ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿರುವ `ಕಾಂತಾರ’ ಸಿನಿಮಾದ ಹಾಡುಗಳು ಕೂಡ ಚಿತ್ರದ ಕಥೆಯಂತೆ ಸೂಪರ್ ಡೂಪರ್ ಹಿಟ್ ಆಗಿದೆ. ವಿಶೇಷವಾಗಿ `ವರಾಹ ರೂಪಂ’ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ವಿವಾದಕ್ಕೂ ಗುರಿಯಾಗಿತ್ತು. ಇದೀಗ ಈ ಹಾಡಿಗೆ ಜರ್ಮನ್ ಅಂಧ ಗಾಯಕಿ ಹಾಡಿದ್ದಾರೆ. ಅವರು ಹಾಡಿರುವ ಈ ಹಾಡು ಎಲ್ಲೆಡೆ ಸದ್ದು ಮಾಡುತ್ತಿದೆ.
`ಕಾಂತಾರ’ ಚಿತ್ರ ಗಡಿ ದಾಟಿ ಕೋಟಿ ಕೋಟಿ ಕಲೆಕ್ಷನ್ ಮಾಡಿ, 400 ಕೋಟಿ ಕ್ಲಬ್ ಮಾಡುವತ್ತ ಮುನ್ನುಗ್ಗುತ್ತಿದೆ. ಅದರಲ್ಲೂ ಚಿತ್ರದ `ಸಿಂಗಾರ ಸಿರಿಯೇ’ ಮತ್ತು `ವರಾಹ ರೂಪಂ’ ಹಾಡುಗಳಿಗೆ ಅಭಿಮಾನಿಗಳು ಫಿದಾ ಅಗಿದ್ದರು. ಇದೀಗ ಜರ್ಮನ್ ಅಂಧ ಗಾಯಕಿ ಕೂಡ ಈ ಹಾಡನ್ನ ಇಷ್ಟಪಟ್ಟಿದ್ದಾರೆ. ಅದನ್ನೂ ಓದಿ:400 ಕೋಟಿ ಕ್ಲಬ್ ಸೇರಿ ದಾಖಲೆ ಬರೆದ ‘ಕಾಂತಾರ’ ಸಿನಿಮಾ
View this post on Instagram
ಜರ್ಮನ್ ಖ್ಯಾತ ಗಾಯಕಿ ಕ್ಯಾಸ್ಮಾ ಅವರು ಆಗಾಗ ಬೇರೆ ಬೇರೆ ದೇಶದ ಹಾಡುಗಳನ್ನ ಹಾಡುತ್ತಿರುತ್ತಾರೆ. ಹುಟ್ಟಿನಿಂದಲೇ ಅಂಧತ್ವದೊಂದಿಗೆ ಬಾಳುತ್ತಿರುವ ಗಾಯಕಿ ಕ್ಯಾಸ್ಮಾ ಕನ್ನಡದ `ವರಾಹ ರೂಪಂ’ ಹಾಡನ್ನ ಹಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 85000 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
View this post on Instagram
ಜರ್ಮನ್ ಅಂಧ ಗಾಯಕಿಯ ಬಾಯಲ್ಲೂ ಕನ್ನಡದ ಹಾಡನ್ನ ಕೇಳಿ, ಕನ್ನಡಿಗರು ಫಿದಾ ಆಗಿದ್ದಾರೆ. ಈ ಹಾಡು ಈಗ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.