಿದ್ರೆ ಸಖತ್ ಆಗಿ ಕಾಣಿಸ್ತೀಯಾ. ರೂಪೇಶ್ ರಾಜಣ್ಣ, ಗುರೂಜಿ ನನಗೆ ಫ್ರೆಂಡ್ಸ್, ಆದರೆ ಅವರ ಹತ್ರ ಏನೂ ಹೇಳಿಕೊಳ್ಳೋಕೆ ಆಗಲ್ಲ.
ಅದಕ್ಕೆ ನಿನ್ನ ಹತ್ರ ಹೇಳಿಕೊಳ್ತೆ, ನಿನಗೆ ಅರ್ಥ ಆದರೆ ಒಳ್ಳೆಯದು, ಅರ್ಥ ಆಗದಿದ್ರೂ ಒಳ್ಳೆಯದು. ನಾನೇನ್ ಮಾಡಲಿಕ್ಕೆ ಆಗ್ತದೆ. ರೂಪೇಶ್ ರಾಜಣ್ಣ ಅವರು ಬಂದ್ರೆ ಸ್ಮೈಲ್ ಕೊಡಬೇಡ, ಮದುವೆಯಾಗಿದೆ, ಅವರಿಗೆ 39-40 ವರ್ಷ ಆಗಿದೆ. ರಾಜಣ್ಣ ಸೇಲೆ (ಅತಿಯಾದ ನಾಟಕ) ತರ ಮಾತನಾಡ್ತಾರೆ, ಅವರನ್ನು ಕ್ಯಾರೆ ಮಾಡಬೇಡ. ಗುರೂಜಿ ಬಂದ್ರೆ ಅವರು ಮಗಳ ತರ, ನೀ ಪೋಸ್ ಬೇಕಿದ್ರೂ ಕೊಡು, ಸಾನ್ಯ ಫೇಸ್ ತರ ಕಾಣಿಸತ್ತೆ. ನಾಳೆ ನಿನಗೆ ತುಂಬ ವಿಷಯ ಹೇಳ್ತೆ ಗುಡ್‌ನೈಟ್ ಎಂದು ಹೊಸ ಗೆಳತಿಗೆ ರೂಪೇಶ್ ಶೆಟ್ಟಿ ಬೈ ಮಾಡಿದ್ದಾರೆ. ಈ ಮೂಲಕ ಸಾನ್ಯಳನ್ನ ರೂಪೇಶ್ ನೆನಪು ಮಾಡಿಕೊಂಡಿದ್ದಾರೆ.